Breaking News

ಬೆಳಗಾವಿಯಲ್ಲಿ ನೀರಿನ ಪೈಪ್ ಗಳಿಗೆ ಆಕಸ್ಮಿಕ ಬೆಂಕಿ..

ಬೆಳಗಾವಿ- ಬೆಳಗಾವಿ ಮಹಾನಗರಕ್ಕೆ ನಿರಂತರವಾಗಿ ನೀರು ಪೂರೈಸುವ 24*7 ಯೋಜನೆಯ ಕಾಮಗಾರಿ ನಡೆದಿದ್ದು ಕಣಬರ್ಗಿಯಲ್ಲಿ ಅಳವಡಿಸಲು ತರಲಾಗಿದ್ದ ಪೈಪುಗಳಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಪೈಪುಗಳು ಸುಟ್ಟು ಭಸ್ಮವಾಗಿವೆ.

ಈ ಘಟನೆ ಇಂದು ಬೆಳಗಿನ ಜಾವ ಮೂರು ಗಂಟೆಗೆ ಬೆಳಗಾವಿಯ ಕಣಬರ್ಗಿಯ ಜ್ಯೋತಿರ್ಲಿಂಗ್ ಗಲ್ಲಿಯ ಬಳಿ ನಡೆದಿದ್ದು ಮೂವತ್ರಕ್ಕೂ ಹೆಚ್ಚು ಪಿಯುಸಿ ಪೈಪ್ ಗಳು ಬೆಂಕಿಗಾಹುತಿಯಾಗಿವೆ.

ಎಲ್ ಆ್ಯಂಡ್ ಟಿ ಕಂಪನಿ ಕಣಬರ್ಗಿಯಲ್ಲಿ ಅಳವಡಿಸಲು ಪೈಪುಗಳನ್ನು ದಾಸ್ತಾನು ಮಾಡಿತ್ತು ನಿನ್ಬೆ ಮದ್ಯ ರಾತ್ರಿ 3 ಗಂಟೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಪೈಪುಗಳು ಹೊತ್ತಿ ಉರಿದಿವೆ.ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ, ಬೆಂಕಿಯನ್ನು ಆರಿಸಿ ಹೆಚ್ಚಿನ ಅನಾಹುತ ತಪ್ಪಿಸಿದೆ.ಸುತ್ತಮುತ್ತಲು ಮನೆಗಳು ಇಲ್ಲದಿರುವದರಿಂದ ಹೆಚ್ಚಿನ ಅನಾಹುತ ಆಗಿಲ್ಲ.ಪೋಲೀಸ್ರು ಸಹ ಸ್ಥಳಕ್ಕೆ ಭೇಟಿ ನೀಡಿ ಪರಶೀಲನೆ ಮಾಡಿದ್ದಾರೆ.

Check Also

ಆಟದ ಜಗಳದಲ್ಲಿ ಕೊಲೆಯಾದ ಆಟಗಾರ….!!

ಬೆಳಗಾವಿ -ಆಟದಲ್ಲಿ ಆರಂಭವಾದ ಸಣ್ಣ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ .ಈ ಜಗಳದಲ್ಲಿ ರನ್ನೀಂಗ್ ಚಾಂಪಿಯನ್‌ ಆಟಗಾರನ ಕೊಲೆಯಾಗಿದ್ದು ದುರ್ದೈವದ ಸಂಗತಿಯಾಗಿದೆ. …

Leave a Reply

Your email address will not be published. Required fields are marked *