Breaking News

ರಾಜ್ಯೋತ್ಸವ ಪ್ರಶಸ್ತಿ ಪಟ್ಟಿಯಲ್ಲಿ ಯಡವಟ್ಟು,ಬೆಳಗಾವಿಯಲ್ಲಿ ಗೊಂದಲ…!!

ರಾಜ್ಯ ಸರ್ಕಾರ ಇವತ್ತು ರಾಜ್ಯೋತ್ಸವ ಪ್ರಶಸ್ತಿ ವಿಜೇತರ ಪಟ್ಟಿ ಬಿಡುಗಡೆ ಮಾಡಿದೆ.ಈ ಪಟ್ಟಿಯಲ್ಲಿ ಬೆಳಗಾವಿಯ ಶಂಕರ ಚಚಡಿ ಎನ್ನುವ ಹೆಸರೂ ಇದೆ,ಈ ಹೆಸರಿನ ಖ್ಯಾತ ಸಾಹಿತಿ ಬೈಲಹೊಂಗಲನಲ್ಲಿ ಇದ್ದಾರೆ.ಆದ್ರೆ ಬೆಳಗಾವಿಯ ಹಿರಿಯ ಕನ್ನಡಪರ ಹೋರಾಟಗಾರ ಶಂಕರ ಬುಚಡಿ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.ಸರ್ಕಾರ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಹೆಸರು ತಪ್ಪಾಗಿದೆ.ಶಂಕರ ಬುಚಡಿ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ ಎಂದು ಹೇಳಲಾಗುತ್ತಿದೆ.ಶಾಸಕ ಅಭಯ ಪಾಟೀಲ ಅವರು ಶಂಕರ ಬುಚಡಿ ಅವರ ಮನೆಗೆ ಭೇಟಿ ನೀಡಿ ಶಂಕರ ಬುಚಡಿ ಅವರನ್ನು ಅಭಿನಂದಿಸಿದ್ದು ರಾಜ್ಯೋತ್ಸವ ಪ್ರಶಸ್ತಿ ಲಭಿಸಿದ್ದು ಶಂಕರ ಚಚಡಿ ಅವರಿಗಲ್ಲ,ಪ್ರಶಸ್ತಿ ಲಭಿಸಿದ್ದು ಶಂಕರ ಬುಚಡಿ ಅವರಿಗೆ ಎಂದು ಹೇಳಲಾಗುತ್ತಿದೆ. ವಡಗಾವಿಯಲ್ಲಿ ಶಂಕರ ಬುಚಡಿ ಎಂಬ ಹೆಸರಿನವರು ಇಬ್ಬರು ಇದ್ದಾರೆ.ಒಬ್ಬರು ಕನ್ನಡಪರ ಹೋರಾಟಗಾರರು,ಇನ್ನೊಬ್ಬರು ಸಾಹಿತಿಗಳು, ಇಬ್ಬರಲ್ಲಿ ಯಾರಿಗೆ ಪ್ರಶಸ್ತಿ ಅನ್ನೋದು ಗೊಂದಲ ಸೃಷ್ಠಿಯಾಗಿದೆ.ಈ ಕುರಿತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಯಡವಟ್ಟಿನಿಂದ ಬೆಳಗಾವಿಯಲ್ಲಿ ಗೊಂದಲ ನಿರ್ಮಾಣವಾಗಿದೆ.

ಬೆಳಗಾವಿ: ಈ ಬಾರಿ ಕರ್ನಾಟಕ ರಾಜ್ಯೋತ್ಸವದಲ್ಲಿ ಗಡಿಜಿಲ್ಲೆ ಬೆಳಗಾವಿಯ ನಾಲ್ವರು ರಾಜ್ಯಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಸ್ವೀಕರಿಸಲಿದ್ದಾರೆ.

