Breaking News

ಗೋಕಾಕ್ ನಿಂದ ಲಕ್ಷ್ಮೀ ಹೆಬ್ಬಾಳ್ಕರ್ ಸ್ಪರ್ಧೆ ಮಾಡಬೇಕು ಎಂದು ಚರ್ಚೆ ಆಗಿದ್ದು ಎಲ್ಲಿ ಗೊತ್ತಾ??

ಬೆಳಗಾವಿ- ಪಂಚಮಸಾಲಿ ಜಗದ್ಗುರುಗಳು ಬೆಂಗಳೂರಿನಲ್ಲಿ ಮೀಸಲಾತಿ ಕುರಿತು ಹೋರಾಟ ನಡೆಸಿದ್ದಾರೆ,ಈ ಹೋರಾಟದಲ್ಲಿ ಭಾಗಿಯಾದ ಗೋಕಾಕ್ ತಾಲ್ಲೂಕಿನ ಪಂಚಮಸಾಲಿ ನಾಯಕರು ಲಕ್ಷ್ಮೀ ಹೆಬ್ಬಾಳಕರ ಅವರನ್ನು ಗೋಕಾಕ್ ಕ್ಷೇತ್ರದಿಂದ ಸ್ಪರ್ದಿಸಲು ಪಂಚಮಸಾಲಿ ಶ್ರೀಗಳೇ ಆಶೀರ್ವಾದ ಮಾಡಬೇಕೆಂದು ಒತ್ತಾಯಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

ಬೆಂಗಳೂರಿನಲ್ಲಿ ಜಯಮೃತ್ಯುಂಜಯ ಶ್ರೀಗಳನ್ನು ಭೇಟಿಯಾದ ಬೆಳಗಾವಿ ಜಿಲ್ಲೆಯ ಗೋಕಾಕ್ ಮುಖಂಡರು.
ಗೋಕಾಕ್, ಅರಬಾವಿ ಕ್ಷೇತ್ರದ ಎಲ್ಲಾ ಮುಖಂಡರಿಂದ ಶ್ರಿಗಳನ್ನು ಭೇಟಿ ಮಾಡಿ,ಗೋಕಾಕ್ ನಿಂದ ಲಕ್ಷ್ಮೀ ಹೆಬ್ಬಾಳ್ಕರ್ ಸ್ಪರ್ಧೆ ಮಾಡಬೇಕು ಎಂದು ಆಗ್ರಹಪಡಿಸಿದ್ದಾರೆ.ಗೋಕಾಕ್ ಜೆಡಿಎಸ್ ಮುಖಂಡ ಚಂದನ್ನ ಗಿಡ್ಡಣ್ಣವರ್ ಭಾಷಣ ಮಾಡಿದ್ದು,ಗೋಕಾಕ್ ಕ್ಷೇತ್ರದಲ್ಲಿ ಅನೇಕ ಆಕಾಂಕ್ಷಿಗಳು ಸ್ಪರ್ಧಿಸಲು ಪೈಪೋಟಿ ಇದೆ,ಲಕ್ಷ್ಮೀ ಹೆಬ್ಬಾಳ್ಕರ್ ಅಕ್ಕಳನ್ನು ಗೋಕಾಕ್ ತಂದು ನಿಲ್ಲಿಸೊಣ,ನಿಮ್ಮ ಪಾದಕ್ಕೆ ಈ ಮನವಿಯನ್ನು ಅರ್ಪಣೆ ಮಾಡುತ್ತೇನೆ.ಎಂದು ಗಿಡ್ಡಣ್ಣವರ ಹೇಳಿದ್ದಾರೆ.

