ಬೆಳಗಾವಿ-ಬೆಳಗಾವಿಯಲ್ಲಿ ನಿನ್ನೆ ನಡೆಯಬೇಕಿದ್ದ ಮರಾಠಿ ಮೇಳಾವ್ ಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಬ್ರೇಕ್ ಹಾಕಿ ಹೊಸ ಇತಿಹಾಸ ನಿರ್ಮಿಸಿದ್ದು,ಇದರ ಬಿಸಿ ಮಹಾರಾಷ್ಟ್ರದ ನಾಯಕರಿಗೂ ತಟ್ಟಿದೆ. ಮಹಾರಾಷ್ಟ್ರ ಡಿಸಿಎಂ ದೇವೇಂದ್ರ ಫಡ್ನವೀಸ್ ಕರ್ನಾಟಕ ಸರ್ಕಾರದ ಕ್ರಮಕ್ಕೆ ಕಿಡಿಕಾರಿದ್ದಾರೆ.
ಕರ್ನಾಟಕ ಮಹಾರಾಷ್ಟ್ರ ಗಡಿ ವಿವಾದ ಮುಂದಿಟ್ಟುಕೊಂಡು
ನಿನ್ನೆ ಎಂಇಎಸ್ ಮಹಾಮೇಳಾವ್‌ಗೆ ಬ್ರೇಕ್ ಹಾಕಿರುವದಕ್ಕೆ ಮಹಾರಾಷ್ಟ್ರಮತ್ತೆ ಕಾಲು ಕೆದರಿ ಜಗಳಕ್ಕೆ ನಿಂತಿದೆ.
ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್‌ರಿಂದ ಕ್ಯಾತೆ ಶುರುವಾಗಿದೆ.
ಗಡಿ ಭಾಗದ ಮರಾಠಿಗರ ಜೊತೆಗೆ ಮಹಾರಾಷ್ಟ್ರ ಸರ್ಕಾರವಿದೆ.ಮರಾಠಿ ಭಾಷಿಕರು ಮೇಲೆ ಅನ್ಯಾಯ ಆಗದಂತೆ ನಾವು ನೋಡಿಕೊಳ್ಳುತ್ತೇವೆ.
ಮಹಾಮೇಳಾವ್‌ಗೆ ಅವಕಾಶ ಕೊಡದಿರುವುದು ಸರಿಯಲ್ಲ.ಗಡಿ ವಿವಾದ ವಿಚಾರದಲ್ಲಿ ಮಹಾರಾಷ್ಟ್ರ ಯಾವುದೇ ಕಾರಣಕ್ಕೂ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ.
ಮಹಾರಾಷ್ಟ್ರ ಮುಖ್ಯಮಂತ್ರಿ ಈಗಾಗಲೇ ಜತ್ ಸೇರಿದಂತೆ ಗಡಿ ಭಾಗದ ನೀರಾವರಿ ಯೋಜನೆಗೆ 2ಸಾವಿರ ಕೋಟಿ ಘೋಷಿಸಿದ್ದಾರೆ.ಮಹಾರಾಷ್ಟ್ರ ಗಡಿಭಾಗದ ಮರಾಠಿಗರ ಜೊತೆಗಿದೆ ಎಂದು ಫಡ್ನವೀಸ್ ಹೇಳಿದ್ದಾರೆ.
ಸಿಎಂ ಬಸವರಾಜ ಬೊಮ್ಮಾಯಿ ಅವರೇ ಗೃಹ ಸಚಿವ ಅಮಿತ್ ಶಾ ಮುಂದೆ ಹೇಳಿದ್ದಾರೆ.ಗಡಿ ವಿವಾದ ವಿಚಾರವಾಗಿ ಮಾಡಿದ್ದ ಟ್ವಿಟ್ ನನ್ನದಲ್ಲ ಅಂತಾ ಹೇಳಿದ್ದಾರೆ.
ಸಿಎಂ ಹೆಸರಿನ ಟ್ವಿಟ್ ಬಗ್ಗೆ ಏನು ಕ್ರಮ ತೆಗೆದುಕೊಂಡಿದ್ದಾರೆ ಅನ್ನೋದನ್ನ ಸಿಎಂ ಬಸವರಾಜ ಅವರನ್ನ ಕೇಳ್ತೆವಿ ಎಂದ ಫಡ್ನವಿಸ್ ಮಹಾರಾಷ್ಟ್ರದ ನಾಗಪೂರದಲ್ಲಿ ಮಾದ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.