ಶಿಲ್ಪಕಲೆ ಕ್ಷೇತ್ರದಲ್ಲಿ ಹನುಮಂತ ಹುಕ್ಕೇರಿ ಪ್ರಶಸ್ತಿಗೆ ಭಾಜನವಾಗಿದ್ದರೆ, ಸಾಹಿತ್ಯ ಕ್ಷೇತ್ರದಲ್ಲಿ ಶಂಕರ ಚಚಡಿ, ಅಶೋಕ ಬಾಬು ನೀಲಗಾರ್‌ ಆಯ್ಕೆಯಾಗಿದ್ದಾರೆ. ಕ್ರೀಡಾ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಅಂಗವಿಕಲ ಈಜುಪಟು ರಾಘವೇಂದ್ರ ಅಣ್ವೇಕರ್‌ ಅವರಿಗೆ ಪ್ರಶಸ್ತಿ ನೀಡಲಾಗಿದೆ.ಕಳೆದ ವರ್ಷ ಇಬ್ಬರಿಗೆ ರಾಜ್ಯಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಸಿಕ್ಕಿತ್ತು. ಈ ಬಾರಿ ಜಿಲ್ಲೆಯ ನಾಲ್ವರಿಗೆ ಪ್ರಶಸ್ತಿ ಸಿಕ್ಕಿರುವುದು ಗಡಿ ಕನ್ನಡಿಗರ ಸಂತಸ ಹೆಚ್ಚಿಸಿದೆ.

ಆರ್‌ಸಿಯುನಲ್ಲಿ ಕ್ಲರಿಕಲ್‌ ಸ್ಟಾಫ್‌ ಆಗಿರುವ ರಾಘವೇಂದ್ರ, ಅಂತಾರಾಷ್ಟ್ರೀಯ ಈಜು ಟೂರ್ನಿಯಲ್ಲಿ 28, ರಾಷ್ಟ್ರಮಟ್ಟದ 100 ಪದಕ ಗಳಿಸಿದ್ದಾರೆ.ಗೋಕಾಕ ತಾಲೂಕಿನ ಶಿಂಧಿಕುರಬೇಟ ಗ್ರಾಮದ ಅಶೋಕ ಬಾಬು ನೀಲಗಾರ್‌(67) ಕಾರ್ಮಿಕರಾಗಿದ್ದರೂ, 28 ಕಾದಂಬರಿ ರಚಿಸಿದ್ದಾರೆ.

ಚಿಕ್ಕೋಡಿ ತಾಲ್ಲೂಕಿನ ಜಾಗನೂರಿನ ಹನುಮಂತ ಬಾಳಪ್ಪ ಹುಕ್ಕೇರಿ(63) ಶಿಲ್ಪಕಲೆಯಲ್ಲಿ ಅಪಾರ ಸಾಧನೆ ತೋರಿದ್ದಾರೆ. ಉಳಿಯನ್ನೇ ನಂಬಿ ಬದುಕಿದವರು. ನಾಲ್ಕು ತಲೆಮಾರುಗಳಿಂದ ಶಿಲ್ಪಕಲೆ ಕೆತ್ತನೆಯೇ ಇವರ ಜೀವನಾಧಾರ. ಈಗ ಅವರ ಮಕ್ಕಳಿಗೂ ಉಳಿ ಹಿಡಿಯುವುದನ್ನೇ ಹೇಳಿಕೊಟ್ಟಿದ್ದಾರೆ.

Check Also

ಬೆಳಗಾವಿ ಜಿಲ್ಲಾಧಿಕಾರಿಗಳ ಇದೊಂದು ಕಾರ್ಯ ಶ್ಲಾಘನೀಯ

ಬೆಳಗಾವಿ- ಬೆಳಗಾವಿ ಜಿಲ್ಲಾಧಿಕಾರಿ ಮಹ್ಮದ್ ರೋಷನ್ ಅವರು ಮಾಡಿರುವ ಇದೊಂದು ಕಾರ್ಯ ಶ್ಲಾಘನೀಯ ಅದು ಏನಂದ್ರೆ ಸುವರ್ಣಸೌಧಕ್ಕೆ ಪಾಸ್ ಪಡೆದು …

Leave a Reply

Your email address will not be published. Required fields are marked *