ಬೆಳಗಾವಿ-ಚುನಾವಣೆ ಸಮೀಪಿಸುತ್ತಿದ್ದಂತೆ, ಬೆಳಗಾವಿ ಜಿಲ್ಲೆಯಲ್ಲಿ ಬಿರುಸಿನ ರಾಜಕೀಯ ಚಟುವಟಿಕೆಗಳು ನಡೆಯುತ್ತಿವೆ.ಕಾಂಗ್ರೆಸ್ ಟಿಕೆಟ್ ಗಾಗಿ ಅನೇಕ ಘಟಾನುಘಟಿಗಳು ಅರ್ಜಿ ಹಾಕಿದ್ದು,ಗೋಕಾಕ್ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ನೀಡುವಂತೆ ಹಿರಿಯ ಪತ್ರಕರ್ತರೊಬ್ಬರು ಅರ್ಜಿ ಹಾಕಿ ಎಲ್ಲರ ಗಮನ ಸೆಳೆದಿದ್ದಾರೆ.
ಸುಮಾರು ಮೂರು ದಶಕಗಳ ಕಾಲ ಗೋಕಾಕ್ ತಾಲ್ಲೂಕಿನ ವರದಿಗಾರರಾಗಿ ಸೇವೆಗೈದಿರುವ ಚಂದ್ರಶೇಖರ ಕೊಣ್ಣೂರ, ಗೋಕಾಕ್ ತಾಲ್ಲೂಕಿನ ರಾಜಕಾರಣದ ಆಳ ಅಗಲ ಬಲ್ಲವರಾಗಿದ್ದು ಗ್ರಾಮ ಪಂಚಾಯತಿ ತಾಲ್ಲೂಕಾ ಪಂಚಾಯತಿ ಸದಸ್ಯರಾಗಿ ತಾಲ್ಲೂಕಿನ ಜನರ ಜೊತೆ ಉತ್ತಮ ಸಂಪರ್ಕ ಹೊಂದಿದ್ದಾರೆ.
ಗೋಕಾಕ್ ತಾಲ್ಲೂಕಿನ ಪಾಲಿಟೀಕ್ಸ್ ಬಹಳ ಹತ್ತಿರದಿಂದ ನೋಡಿರುವ ಚಂದ್ರಶೇಖರ ಕೊಣ್ಣೂರ ,ಕಾಂಗ್ರೆಸ್ ಟಿಕೆಟ್ ಗಾಗಿ ಅರ್ಜಿ ಹಾಕುವ ಮೂಲಕ ಗೋಕಾಕ್ ಕಾಂಗ್ರೆಸ್ ವಲಯದಲ್ಲಿ ಅಚ್ಚರಿ ಮೂಡಿಸಿದ್ದಾರೆ.
ವೀರಶೈವ ಸಮಾಜದ ಸಂಘಟನೆಯಲ್ಲಿ ಕ್ರಿಯಾಶೀಲ ವಾಗಿರುವ ಚಂದ್ರಶೇಖರ ಗೋಕಾಕ್ ತಾಲ್ಲೂಕಿನಿಂದ ಕಾಂಗ್ರೆಸ್ ಟಿಕೆಟ್ ನೀಡಿದ್ರೆ ಭ್ರಷ್ಟಾಚಾರ ರಹಿತ ಜನಸೇವೆಯನ್ನು ಮಾಡುವದಾಗಿ ಘೋಷಣೆ ಮಾಡಿದ್ದು,ಚಂದ್ರಶೇಖರ ಕೊಣ್ಣೂರ ಅವರ ರಾಜಕೀಯ ನಡೆ ಈ ಕ್ಷೇತ್ರದ ಇನ್ನೋರ್ವ ಆಕಾಂಕ್ಷಿ ಅಶೋಕ ಪೂಜಾರಿ ಅವರಿಗೆ ತಳಮಳವನ್ನುಂಟು ಮಾಡಿದೆ.
ಗೋಕಾಕ್ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಬಯಸಿ ಅಶೋಕ ಪೂಜಾರಿ, ಚಂದ್ರಶೇಖರ ಕೊಣ್ಣೂರ ಸೇರಿದಂತೆ ಹಲವಾರು ಜನ ಆಕಾಂಕ್ಷಿಗಳು ಅರ್ಜಿ ಹಾಕಿದ್ದು, ಚಂದ್ರಶೇಖರ ಕೊಣ್ಣೂರ ಲಿಂಗಾಯತ ಸಮಾಜದ ಸಂಘಟನೆಯ ಮೂಲಕ ಕಾಂಗ್ರೆಸ್ ಹೈಕಮಾಂಡ್ ಮೇಲೆ ಒತ್ತಡ ಹಾಕಿದ್ದಾರೆ.ಅಶೋಕ ಪೂಜಾರಿ ಅವರಿಗೆ ಹಲವಾರು ಬಾರಿ ಅವಕಾಶ ಕೊಡಲಾಗಿದ್ದು ನನಗೂ ಇಂದು ಅವಕಾಶ ಕೊಡಿ ಎಂದು ಚಂದ್ರಶೇಖರ ಜೋರ್ದಾರ್ ಲಾಭಿ ನಡೆಸಿದ್ದಾರೆ.