Breaking News

ಎಂಇಎಸ್ ರಂಗೋಲಿಗೆ, ಲಕ್ಷ್ಮೀ ಅಭಿಮಾನಿಗಳಿಂದ ಪ್ರತ್ಯುತ್ತರ….!!

ಬೆಳಗಾವಿ-ಮಹಾರಾಷ್ಟ್ರ ಏಕೀಕರಣ ಸಮೀತಿಯ ಕಾರ್ಯಕರ್ತರು ತಮ್ಮ ಮನೆಯ ಅಂಗಳದಲ್ಲಿ ಜೈ ಮಹಾರಾಷ್ಟ್ರ ಎಂದು ರಂಗೋಲಿ ಬಿಡಿಸಿ,ಪುಂಡಾಟಿಕೆ ನಡೆಸಿದ ಬೆನ್ನಲ್ಲಿಯೇ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅಭಿಮಾನಿಗಳು ಎಂಇಎಸ್ ರಂಗೋಲಿಗೆ ತಕ್ಕ ಪ್ರತ್ಯುತ್ತರ ನೀಡಿದ್ದಾರೆ.ಮನೆಯ ಅಂಗಳದಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಮತ್ರು ಚನ್ನರಾಜ್ ಹಟ್ಟಿಹೊಳಿ ಅವರ ಭಾವಚಿತ್ರವನ್ನು ರಂಗೋಲಿಯಲ್ಲಿ ಮೂಡಿಸಿ ಅಭಿಮಾನ ಮೆರೆದಿದ್ದಾರೆ.

ಗ್ರಾಮೀಣ ಕ್ಷೇತ್ರದಾದ್ಯಂತ ಹರ್ಷ ಶುಗರ್ಸ್ ವತಿಯಿಂದ ಗ್ರಾಮೀಣ ಉತ್ಸವ ಆಯೋಜಿಸಲಾಗಿತ್ತು. ಪ್ರತಿ ಊರಲ್ಲಿ ಮನೆಗಳ ಮುಂದೆ, ನಮ್ಮ ಸಂಸ್ಕೃತಿ ಬಿಂಬಿಸುವ ರಂಗವಲ್ಲಿಗಳನ್ನು ಬಿಡಿಸುವ ಸ್ಪರ್ಧೆ ಆಯೋಜಿಸಲಾಗಿತ್ತು. ಇಡೀ ಕ್ಷೇತ್ರದ ಲಕ್ಷಾಂತರ ಜನರು ಈ ಬೃಹತ್ ಅಭಿಯಾನದಲ್ಲಿ ಪಾಲ್ಗೊಂಡಿದ್ದರು. ವಿಜೇತರಿಗೆ, ಭಾಗವಹಿಸಿದವರಿಗೆ ವಿಶೇಷ ಬಹುಮಾನಗಳನ್ನು ಸಹ ನೀಡಲಾಯಿತು.

ಅಂತಿಮ ದಿನ ಸುಳೇಬಾವಿಯಲ್ಲಿ ರವಿ ಮೂಲಂಗಿ ಅವರ ಮನೆಯ ಮುಂದೆ ಸುಳೇಭಾವಿ ಶ್ರೀ ಮಹಾಲಕ್ಷ್ಮೀ ದೇವಿಯ ಚಿತ್ರ ರಂಗೋಲಿಯಲ್ಲಿ ಅರಳಿದೆ. ಸುಳೇಭಾವಿ ಗ್ರಾಮ ಪಂಚಾಯತ್ ಅಧ್ಯಕ್ಷ ಮಹೇಶ ಸುಗಣೇನ್ನವರ ಅವರ ಮನೆ ಮುಂದೆ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಹಾಗೂ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಅವರ ಚಿತ್ತಾರ ರಂಗೋಲಿಯ‌ಲ್ಲಿ ಮೂಡಿ ಬಂದಿವೆ. ಸ್ವತಃ ಲಕ್ಷ್ಮೀ ಹೆಬ್ಬಾಳಕರ್ ಹಾಗೂ ಚನ್ನರಾಜ ಹಟ್ಟಿಹೊಳಿ ರಂಗೋಲಿಗಳನ್ನು ನೋಡಿ ಹರ್ಷಪಟ್ಟರು.

Check Also

ಕುಡಿದ ಅಮಲಿನಲ್ಲಿ ಕಲ್ಲಿನಿಂದ ಜಜ್ಜಿ ಪತ್ನಿಯ ಭೀಕರ ಕೊಲೆ

ಬೆಳಗಾವಿ- ಪ್ರತಿವರ್ಷ ಕಬ್ಬು ಕಟಾವ್ ಮಾಡುವ ಹಂಗಾಮು ಶುರುವಾದ್ರೆ ಸಾಕು ಪಕ್ಕದ ಮಹಾರಾಷ್ಟ್ರ ದಿಂದ ಬೆಳಗಾವಿ ಜಿಲ್ಲೆಗೆ ಸಾವಿರಾರು ಕುಟುಂಬಗಳು …

Leave a Reply

Your email address will not be published. Required fields are marked *