Breaking News
Home / Breaking News / ರಾಯಬಾಗ ಕುಡಚಿಯ ಮೂರು ಪಾಸಿಟೀವ್ ಕೇಸ್ ಪತ್ತೆ 72 ಕ್ಕೇರಿದ ಸೊಂಕಿತರ ಸಂಖ್ಯೆ

ರಾಯಬಾಗ ಕುಡಚಿಯ ಮೂರು ಪಾಸಿಟೀವ್ ಕೇಸ್ ಪತ್ತೆ 72 ಕ್ಕೇರಿದ ಸೊಂಕಿತರ ಸಂಖ್ಯೆ

ಬೆಳಗಾವಿ- ಬೆಳಗಾವಿ ಪಾಲಿಗೆ ಇಂದು ಶುಭ ಶುಕ್ರವಾರ ಆಗಲಿಲ್ಲ ಯಾಕಂದ್ರೆ ಇಂದು ಬೆಳಗಿನ ಹೆಲ್ತ್ ಬುಲಿಟೀನ್ ಬಿಡುಗಡೆ ಯಾಗಿದೆ. ಈ ಬುಲಿಟೀನ್ ನಲ್ಲಿ ಬೆಳಗಾವಿ ಜಿಲ್ಲೆಯ ಮೂರು  ಪಾಸಿಟಿವ್ ಕೇಸ್ ಪತ್ತೆಯಾಗಿವೆ

ಬೆಳಗಾವಿ ಜಿಲ್ಲೆಯ ರಾಯಬಾಗ ಕುಡಚಿಯ ಮೂರು ಪಾಸಿಟೀವ್ ಕೇಸ್ ಪತ್ತೆಯಾಗಿದ್ದು ಜಿಲ್ಲೆಯಲ್ಲಿ ಸೊಂಕಿತರ ಸಂಖ್ಯೆ 70 ರ ಗಡಿ ದಾಟಿ 72 ಕ್ಕೇರಿದೆ

ನಿನ್ನೆ ಗುರುವಾರ ಒಂದೇ ದಿನ ಹದಿನಾಲ್ಕು ಪಾಸಿಟಿವ್ ಕೇಸ್ ಗಳು ಪತ್ತೆಯಾಗಿದ್ದವು ಇಂದು ಶುಕ್ರವಾರದ ಬೆಳಗಿನ ಬುಲಿಟೀನ್ ಮತ್ತೆ ಆಘಾತ ನೀಡಿದೆ

ಇಂದು ಬೆಳಿಗ್ಗೆ ಬಿಡುಗಡೆಯಾದ ಹೆಲ್ತ್ ಬುಲಿಟೀನ್ ನಲ್ಲಿ ಬೇರೆ ಬೇರೆ ಜಿಲ್ಲೆಗಳ ಪಾಸಿಟೀವ್ ಕೇಸ್ ಗಳು ಪತ್ತೆಯಾಗಿವೆ

ಬೆಳಗಾವಿ ಜಿಲ್ಲೆಯಲ್ಲಿ ಈ ವರೆಗೆ ಒಟ್ಟು 72 ಕೊರೋನಾ ಪಾಸಿಟಿವ್ ಕೇಸ್ ಗಳು ಪತ್ತೆಯಾಗಿವೆ.ಅದರಲ್ಲಿ 10 ಜನರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ ಒಬ್ಬ ವೃದ್ದ ಮಹಿಳೆ ಮೃತಪಟ್ಟಿದ್ದಾಳೆ.

ಯಾವ ಊರಲ್ಲಿ ಎಷ್ಟು ಕೇಸ್ ಇಲ್ಲಿದ ವಿವರ

ಹಿರೇಬಾಗೇವಾಡಿ- 37

ರಾಯಬಾಗ ಕುಡಚಿ 21

ಸಂಕೇಶ್ವರ -4

ಬೆಳಗಾವಿ ಸಿಟಿ – 7

ಯಳ್ಳೂರ-1

,ಬೆಳಗುಂದಿ-1

ಪೀರನವಾಡಿ -1

ಒಟ್ಟು 72

ಹತ್ತು ಜನ ಡಿಸ್ಚಾರ್ಜ

ಮೃತ- 1

Check Also

ಗೋ ಬ್ಯಾಕ್ ಸಂಧಾನಕ್ಕಾಗಿ ,ದಿಢೀರ್ ಬೆಳಗಾವಿಗೆ ಯಡಿಯೂರಪ್ಪ…!!

ಬೆಳಗಾವಿ- ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ಬೆಳಗಾವಿ ಕ್ಷೇತ್ರದಿಂದ ಸ್ಪರ್ದಿಸುವ ವಿಚಾರದಲ್ಲಿ ಬಿಜೆಪಿಯಿಂದಲೇ ಗೋ ಬ್ಯಾಕ್ ಆಂದೋಲನ ಶುರುವಾದ …

Leave a Reply

Your email address will not be published. Required fields are marked *