ಬೆಳಗಾವಿ- ಬೆಳಗಾವಿಯ ಸುವರ್ಣವಿಧಾನಸೌಧ ದಲ್ಲಿ ಡಿಸೆಂಬರ್ 19 ರಿಂದ ವಿಧಾನಮಂಡಲದ ಚಳಿಗಾಲದ ಅಧಿವೇಶ ನಡೆಯುತ್ತಿದ್ದು, ಇದನ್ನು ಸಹಿಸಲಾಗದ ನಾಡದ್ರೋಹಿ ಎಂಇಎಸ್ ನಾಯಕರು ಈಗ ತಮ್ಮ ಹೋರಾಟ,ಚೀರಾಟವನ್ನು ಮಹಾರಾಷ್ಟ್ರದ ಕೊಲ್ಹಾಪೂರಕ್ಕೆ ಶಿಪ್ಟ್ ಮಾಡಿದ್ದಾರೆ.
ಇಂದು ಕೊಲ್ಹಾಪೂರದಲ್ಲಿ ಬೆಳಗಾವಿಯ ಗಡಿವಿವಾದ ಸೇರಿದಂತೆ ಹಲವಾರು ವಿಚಾರಗಳನ್ನು ಮುಂದಿಟ್ಟುಕೊಂಡು, ಶಿವಸೇನೆಯ ಠಾಕ್ರೆಬಣ, ಶರದ್ ಪವಾರ ಅವರ ರಾಷ್ಟ್ರವಾದಿ ಕಾಂಗ್ರೆಸ್ ಮತ್ತು ಮಹಾರಾಷ್ಟ್ರದ ಕಾಂಗ್ರೆಸ್ ಸೇರಿಕೊಂಡು ಅಸ್ತಿತ್ವಕ್ಕೆ ತಂದಿದ್ದ ಮಹಾರಾಷ್ಟ್ರ ಮಹಾ ವಿಕಾಸ ಅಘಾಡಿ ವತಿಯಿಂದ ಬೃಹತ್ತ್ ಪ್ರತಿಭಟನಾ ರ್ಯಾಲಿ ಹಮ್ಮಿಕೊಳ್ಳಲಾಗಿತ್ತು.
ಮಹಾರಾಷ್ಟ್ರದಲ್ಲಿ ವಿರೋಧಪಕ್ಷದ ಸ್ಥಾನದಲ್ಲಿರುವ ಮಹಾ ವಿಕಾಸ್ ಅಘಾಡಿ, ಕೊಲ್ಹಾಪೂರದಲ್ಲಿ ಹಮ್ಮಿಕೊಂಡ ಪ್ರತಿಭಟನಾ ರ್ಯಾಲಿಯಲ್ಲಿ ಭಾಗವಹಿಸಲು ಬೆಳಗಾವಿಯ ನೂರಾರು ಜನ ಎಂಇಎಸ್ ನಾಯಕರು ಇಂದು ಕೊಲ್ಹಾಪೂರಕ್ಕೆ ತೆರಳಿದ್ದರು.
ಶುಭಂ ಶಿಳಕೆ,ದೀಪಕ ದಳವಿ, ಮನೋಹರ ಕಿಣೇಕರ ಶಿವಾಜಿ ಸುಂಠಕರ,ವಿಕಾಸ್ ಕಲಘಟಗಿ ಸೇರಿದಂತಡ ನೂರಾರು ಜನ ಎಂಇಎಸ್ ಕಾರ್ಯಕರ್ತರು ಇಂದು ಮಹಾರಾಷ್ಟ್ರದ ಅಘಾಡಿಯ ರ್ಯಾಲಿಯಲ್ಲಿ ಭಾಗವಹಿದ್ದರು,ಈ ಎಂಇಎಸ್ ನಾಯಕರು ಮಹಾರಾಷ್ಟ್ರದ ನಾಯಕರು ಬೆಳಗಾವಿಯಲ್ಲಿ ನಡೆಯುವ ಮರಾಠಿ ಮಹಾ ಮೇಳಾವ್ ದಲ್ಲಿ ಭಾಗವಹಿಸುವಂತೆ ಮನವಿ ಮಾಡಿಕೊಂಡಿದ್ದಾರೆ.
ಕರ್ನಾಟಕ ಸರ್ಕಾರ ಬೆಳಗಾವಿ ಮರಾಠಿ ಮಹಾ ಮೇಳಾವ್ ನಡೆಸಲು ಅನುಮತಿ ನೀಡಲಿ ಅಥವಾ ಬಿಡಲಿ ನಾವು ಮೇಳಾವ್ ದಲ್ಲಿ ಭಾಗವಹಿಸುತ್ತೇವೆ ಎಂದು ಮಹಾರಾಷ್ಟ್ರದ ಎಂಇಎಸ್ ನಾಯಕರಿಗೆ ಭರವಸೆ ನೀಡಿದ್ದಾರೆ ಎಂದು ಗೊತ್ತಾಗಿದೆ