ಬೆಳಗಾವಿ-ಬೆಳಗಾವಿ ಮಹಾನಗರದ ಜನದಟ್ಟಣೆಯ ಪ್ರದೇಶವಾದ ಪಾಂಗುಳಗಲ್ಲಿಗೆ ಹೊಂದಿಕೊಂಡಿರುವ ಆಝಾದ್ ಗಲ್ಲಿಯಲ್ಲಿ ಹಗಲು ಹೊತ್ತಿನಲ್ಲಿ ಮನೆಯ ಕೀಲಿ ಮುರಿದು ಲಕ್ಷಾಂತರ ರೂ ಬೆಲೆಬಾಳುವ ಚಿನ್ನಾಭರಣ ಮತ್ತು ನಗದು ಹಣವನ್ನು ದೋಚಿದ ಘಟನೆ ಇಂದು ಮಧ್ಯಾಹ್ನ ನಡೆದಿದೆ.
ಬೆಳಗಾವಿಯ ಆಝಾದ್ ಗಲ್ಲಿಯ ನಿವಾಸಿ ಹರೀಶ್ ಪ್ರಜಾಪತ ಎಂಬಾತನ ಮನೆ ಕಳ್ಳತನವಾಗಿದ್ದು ಕಳ್ಳರು ಇಂದು ಬುಧವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಮನೆಯ ಕೀಲಿ ಮುರಿದು ಎರಡು ಲಕ್ಷ ರೂ ನಗದು ಸುಮಾರು ಐವತ್ತು ಗ್ರಾಂ ತೂಕದ ಚಿನ್ನಾಭರಣಗಳನ್ನು ದೋಚಲಾಗಿದೆ.
ಈ ಕುರಿತು ಬೆಳಗಾವಿಯ ಮಾರ್ಕೆಟ್ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.ಸ್ಥಳಕ್ಕೆ ಮಾರ್ಕೆಟ್ ಪೋಲೀಸರು ದೌಡಾಯಿಸಿ ತನಿಖೆ ನಡೆಸಿದ್ದು ಶ್ವಾನದಳವೂ ಪರಶೀಲನೆ ಮಾಡಿದೆ.
ನಿಂಗನಗೌಡ ಪಾಟೀಲ ಅವರಿಗೆ ಮಾರ್ಕೆಟ್ ಉಸ್ತುವಾರಿ.
ಬೆಳಗಾವಿ ಮಾರ್ಕೆಟ್ ಪೋಲೀಸ್ ಠಾಣೆಯ ಸಿಪಿಐ ಅವರ ವರ್ಗಾವಣೆ ಆಗಿದ್ದು, ಮಾರ್ಕೆಟ್ ಠಾಣೆಯ ಉಸ್ತುವಾರಿ ಸಿಪಿಐ ಯನ್ನಾಗಿ ನಿಂಗನಗೌಡ ಪಾಟೀಲ ಅವರನ್ನು ನೇಮಿಸಲಾಗಿದೆ.ನಿಂಗನಗೌಡ ಪಾಟೀಲ ಅವರು ಸಿಸಿಬಿ ಪಿಐ ಆಗಿ ಕರ್ತವ್ಯ ನಿಭಾಯಿಸುತ್ತಿದ್ದಾರೆ.