ಲಕ್ಷ್ಮೀ ಹೆಬ್ಬಾಳ್ಕರ್ ಸ್ಪರ್ಧಿಸಿದ್ರೆ ಎಲ್ಲರೂ ಸೇರಿ ಚುನಾವಣೆ ಮಾಡುತ್ತೇವೆ.ಈ ಪ್ರಸ್ತಾವನೆಯನ್ನು ನೀವೆ ನಿರ್ಧರಿಸಬೇಕು.
ದೊಡ್ಡ ದೊಡ್ಡ ಸಾಮ್ರಾಜ್ಯಗಳನ್ನು ಹೆಣ್ಣುಮಗಳೆ ಸೋಲಿಸಿದ ಉದಾಹಣೆ ಇದೆ.ದುಷ್ಟ ಸಾಮ್ರಾಜ್ಯಕ್ಕೆ ಬೆಳಗಾವಿಯ ಚನ್ನಮ್ಮಳೇ ಸೋಲಿಸಲಿ ಎನ್ನುವುದು ನಮ್ಮ ಬಯಕೆ ಆಗಿದೆ.
ಗೋಕಾಕ್, ಮೂಡಲಗಿ ಪಂಚಮಸಾಲಿ ಬಂಧುಗಳು ನಾನು ಹೇಳಿದ್ದು ಸರಿ ಇದ್ದರೆಈ ಕಾರ್ಯಕ್ಕೆ ಶ್ರೀಗಳು ಅಣಿಯಾಗಬೇಕು ಎಂದು ಮನವಿ ಮಾಡುತ್ತೇನೆ.
ಈಗ ರಾಜ್ಯದಲ್ಲಿ ಚುನಾವಣೆ ಆರಂಭವಾಗಿದೆ.
ಅನೇಕರು ಪಂಚಮಸಾಲಿ ರಾಜಕೀಯ ಪಕ್ಷಬೇಕು ಎನ್ನುತ್ತಿದ್ದಾರೆ.ಅದು ಆಗುತ್ತೋ ಇಲ್ಲೊ ಗೊತ್ತಿಲ್ಲ
ನಮ್ಮ ಹೋರಾಟಕ್ಕೆ ಬೆಂಬಲಿಸಿದ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು ಗಿಡ್ಡಣ್ಣವರ ಮನವಿ ಮಾಡಿದ್ದಾರೆ.

ನಮ್ಮ ಸಮಾಜಕ್ಕೆ ಅನ್ಯಾಯ ಮಾಡಿದವರನ್ನು ಸೋಲಿಸುವ ಕಾರ್ಯವು ಆಗಬೇಕು.ನಮ್ಮ ಹಗರುವಾಗಿ ಯಾರು ತೆಗೆದುಕೊಳ್ಳಬಾರದು.ಕೆಟ್ಟ ಬುದ್ದಿಗೆ ಪಾಠ ಕಲಿಸಬೇಕು ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯ.
ಮೂಡಲಗಿ, ಗೋಕಾಕ್ ಭಾಗದವರ ಯಾವುದೇ ಹೋರಾಟಕ್ಕೆ ನಮ್ಮ ಬೆಂಬಲವಿದೆ,ಎಂದು
ಪರೋಕ್ಷವಾಗಿ ಜಾರಕಿಹೊಳಿ ಸಹೋದರರನ್ನ ಸೋಲಿಬೇಕೆಂದು ಗಿಡ್ಡಣ್ಣವರ ಹೇಳಿದ್ದು ಈಗ ಬೆಳಗಾವಿ ಜಿಲ್ಲೆಯಲ್ಲಿ ಚರ್ಚೆಗೆ ಗ್ರಾಸವಾಗಿದೆ.

Check Also

ರಜೆ ಇದ್ರೂ ಸಹ, ನದಿ ಪಾತ್ರಗಳ ಪರಿಸ್ಥಿತಿ ಪರಶೀಲಿಸಿದ ಜಿಲ್ಲಾಧಿಕಾರಿ…

ನದಿಪಾತ್ರಗಳಿಗೆ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಭೇಟಿ: ಪ್ರವಾಹ ನಿರ್ವಹಣೆ ಸಿದ್ಧತೆ ಪರಿಶೀಲನೆ ಬೆಳಗಾವಿ,-  ಪಕ್ಕದ  ಮಹಾ ನಿನ್ನೆಯ ದಿನ ಮೊಹರಂ …

Leave a Reply

Your email address will not be published. Required fields are marked *