Breaking News

ಹಿಂಡಲಗಾ ಜೈಲಿಗೆ ಹೋಮ್ ಮಿನಿಸ್ಟರ್…!!

ಬೆಳಗಾವಿ- ಕಳೆದ ಹತ್ತು ದಿನಗಳಿಂದ ಬೆಳಗಾವಿಯಲ್ಲಿ ಇರುವ ರಾಜ್ಯ ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಇಂದು ಬೆಳ್ಳಂ ಬೆಳಗ್ಗೆ ಬೆಳಗಾವಿಯ ಐತಿಹಾಸಿಕ ಹಿಂಡಲಗಾ ಕಾರಾಗೃಹಕ್ಕೆ ಧಿಡೀರ್ ಭೇಟಿ ನೀಡಿದ್ದಾರೆ.

ಕಾರಾಗೃಹ ಇಲಾಖೆಯ ಉನ್ನತ ಅಧಿಕಾರಿಗಳ ಜೊತೆ ಹಿಂಡಲಗಾ ಜೈಲಿಗೆ ಹೋಗಿರುವ ಗೃಹಸಚಿವರು ಜೈಲಿನ ವ್ಯವಸ್ಥೆ,ಮತ್ತು ಕೈದಿಗಳ ಸಮಸ್ಯೆಗಳನ್ನು ಆಲಿಸುತ್ತಿದ್ದಾರೆ. ಕಳೆದ ಒಂದು ಗಂಟೆಯಿಂದ ಜೈಲಿನಲ್ಲಿ ಪರಶೀಲನೆಯ ಕಾರ್ಯಾಚರಣೆ ನಡೆದಿದೆ.

ಹಿಂಡಲಗಾ ಕಾರಾಗೃದಲ್ಲಿ ಕುಖ್ಯಾತ ರೌಡಿಗಳು,ಕ್ರಮಿನಲ್ ಗಳು ಇದ್ದಾರೆ‌.ಸ್ವಾತಂತ್ರ್ಯ ಪೂರ್ವ ಇತಿಹಾಸ ಹೊಂದಿರುವ ಹಿಂಡಲಗಾ ಜೈಲು ಅವ್ಯವಸ್ಥೆಯ ಆಗರವಾಗಿದೆ ಎನ್ನುವ ಮಾಹಿತಿ ಸಚಿವರಿಗೆ ಲಭಿಸಿದ್ದು ಸಚಿವರು ಅನಿರೀಕ್ಷಿತವಾಗಿ ಜೈಲಿಗೆ ಭೇಟಿ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.

ಸಚಿವರು ಜೈಲಿನಿಂದ ಹೊರಗೆ ಬಂದಾಕ್ಷಣ ಜೈಲಿನಲ್ಲಿ ನಡೆಯುತ್ತಿರುವ ಆಕ್ರಮ ಚಟುವಟಿಕೆಗಳು ಬಯಲಿಗೆ ಬರುವದರಲ್ಲಿ ಅನಯಮಾನವೇ ಇಲ್ಲ‌.

Check Also

46 ಜನ ಎಂಇಎಸ್ ಮುಖಂಡರು ಸೇರಿ 1500 ಜನರ ವಿರುದ್ಧ ಕೇಸ್

ಬೆಳಗಾವಿ – ಕನ್ನಡ ರಾಜ್ಯೋತ್ಸವ ದಿನವೇ ಎಂಇಎಸ ಕರಾಳ ದಿನಾಚರಣೆ ಮಾಡುವ ಮೂಲಕ ಪುಂಡಾಟಿಕೆ ಪ್ರದರ್ಶಿಸಿದ 46 ಜನ ಎಂಇಎಸ …

Leave a Reply

Your email address will not be published. Required fields are marked *