ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆ ಇತಿಹಾಸದಲ್ಲೇ ಮೊದಲ ಬಾರಿಗೆ,ಭಾಷಾ ಆಧಾರಿತ ಚುನಾವಣೆ ಕೈಬಿಟ್ಟು, ಪಕ್ಷ ಆಧಾರಿತ ಚುನಾವಣೆ ನಡೆದು 58 ರಲ್ಲಿ 35 ಸ್ಥಾನಗಳನ್ನು ಗೆಲ್ಲುವ ಮೂಲಕ ಬಿಜೆಪಿ ಸ್ಪಷ್ಟ ಬಹುಮತ ಸಾಧಿಸಿ ಹೊಸ ಇತಿಹಾಸ ನಿರ್ಮಿಸಿದೆ.
ಅನೇಕ ತಾಂತ್ರಿಕ,ಮತ್ತು ಕಾನೂನಾತ್ಮಕ ತೊಡಕುಗಳಿಂದಾಗಿ ಒಂದು ವರ್ಷದ ನಂತರ ಮೇಯರ್ ಚುನಾವಣೆಗೆ ದಿನಾಂಕ ನಿಗದಿಯಾಗಿದೆ.ಫೆಬ್ರುವರಿ 6 ರಂದು ಬೆಳಗಾವಿ ಪಾಲಿಕೆಯ ಮೇಯರ್ ಮತ್ತು ಉಪ ಮೇಯರ್ ಇಲೆಕ್ಷನ್ ನಡೆಯಲಿದೆ. ಮೇಯರ್ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲು,ಹೀಗಾಗಿ ಸಹಜವಾಗಿಯೇ ಮೇಯರ್ ಸ್ಥಾನಕ್ಕೆ ಪ್ರಬಲ ಪೈಪೋಟಿ ನಡೆಯುತ್ತಿದೆ.ಜಾತಿ ಆಧಾರಿತ ಲಾಭಿ ನಡೆಯತ್ತಿದೆ. ಮೇಯರ್ ಆಯ್ಕೆ ಮಾಡುವ ಪವರ್ ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲ ಮತ್ತು ಬೆಳಗಾವಿ ಉತ್ತರದ ಶಾಸಕ ಅನೀಲ ಬೆನಕೆ ಅವರಿಗಿದೆ,ಎನ್ನುವ ವಿಚಾರ ಎಲ್ಲರಿಗೂ ಗೊತ್ತಿದೆ.ಹೀಗಾಗಿ ಬೆಳಗಾವಿ ದಕ್ಷಿಣ ಕ್ಷೇತ್ರದ ವಾರ್ಡಿನ ನಗರ ಸೇವಕರು ಸ್ವಲ್ಪ ಜೋರಾಗಿಯೇ ಲಾಬಿ ನಡೆಸಿದ್ದಾರೆ.
ಬೆಳಗಾವಿ ಹಿರಿಯ ಪತ್ರಕರ್ತ ವಿಲಾಸ ಜೋಶಿ ಅವರ ಶ್ರೀಮತಿ ವಾಣಿ ವಿಲಾಸ ಜೋಶಿ ಮೇಯರ್ ಸ್ಥಾನಕ್ಕೆ ಪ್ರಬಲ ಪೈಪೋಟಿ ನಡೆಸಿದ್ದಾರೆ.ಬೆಳಗಾವಿ ದಕ್ಷಿಣ ಮತಕ್ಷೇತ್ರದಲ್ಲಿ ಬ್ರಾಹ್ಮಣ ಸಮಾಜದ ಮತಗಳು ಹೆಚ್ಚಿನ ಸಂಖ್ಯಯಲ್ಲಿದ್ದು ಈ ಬಾರಿ ಮೇಯರ್ ಸ್ಥಾನ ಬ್ರಾಹ್ಮಣ ಸಮಾಜಕ್ಕೆ ಕೊಡಬೇಕು ಎಂದು ಹೈ ಲೇವಲ್ ಲಾಬಿ ನಡೆಸಿರುವ ವಿಚಾರ ಈಗ ಗುಟ್ಟಾಗಿ ಉಳಿದಿಲ್ಲ.
