ಬೆಳಗಾವಿ- ಬುಧವಾರ ಸುವರ್ಣ ಸೌಧದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ, ಮಾಜಿ ಸಚಿವ ಬಸನಗೌಡ ಪಾಟೀಲ್ ಯತ್ನಾಳ್ ಅವರು ತಮ್ಮ ಎಂದಿನ ಶೈಲಿಯಲ್ಲಿ ರಸವತ್ತಾಗಿ ಮಾತನಾಡಿದ್ದಾರೆ..
ಪಂಚಮಸಾಲಿ ಮೀಸಲಾತಿಯ ಬಗ್ಗೆ ಮಾತನಾಡಿದ ಅವರು ಮುಖ್ಯಮಂತ್ರಿಗಳ ಮೇಲೆ ಸಂಪೂರ್ಣ ವಿಶ್ವಾಸ ಇದೆ, ನಾಳೆಯೇ ನಮ್ಮ ಸಮುದಾಯದ ಮೀಸಲಾತಿ ಘೋಷಣೆ ಆಗುತ್ತದೆ, ಅದರಲ್ಲಿ ಎರಡನೇ ಮಾತೇ ಇಲ್ಲ ಎಂದರು..
ಇನ್ನು ಮೀಸಲಾತಿಯ ವಿಚಾರವಾಗಿ ತಮ್ಮ ಬಗ್ಗೆ ವ್ಯಂಗ್ಯವಾಡಿದರು ಸಚಿವ ನಿರಾಣಿ ಅವರ ಬಗ್ಗೆ ಮಾತನಾಡುತ್ತಾ ನಿರಾಣಿ ನಮ್ಮ ಮುಂದೆ ಬಚ್ಚಾ, ನಾವು ಬಿಜೆಪಿ ಪಕ್ಷ ಕಟ್ಟುವಾಗ ನನಗೆ ಶಾಸಕ ಟಿಕೆಟ್ ಬೇಕು ಅಂತ ನಮ್ಮ ಮನೆಗೆ ಬರುತ್ತಿದ್ದ ಇದೆ ನಿರಾಣಿ ಎಂದರು..
ನಾನು ಮಂತ್ರಿ ಆಗಿದ್ದುರಲ್ಲಿ ಯಡಿಯೂರಪ್ಪ ಅವರ ಪಾತ್ರ ಏನೂ ಇಲ್ಲ, ಮುರುಗೇಶ ನಿರಾಣಿ ಏನಾದರೂ ಮುಖ್ಯಮಂತ್ರಿ ಆದರೆ ವಿಧಾನಸೌಧದ ಮರ್ಯಾದೆ ಹೋಗುತ್ತೆ ಎಂದು ವ್ಯಂಗ್ಯವಾಡಿದರು…
ಮೀಸಲಾತಿಯ ಸಲುವಾಗಿ ನಾಳೆ ಒಂದು ಐತಿಹಾಸಿಕ ಶಕ್ತಿಪ್ರದರ್ಶನ ಆಗುತ್ತಿದ್ದು,. ಮುಖ್ಯಮಂತ್ರಿಯವರು ಐತಿಹಾಸಿಕ ನಿರ್ಣಯ ತಗೆದುಕೊಂಡು ನಮ್ಮ ಸಮುದಾಯಕ್ಕೆ ನ್ಯಾಯ ನೀಡುವರು..