ಬೆಳಗಾವಿ-ಕುಡಿದ ಮತ್ತಿನಲ್ಲಿ ಕಟ್ಟಡದ 3ನೇ ಮಹಡಿಯ ಪಬ್‌ನಿಂದ ಜಿಗಿದು ಯುವಕನೊಬ್ಬ ಸಾವನ್ನೊಪ್ಪಿದ ಘಟನೆಬೆಳಗಾವಿಯ ಡಾ.ಬಿ.ಆರ್ ಅಂಬೇಡ್ಕರ್ ರಸ್ತೆಯ ತಮ್ಮಣ್ಣಾ ಆರ್ಕೇಡ್‌ನಲ್ಲಿ ನಡೆದಿದೆ.Tamanna ಆರ್ಕೇಡ್‌ನ 3ನೇ ಮಹಡಿಯಲ್ಲಿ ಇರುವ ಬ್ರೂ59 ಪಬ್‌ನಿಂದ ಮೂರನೇಯ ಮಹಡಿಯಿಂದ ಜಿಗಿದಿದ್ದ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಪಬ್‌ನ ಕಿಟಕಿಯಿಂದ ಕೆಳಗೆ ಜಿಗಿದ ಯೋಗೇಶ್ ಶಾನಬಾಗ್(28) ಮೃತ ದುರ್ದೈವಿಯಾಗಿದ್ದಾನೆ.
ಉತ್ತರ ಕನ್ನಡ ಜಿಲ್ಲೆ ಹಳಿಯಾಳ ಮೂಲದ ಯೋಗೇಶ್ ಶಾನಬಾಗ್ ನಿನ್ನೆ ಸೋಮವಾರಸಂಜೆ 6 ಗಂಟೆಗೆ ಸ್ನೇಹಿತೆ, ಸ್ನೇಹಿತನ ಜತೆ ಪಬ್‌ಗೆ ಬಂದಿದ್ದ ಯೋಗೇಶ್.
ಈ ವೇಳೆ ಪಬ್‌ನಲ್ಲಿ ಕಿಟಕಿ ಬಳಿ ಬಂದು ಏಕಾಏಕಿ ಕೆಳಗೆ ಜಿಗಿದ ಯೋಗೇಶ್.ಗಂಭೀರ ಗಾಯಗೊಂಡಿದ್ದ
ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಯೋಗೇಶ್ ಶಾನ್‌ಭಾಗ್.ಚಿಕಿತ್ಸೆ ಫಲಿಸದೇ ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನೊಪ್ಪಿದ್ದಾನೆ.ಬೆಳಗಾವಿ ಎಪಿಎಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