ಬೆಳಗಾವಿ- ಸೋಶೀಯಲ್ ಮೀಡಿಯಾ ಖಿಲಾಡಿಗಳು ರಿಲೀಸ್ ಮಾಡುತ್ತಿರುವ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳ ಖೊಟ್ಟಿ ಪಟ್ಟಿಗಳ ಹಾವಳಿ ಬೆಳಗಾವಿ ಜಿಲ್ಲೆಯಲ್ಲಿ ಕೋಲಾಹಲ ಸೃಷ್ಢಿಸಿವೆ.
ಅತ್ಯಂತ ವ್ಯವಸ್ಥಿತವಾಗಿ ಯಾರಿಗೂ ಅಮುಮಾನ ಬಾರದ ರೀತಿಯಲ್ಲಿ ಪಕ್ಷದ ಸೀಲು ಜೊತೆಗೆ ಪಕ್ಷದ ಪ್ರಮುಖರ ಸಹಿಯೊಂದಿಗೆ ಫೇಕ್ ಪಟ್ಟಿಯನ್ನು ಖಿಲಾಡಿಗಳು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಡುತ್ತಿದ್ದಾರೆ.ಇವತ್ತು ಬೆಳ್ಳಂ ಬೆಳಗ್ಗೆ ಕಾಂಗ್ರೆಸ್ಸಿನ ಎರಡನೇಯ ಕಂತಿನ ಪಟ್ಟಿಯನ್ನು ರಿಲೀಸ್ ಮಾಡಿ ಎಲ್ಲರೂ ಹೌಹಾರುವಂತೆ ಮಾಡಿದ್ದು ಸತ್ಯ ಯಾಕಂದ್ರೆ ಈ ಪಟ್ಟಿಯಲ್ಲಿ ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಿನಯ ನಾವಲಗಟ್ಟಿ ಅವರ ಹೆಸರೂ ಇತ್ತು ಹೀಗಾಗಿ ಈ ಪಟ್ಟಿ ಇವತ್ತು ಬೆಳಗಾವಿ ನಗರದಲ್ಲಿ ದಿನವೀಡಿ ಸದ್ದು ಮಾಡಿತು.
ಬೆಳಗಾವಿ ಉತ್ತರದಿಂದ ವಿನಯ ನಾವಲಗಟ್ಟಿ ಅವರ ಹೆಸರು ಫೈನಲ್ ಎಂದು ಈ ಫೇಕ್ ಪಟ್ಟಿಯಲ್ಲಿ ನಮೂದಿಸಿದ ಕಾರಣ, ಎಲ್ಲರಿಗೂ ಉತ್ತರಿಸಿ ತತ್ತರಿಸಿದ ವಿನಯ ನಾವಲಗಟ್ಟಿ ಫೋನ್ ಸ್ವಿಚ್ಛ ಆಫ್ ಮಾಡಬೇಕಾದ ಪರಿಸ್ಥಿತಿ ಎದುರಾಯಿತು.ಈ ಖೊಟ್ಟಿ ಪಟ್ಟಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಕಾರಣ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಇದು ಅಧಿಕೃತ ಪಟ್ಟಿ ಅಲ್ಲ,ಇದು ಫೇಕ್ ಪಟ್ಟಿ ಎಂದು ಮಾದ್ಯಮಗಳಿಗೆ ಸ್ಪಷ್ಟನೆ ನೀಡಿದ ಬಳಿಕ ಪಟ್ಟಿಯಲ್ಲಿ ಹೆಸರು ಇಲ್ಲದವರು ನಿಟ್ಟಿಸಿರು ಬಿಟ್ಟರು.
ವಿನಯ ನಾವಲಗಟ್ಟಿ ಅವರನ್ನು ಕಾಂಗ್ರೆಸ್ ಪಕ್ಷದ ಪ್ರಮುಖರು ಗುರುತಿಸಲಿಲ್ಲ ಆದ್ರೆ ಸೋಶಿಯಲ್ ಮೀಡಿಯಾ ಖಿಲಾಡಿಗಳು ವಿನಯ ನಾವಲಗಟ್ಟಿ ಅವರ ಹೆಸರನ್ನು ಪಟ್ಟಿಯಲ್ಲಿ ಸೇರಿಸುವ ಮೂಲಕ ಅವರ ಪಕ್ಷ ಸೇವೆಯನ್ನು ಜನ ಮೆಲುಕು ಹಾಕುವಂತೆ ಮಾಡಿದ್ದು ಇವತ್ತಿನ ವಿಶೇಷ.