ಬೆಳಗಾವಿ- ಫೆಬ್ರುವರಿ 6 ರಂದು ಬೆಳಗಾವಿ ಮಹಾನಗರ ಪಾಲಿಕೆಯ ಮಹಾಪೌರ ಉಪ ಮಹಾಪೌರ ಚುನಾವಣೆ ನಡೆಯಲಿದೆ.ಪಾಲಿಕೆಯಲ್ಲಿ ಬಿಜೆಪಿ ಪಕ್ಷಕ್ಕೆ ಸ್ಪಷ್ಟ ಬಹುಮತವಿದೆ, ಆದರೂ ಮಹಾಪೌರ,ಉಪ ಮಹಾಪೌರ ಯಾರಾಗ್ತಾರೆ ಅನ್ನೋದು ಕೊನೆಯ ಕ್ಷಣದವರೆಗೂ ಸಸ್ಪೆನ್ಸ್ ಇರಲಿದೆ.
ಮಹಾಪೌರ ಸ್ಥಾನ ಸಾಮಾನ್ಯ ಮಹಿಳೆ,ಉಪ ಮಹಾಪೌರ ಸ್ಥಾನ ಹಿಂದುಳಿದ ವರ್ಗ ಬ ಮಹಿಳಿಗೆ ಹೀಗೆ ಎರಡೂ ಸ್ಥಾನಗಳು ಮಹಿಳೆಯರಿಗೆ ಮೀಸಲಿಡಲಾಗಿದ್ದು, ಫೆಬ್ರುವರಿ 6 ರಂದು ಚುನಾವಣೆ ನಡೆಯಲಿದ್ದು 5 ರಂದು ಬಿಜೆಪಿ ಕೋರ್ ಕಮೀಟಿ ಸಭೆ ಸೇರಿ ಮಹಾಪೌರ ಉಪ ಮಹಾಪೌರರ ಹೆಸರುಗಳನ್ನು ಅಂತಿಮಗೊಳಿಸಿ ಫೆಬ್ರುವರಿ 6 ರಂದೇ ಹೆಸರುಗಳನ್ನು ಬಹಿರಂಗಗೊಳಿಸಲಿದೆ.ಎಂದು ತಿಳಿದು ಬಂದಿದೆ.ಬೆಳಗಾವಿಯ ಮಹಾಪೌರ ಯಾರು ? ಅನ್ನೋದು ಕೊಣೆಯ ಕ್ಷಣದವರೆಗೂ ಗೌಪ್ಯ.
ಮೇಯರ್ ಸ್ಥಾನಕ್ಕೆ ಬಿಜೆಪಿಯ ಕಟ್ಟಾ ಕಾರ್ಯಕರ್ತೆ ಸಾರೀಕಾ ಪಾಟೀಲ,ವಾಣಿ ವಿಲಾಸ ಜೋಶಿ,ಹಾಗೂ ಬಿಜೆಪಿ ಮುಖಂಡ ಮುರುಘೇಂದ್ರಗೌಡ ಪಾಟೀಲ ಅವರ ಶ್ರೀಮತಿಯ ಹೆಸರು ಕೇಳಿ ಬರುತ್ತಿದೆ.ಒಂದು ವರ್ಷದ ಹಿಂದೆ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ನಡೆದಿತ್ತು,ಮಹಾಪೌರ ಚುನಾವಣೆ ಯಾವಾಗ ನಡೆಯುತ್ತದೆ ಅನ್ನೋದು ಎಲ್ಲರ ಕುತೂಹಲ ಇತ್ತು.ಆದ್ರೆ ಈಗ ಮಹಾಪೌರ ಚುನಾವಣೆಗೆ ದಿನಾಂಕ ನಿಗದಿ ಆಗಿದ್ದು, ಮಹಾಪೌರ, ಉಪಮಹಾಪೌರ ಯಾರಾಗ್ತಾರೆ ಅನ್ನೋದು ಎಲ್ಲರಲ್ಲಿ ಕುತೂಹಲ ಮೂಡೊಸಿದೆ.