ಬೆಳಗಾವಿ- ಬೆಳಗಾವಿ ದಕ್ಷಿಣ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಮಚ್ಛೆ ಮತ್ತು ಪೀರನವಾಡಿ ಪಟ್ಟಣ ಪಂಚಾಯತಿಗಳನ್ನು ಗ್ರಾಮ ಪಂಚಾಯತಿ ಗಳನ್ನಾಗಿ ಪರಿವರ್ತಿಸಿ ಸರ್ಕಾರ ಆದೇಶ ಹೊರಡಿಸಿದೆ.
ಈ ಎರಡೂ ಗ್ರಾಮಗಳ ಗ್ರಾಮ ಪಂಚಾಯತಿ ಗಳು ಪಟ್ಟಣ ಪಂಚಾಯತಿ ಆದಾಗಿನಿಂದ ಈ ಗ್ರಾಮಗಳ ಬಡವರು,ನರೇಗಾ ಕಾರ್ಮಿಕರು,ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗುತ್ತಿರುವದನ್ನು ಗಮನಿಸಿದ ಶಾಸಕ ಅಭಯ ಪಾಟೀಲ ಎರಡೂ ಪಟ್ಟಣ ಪಂಚಾಯ್ತಿ ಗಳನ್ನು ಗ್ರಾಮ ಪಂಚಾಯತಿ ಗಳನ್ನಾಗಿ ಪರಿವರ್ತಿಸುವಂತೆ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿಕೊಂಡಿದ್ದರು.
ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಇದೊಂದು ವಿಶೇಷ ಪ್ರಕಣರಣ ಎಂದು ಪರಿಗಣಿಸಿ ಪ್ರಸ್ತಾವಣೆಗೆ ಅನುಮೋದನೆ ನೀಡಿದ್ದಾರೆ.
ಈ ಮೊದಲು ಮಚ್ಛೆ ಮತ್ತು ಪೀರನವಾಡಿ ಗ್ರಾಮ ಪಂಚಾಯತಿ ಗಳನ್ನು ಪಟ್ಟಣ ಪಂಚಾಯತಿ ಗಳನ್ನಾಗಿ ಮೇಲ್ದರ್ಜೆಗೆ ಏರಿಸುವಂತೆ ಎರಡೂ ಗ್ರಾಮಗಳ ಗ್ರಾಮಸ್ಥರು ಒತ್ತಾಯ ಮಾಡಿದ ಹಿನ್ನಲೆಯಲ್ಲಿ ಶಾಸಕ ಅಭಯ ಪಾಟೀಲರು ಸರ್ಕಾರದ ಮೇಲೆ ಒತ್ತಡ ಹೇರಿ ಗ್ರಾಮ ಪಂಚಾಯತಿಗಳನ್ನು ಪಟ್ಟಣ ಪಂಚಾಯತಿಗಳನ್ನಾಗಿ ಮೇಲ್ದರ್ಜೆಗೆ ಏರಿಸಿದ್ದರು.
ಪಟ್ಟಣ ಪಂಚಾಯ್ತಿ ಆದ ಬಳಿಕ,ಗ್ರಾಮೀಣ ಕೃಪಾಂಕ,ನರೇಗಾ,ಯೋಜನೆಯ ಕಾರ್ಮಿಕರ ವೇತನದ ಪ್ರಮಾಣ ಹಾಗು ಆಸ್ತಿ ತೆರಿಗೆ ಹೆಚ್ಚಳವಾದ ಹಿನ್ನಲೆಯಲ್ಲಿ ಮಚ್ಛೆ ಮತ್ತು ಪೀರನವಾಡಿ ಎರಡೂ ಗ್ರಾಮಗಳ ಗ್ರಾಮಸ್ಥರು ನಮಗೆ ಪಟ್ಟಣ ಪಂಚಾಯತಿ ಬೇಡ,ನಮಗೆ ಗ್ರಾಮ ಪಂಚಾಯತಿ ಬೇಕು,ಎಂದು ಪಟ್ಟು ಹಿಡಿದ ಹಿನ್ನಲೆಯಲ್ಲಿ ಶಾಸಕ ಅಭಯ ಪಾಟೀಲ ಎರಡೂ ಗ್ರಾಮಗಳ ಬೇಕು,ಮತ್ತು ಬೇಡ ಎನ್ನುವ ಎರಡೂ ಒತ್ತಾಯಗಳಿಗೂ ಸ್ಪಂದಿಸಿದ್ದಾರೆ.