ಬೆಳಗಾವಿ-ಕಿತ್ತೂರು ತಹಶಿಲ್ದಾರ ಮತ್ತು ಗುಮಾಸ್ತ ಲೋಕಾಯುಕ್ತ ಬಲೆಗೆ ವಿಚಾರವಾಗಿ,ಆರೋಪಿಗಳನ್ನು ಲೋಕಾಯುಕ್ತ ಸಿಬ್ಬಂಧಿಗಳು ಹಿಂಡಲಗಾ ಜೈಲಿಗೆ ಕರೆತಂದಿದ್ದಾರೆ.
ಬೆಳಗಾವಿಯ ಬಿಮ್ಸ್ ನಲ್ಲಿ ಆರೋಗ್ಯ ತಪಾಸಣೆ ಬಳಿಕ ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಾಗಿದೆ.ಸೋಮವಾರದವರೆಗೂ ನ್ಯಾಯಾಂಗ ಬಂಧನ ನೀಡಿದ ನ್ಯಾಯಾಧೀಶರು,ಸೋಮವಾರ ಮತ್ತೆ ನ್ಯಾಯಾಲಯದ ಮುಂದೆ ಹಾಜರುಪಡಿಸುವಂತೆ ಸೂಚನೆ ನೀಡಿದ್ದಾರೆ.
ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ಹಿಂಡಲಗಾ ಜೈಲಿಗೆ ಆರೋಪಿಗಳನ್ನು ಶಿಪ್ಟ್ ಮಾಡಲಾಗಿದೆ.ತಹಶಿಲ್ದಾರ ಸೋಮಲಿಂಗ ಹಾಲಗಿ, ಗುಮಾಸ್ತ ಪ್ರಸನ್ನ ಜಿ. ಹಿಂಡಲಗಾ ಜೈಲಿಗೆ ಶಿಪ್ಟ್ ಆಗಿದ್ದಾರೆ.10ಎಕರೆ ಜಮೀನಿನ ಖಾತಾ ಬದಲಾವಣೆ ಮಾಡಿಕೊಡಲು ಹಣಕ್ಕೆ ಬೇಡಿಕೆ ಇಟ್ಟಿದ್ದ ಇಬ್ಬರು2ಲಕ್ಷ ಹಣ ಪಡೆಯುವಾಗ ಬಲೆಗೆ ಬಿದ್ದಿದ್ದ ತಹಶಿಲ್ದಾರ, ಗುಮಾಸ್ತ ಈಗ ಜೈಲುಪಾಲಾಗಿದ್ದಾರೆ.
ಅರ್ಜಿದಾರನ ತಂದೆ ಹೃದಯಾಘಾತದಿಂದ ವಿಧಿವಶ….
ಕಿತ್ತೂರು ತಹಶಿಲ್ದಾರ್, ಗುಮಾಸ್ತ ಲೋಕಾಯುಕ್ತ ಬಲೆಗೆ ವಿಚಾರವಾಗಿ ಮತ್ತೊಂದು ಘಟನೆ ನಡೆದಿದೆ.ಲೋಕಾಯುಕ್ತ ಠಾಣೆಗೆ ದೂರು ನೀಡಿದ್ದ ಅರ್ಜಿದಾರನ ತಂದೆ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ.ಕಿತ್ತೂರು ತಾಲೂಕಿನ ಖೋದಾನಪುರ ಗ್ರಾಮದಲ್ಲಿ ಬಾಪುಸಾಹೇಬ್ ಇನಾಮದಾರ್ ಹೃದಯಘಾತದಿಂದ ಸಾವನ್ನೊಪ್ಪಿದ್ದಾರೆ.
10 ಎಕರೆ ಜಮೀನಿನ ಖಾತಾ ಬದಲಾವಣೆ ಸಂಬಂಧ ಲಂಚ ಕೇಳಿದ್ದ ತಹಶಿಲ್ದಾರ್,ಈ ಸಂಬಂಧ ಲೋಕಾಯುಕ್ತ ಠಾಣೆಗೆ ದೂರು ನೀಡಿದ್ದ ರಾಜೇಂದ್ರ ಇನಾಮದಾರ್ ಅವರ ತಂದೆ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ.
2 ಲಕ್ಷ ಪಡೆಯುವಾಗ ತಹಶಿಲ್ದಾರ್ ಸೋಮಲಿಂಗಪ್ಪ ಹಾಲಗಿ, ಗುಮಾಸ್ತ ಪ್ರಸನ್ನ ಜಿ ಲೋಕಾಯುಕ್ತ ಬಲೆಗೆ ಬಿದ್ದಿದ್ದರು.ನಿನ್ನೆ ತಡರಾತ್ರಿ ದಾಳಿ ನಡೆಸಿದ್ದ ಬೆಳಗಾವಿ ಲೋಕಾಯುಕ್ತ ಪೊಲೀಸರು ಇಬ್ಬರು ಅಧಿಕಾರಿಗಳನ್ನು ವಶಕ್ಕೆ ಪಡೆದಿದ್ದರು.ತಡರಾತ್ರಿ ಕಿತ್ತೂರು ತಾಲ್ಲೂಕಿನಾದ್ಯಂತ ಕಾಡ್ಗಿಚ್ಚಿನಂತೆ ಹಬ್ಬಿದ್ದ ಈ ಸುದ್ದಿಯ ಆಘಾತಕ್ಕೆ ಒಳಗಾದ ಬಾಪುಸಾಹೇಬ್ ಇನಾಮದಾರ್ ಹೃದಯಾಘಾತದಿಂದ ಸಾವನ್ನೊಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ.