ಬೆಳಗಾವಿ-
ಎಂಟು ವರ್ಷದ ಬಾಲಜ ಸೇರಿದಂತೆ ಬೆಳಗಾವಿ ಜಿಲ್ಲೆಯ ಮತ್ತೆ ಮೂವರಿಗೆ ಸೊಂಕು
54 ಕ್ಕೇರಿದ ಸೊಂಕಿತರ ಸಂಖ್ಯೆ
ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಕೊರೋನಾ ವೈರಸ್ ರಣಕೇಕೆ ಹಾಕುತ್ತಿದೆ ಎಂಟು ವರ್ಷದ ಬಾಲಕ ಸೇರಿದಂತೆ ಹಿರೇಬಾಗೇವಾಡಿಯ ಮೂವರಿಗೆ ಸೊಂಕು ತಗುಲಿ ರುವದು ದೃಡವಾಗಿದೆ
ಇಂದು ಸಂಜೆ ಬಿಡುಗಡೆಯಾದ ಹೆಲ್ತ ಬುಲಿಟೀನ್ ನಲ್ಲಿ ಹಿರೇಬಾಗೇವಾಡಿ ಗ್ರಾಮದ 30 ವರ್ಷದ ಮಹೀಳೆ,20 ವರ್ಷದ ಯುವಕ ,8 ವರ್ಷದ ಬಾಲಕನಿಗೆ ಸೊಂಕು ಇರುವದು ದೃಡವಾಗಿದೆ .
ಜಿಲ್ಲೆಯಲ್ಲಿ ಸೊಂಕಿತರ ಸಂಖ್ಯೆ 54 ,kಕ್ಕೇರಿದೆ
ಬೆಳಗಾವಿ ಜಿಲ್ಲೆ: ಒಟ್ಟು ಇವತ್ತು ಒಂದೇ ದಿನ 9 ಜನರಲ್ಲಿ ಸೋಂಕು ಪತ್ತೆ – ಸೋಂಕಿತರ ಒಟ್ಟು ಸಂಖ್ಯೆ 54 ಕ್ಕೆ ಏರಿಕೆ
: ಬೆಳಗಾವಿ ಜಿಲ್ಲೆಯಲ್ಲಿ ಇಂದು ಶನಿವಾರ(ಏ.25) ಒಂದೇ ದಿನ ಮತ್ತೇ ಒಟ್ಟು 9 ಜನರಿಗೆ ಕೋವಿಡ್-19 ಸೋಂಕು ತಗುಲಿರುವುದು ದೃಢಪಟ್ಟಿರುತ್ತದೆ.
ಬೆಳಗಾವಿ ತಾಲ್ಲೂಕಿನ ಹಿರೇಬಾಗೇವಾಡಿಯ ಈ ಹೊಸ ಒಂಬತ್ತು ಪ್ರಕರಣಗಳು ಸೇರಿದಂತೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಒಟ್ಟಾರೆ 54 ಕ್ಕೆ ಏರಿದಂತಾಗಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಇಲಾಖೆಯ ಇಂದಿನ(ಏ.25) ಸಂಜೆಯ ಪತ್ರಿಕಾ ಪ್ರಕಟಣೆಯ ಪ್ರಕಾರ ಬೆಳಗಾವಿಯಲ್ಲಿ 9 ಪ್ರಕರಣಗಳು ದೃಢಪಟ್ಟಿರುತ್ತವೆ.
ಬೆಳಗಾವಿ ತಾಲ್ಲೂಕಿನ ಹಿರೇಬಾಗೇವಾಡಿ ಗ್ರಾಮದ ಎಂಟು ವರ್ಷದ ಬಾಲಕ ಸೇರಿದಂತೆ 4 ಪುರುಷರು ಮತ್ತು 5 ಮಹಿಳೆಯರಲ್ಲಿ ಸೋಂಕು ಕಂಡುಬಂದಿದೆ.
ಸೋಂಕಿತರ ವಿವರ:
ಪಿ-482 (45 ವರ್ಷ-ಗಂಡು), ಪಿ-483(38 ವರ್ಷ-ಗಂಡು), ಪಿ-494(20 ವರ್ಷ-ಗಂಡು) ಹಾಗೂ ಪಿ-495(ಬಾಲಕ-8 ವರ್ಷ).
ಪಿ-484(80 ವರ್ಷ-ಹೆಣ್ಣು), ಪಿ-485(55 ವರ್ಷ-ಹೆಣ್ಣು), ಪಿ-486(42 ವರ್ಷ-ಹೆಣ್ಣು), ಪಿ-487(39 ವರ್ಷ-ಹೆಣ್ಣು), ಪಿ-496(30 ವರ್ಷ-ಹೆಣ್ಣು).
ಈ ಎಲ್ಲ ಒಂಬತ್ತು ಜನರೂ ಹಿರೇಬಾಗೇವಾಡಿಯ ಪಿ-128 ಸೋಂಕಿತನ ಜತೆ ದ್ವಿತೀಯ ಸಂಪರ್ಕಕ್ಕೆ ಬಂದಿದ್ದರು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಬೆಳಗಾವಿ ಜಿಲ್ಲೆಯಲ್ಲಿ ಇದುವರೆಗೆ ಒಟ್ಟಾರೆ 54 ಜನರಲ್ಲಿ ಸೋಂಕು ಕಂಡುಬಂದಿದ್ದು, ಒಬ್ಬರು ಮೃತಪಟ್ಟಿರುತ್ತಾರೆ. ಈ ಪೈಕಿ ಗುಣಮುಖರಾಗಿರುವ ನಾಲ್ಕು ಜನರನ್ನು ಬಿಮ್ಸ್ ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿರುತ್ತದೆ. 49 ಸಕ್ರಿಯ ಪ್ರಕರಣಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.