ಬೆಳಗಾವಿ ದಕ್ಷಿಣ ಮತಕ್ಷೇತ್ರದಲ್ಲಿ ನೇಕಾರ ಸಮಾಜ ಹೆಚ್ಚಿದೆ,ಈ ಬಾರಿ ನೇಕಾರ ಸಮಾಜದ ನಗರ ಸೇವಕಿಯರಿಗೆ ಮೇಯರ್ ಸ್ಥಾನ ಕೊಡಬೇಕು ಎನ್ನುವ ಬೇಡಿಕೆಯೂ ಉದ್ಭವ ಆಗಿದೆ. ಜಾತಿ ಆಧಾರಿತ ಲಾಭಿಯ ನಡುವೆ,ಭಾಷೆ ಆಧಾರಿತ ಬೇಡಿಕೆಯೂ ಇದೆ.ಎಂದಿನಂತೆ ಈ ಸಲವೂ ಮರಾಠಿ ಬಾಷಿಕ ನಗರ ಸೇವಕಿಗೆ ಮೇಯರ್ ಮಾಡಬೇಕು ಎನ್ನುವ ಡಿಮಾಂಡು ಇದೆ.ರಾಜಕೀಯ ಗಣಿತ,ಗುಣಾಕಾರ,ಭಾಗಾಕಾರ ನೋಡಿದ್ರೆ ಮರಾಢಿ ಭಾಷಿಕ ನಗರ ಸೇವಕಿಯೇ ಈ ಬಾರಿ ಮೇಯರ್ ಆಗೋದು ಖಚಿತ ಎಂದು ಹೇಳಲಾಗುತ್ತಿದೆ.
ನಗರ ಸೇವಕಿ ಸಾರೀಕಾ ಪಾಟೀಲ ಬಿಜೆಪಿ ಪಕ್ಷದಲ್ಲಿ ಸುಮಾರು ಇಪ್ಪತ್ತು ವರ್ಷಗಳಿಂದ ಸಕ್ರೀಯವಾಗಿದ್ದಾರೆ.ಬಿಜೆಪಿಯ ಕ್ರಿಯಾಶೀಲ ಕಾರ್ಯಕರ್ತೆಯೂ ಹೌದು.ಪಕ್ಷ ನಿಷ್ಠೆ ,ಪಕ್ಷ ಸೇವೆಯನ್ನು ಗಮನದಲ್ಲಿಟ್ಟು ಬಿಜೆಪಿ ನಾಯಕರು ಮೇಯರ್ ಆಯ್ಕೆ ಮಾಡಿದ್ದಲ್ಲಿ ಸಾರಿಕಾ ಪಾಟೀಲ ಮೇಯರ್ ಆಗೋದ್ರಲ್ಲಿ ಅನುಮಾನವೇ ಇಲ್ಲ.
ಬೆಳಗಾವಿ ಉತ್ತರದಲ್ಲಿ ಲಿಂಗಾಯತ ಸಮಾಜ ಪ್ರಬಲವಾಗಿದ್ದು ಬಿಜೆಪಿ ಮುಖಂಡ ಮುರುಘೇಂದ್ರ ಗೌಡ ಪಾಟೀಲ ಅವರ ಶ್ರೀಮತಿ ಅವರಿಗೆ ಮೇಯರ್ ಮಾಡುವಂತೆ ಲಿಂಗಾಯತ ಸಮಾಜದ ನಾಯಕರು ಬಿಜೆಪಿ ನಾಯಕರ ಮೇಲೆ ಒತ್ತಡ ಹೇರುತ್ತಿದ್ದಾರೆ.
ಬಿಜೆಪಿ ನಾಯಕರು ಮೇಯರ್ ಹಾಗೂ ಉಪ ಮೇಯರ್ ಸ್ಥಾನಗಳಿಗೆ ಲಾಭಿ ಮಾಡುತ್ತಿರುವ ನಗರ ಸೇವಕಿಯರಿಗೆ ಬಿಜೆಪಿ ನಾಯಕರು ವಾರ್ನಿಂಗ್ ಮಾಡಿದ್ದಾರೆ ಎಂದು ಗೊತ್ತಾಗಿದೆ,ಮೇಯರ್ ಸ್ಥಾನಕ್ಕೆ ಜಾತಿ ಆಧಾರಿತ,ಭಾಷೆ ಆಧಾರಿತ ಲಾಭಿ ಮಾಡಿ,ಸಮಾಜದ ಸ್ವಾಮಿಜಿಗಳ ಮುಖಾಂತರ ಲಾಭಿ ಮಾಡಬಾರ್ದು ಎಂದು ತಾಕೀತು ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.