Home / Breaking News / ಮಹಾರಾಷ್ಟ್ರದಲ್ಲಿ ಕರ್ನಾಟಕದ ಬಸ್ ಮೇಲೆ ಕಲ್ಲು ತೂರಾಟ..

ಮಹಾರಾಷ್ಟ್ರದಲ್ಲಿ ಕರ್ನಾಟಕದ ಬಸ್ ಮೇಲೆ ಕಲ್ಲು ತೂರಾಟ..

 

ಬೆಳಗಾವಿ-ಮಹಾರಾಷ್ಟ್ರದಲ್ಲಿ ಕರ್ನಾಟಕ ಸಾರಿಗೆ ಬಸ್‌ ಮೇಲೆ ತೂರಿ ಮರಾಠಿ ಭಾಷಿಕ ಪುಂಡರು ಪುಂಡಾಟಿಕೆ ನಡೆಸಿದ್ದಾರೆ.ಕರ್ನಾಟಕ ಮಹಾರಾಷ್ಟ್ರ ಗಡಿವಿವಾದ ತಾರಕಕ್ಕೇರಿದ್ದು ಮಹಾರಾಷ್ಟ್ರದಲ್ಲಿ ಈ ವಿಚಾರದಲ್ಲಿ ಗೂಂಡಾಗಿರಿ ಶುರುವಾಗಿದೆ.

ಮಿರಜ್ ಕಾಗವಾಡ‌ ಮಧ್ಯೆದ ಮಾರ್ಗದಲ್ಲಿ ಕರ್ನಾಟಕ ಬಸ್ ಗೆ ಕಲ್ಲು ತೂರಾಟ ನಡೆಸಿರುವ ಗೂಂಡಾಗಳು ಮತ್ತೆ ಪುಂಡಾಟಿಕೆ ನಡೆಸಿದ ದ್ದಾರೆ.ಪುನೆಯಿಂದ ಅಥಣಿ ಗೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್,ಕಳೆದ ರಾತ್ರಿ 10.30ರ ಸುಮಾರಿಗೆ ರನ್ನಿಂಗ್ ಅಲ್ಲಿದ್ದ ಬಸ್ ಮೇಲೆ ಕಲ್ಲು ತೂರಾಟ ನಡೆದಿದೆ

ಬಸ್ಸಿನ ಮುಂಭಾಗದ ಗಾಜು ಜಖಂಗೊಂಡಿದೆ
ಬೆಳಗಾವಿ ಜಿಲ್ಲೆಯ ಅಥಣಿ ಡಿಪೋಗೆ ಸೇರಿದ ಬಸ್ ಇದಾಗಿದೆ.ಕರ್ನಾಟಕ ಬಸಗಳಿಗೆ ಕಲ್ಲು ತೂರಾಟ ಹಿನ್ನೆಲೆ ಬಸ್ ಕಾರ್ಯಾಚರಣೆ ಸ್ಥಗಿತವಾಗಿದೆ‌
ಕಾಗವಾಡ-ಮಿರಜ್ ಮಾರ್ಗವಾಗಿ ಸಂಚರಿಸುವ ಎಲ್ಲಾ ಕರ್ನಾಟಕ ಬಸ್ ಸಂಚಾರ ಸ್ಥಗಿತಗೊಳಿಸಲಾಗಿದೆ.
ಬೆಳಗಾವಿ ಜಿಲ್ಲಾ ಪೊಲೀಸರ ಸೂಚನೆ ಮೇರೆಗೆ ಬಸ್ ಸೇವೆ ಸ್ಥಗಿತಗೊಂಡಿದೆ

Check Also

ಬೆಳಗಾವಿಯ ಬಿಜೆಪಿ ನಗರಸೇವಕ ಅಭಿಜಿತ್ ಜವಳಕರ್ ಬಂಧನ..

ಬೆಳಗಾವಿ- ಮೋಬೈಲ್ ಟಾವರ್ ಅಳವಡಿಕೆಗೆ ಸಂಭಂಧಿಸಿದಂತೆ ಇತ್ತೀಚಗೆ ನಗರಸೇವಕ ಅಭಿಜಿತ್ ಜವಳಕರ್ ಮತ್ತು ರಮೇಶ್ ಪಾಟೀಲ ನಡುವೆ ವಾಗ್ವಾದ ನಡೆದು …

Leave a Reply

Your email address will not be published. Required fields are marked *