Breaking News
Home / Breaking News / ಸಾಹುಕಾರ್ ಆಟ,ಇಂದಿನಿಂದ ಬಿಜೆಪಿಗೆ ಸವದಿ ಕಾಟ! ಮತದಾರರು ಯಾರಿಗೆ ಕಲೀಸ್ತಾರೆ ಪಾಠ!!

ಸಾಹುಕಾರ್ ಆಟ,ಇಂದಿನಿಂದ ಬಿಜೆಪಿಗೆ ಸವದಿ ಕಾಟ! ಮತದಾರರು ಯಾರಿಗೆ ಕಲೀಸ್ತಾರೆ ಪಾಠ!!

ಸವದಿ ಕಾಂಗ್ರೆಸ್ಸಿಗೆ ಹೋದ್ಮೇಲೆ, ಬಿಜೆಪಿಯಲ್ಲಿ ಹೆಚ್ಚಿದ ಸಾಹುಕಾರ್ ಜವಾಬ್ದಾರಿ!!

ಬೆಳಗಾವಿ- ಬೆಳಗಾವಿ ಜಿಲ್ಲೆಯ ಹಿರಿಯ ನಾಯಕರಾದ ಉಮೇಶ್ ಕತ್ತಿ,ಸುರೇಶ್ ಅಂಗಡಿ ಅವರು ಅಗಲಿದ ಬಳಿಕ ಲಕ್ಷ್ಮಣ ಸವದಿ ಹಾಗೂ ರಮೇಶ್ ಜಾರಕಿಹೊಳಿ ಮತ್ತು ಈರಣ್ಣಾ ಕಡಾಡಿ ಅವರು ಬೆಳಗಾವಿ ಜಿಲ್ಲೆಯ ಬಿಜೆಪಿಯ ಜವಾಬ್ದಾರಿ ನಿಭಾಯಿಸುತ್ತ ಬಂದಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ.

ಈಗ ಲಕ್ಷ್ಮಣ ಸವದಿ ಕಾಂಗ್ರೆಸ್ ಗರಡಿ ಸೇರಿಕೊಂಡಿದ್ದಾರೆ.ಇವತ್ತು ಅಥಣಿ ಕ್ಷೇತ್ರದ ಕಾಂಗ್ರೆದ್ ಬಿ ಫಾರ್ಮ್ ಸಮೇತ ಅವರು ಬೆಂಗಳೂರಿನಿಂದ ಬೆಳಗಾವಿಗೆ ಮರಳುತ್ತಿದ್ದಾರೆ. ಇವತ್ತಿನಿಂದ ಲಕ್ಷ್ಮಣ ಸವದಿ ಅವರ ಹೊಸ ವರಸೆ ಶುರುವಾಗಲಿದೆ‌.ಬಹುತೇಕ ಇಂದಿನಿಂದಲೇ ಲಕ್ಷ್ಮಣ ಸವದಿಯ ಬಿಜೆಪಿ ವಿರುದ್ಧ ಟಾಕ್ ವಾರ್ ಶುರುವಾಗುವ ಎಲ್ಲ ಸಾಧ್ಯತೆಗಳಿದ್ದು,ಸವದಿ ಅವರು ಟಾಕ್ ವಾರ್ ನಲ್ಲಿ ಕೇವಲ ಬಿಜೆಪಿಯನ್ನು ಟಾರ್ಗೆಟ್ ಮಾಡ್ತಾರೋ ಅಥವಾ ರಮೇಶ್ ಜಾರಕಿಹೊಳಿ ಅವರನ್ನೂ ಸಹ ಟಾರ್ಗೆಟ್ ಮಾಡ್ತಾರೋ ಅನ್ನೋದು ಕಾದು ನೋಡಬೇಕಾಗಿದೆ.

ಅಥಣಿ,ಬೆಳಗಾವಿ ಗ್ರಾಮೀಣ,ಜೊತೆಗೆ ಸ್ವ ಕ್ಷೇತ್ರ ಗೋಕಾಜ್ ನಲ್ಲಿ ಬಿಜೆಪಿಯನ್ನು ಗೆಲ್ಲಿಸುವ ದೊಡ್ಡ ಜವಾಬ್ದಾರಿ ರಮೇಶ್ ಜಾರಕಿಹೊಳಿ ಅವರ ಮೇಲಿದೆ.ಕಾಲಿಗೆ ಚಕ್ರ ಕಟ್ಟಿಕೊಂಡು ಓಡಾಡುವದರಲ್ಲಿ ನಿಸ್ಸೀಮರಾಗಿರುವ ರಮೇಶ್ ಜಾರಕಿಹೊಳಿ ಅವರು ಪ್ರಸಕ್ತ ಚುನಾವಣೆಯಲ್ಲಿ ಯಾವ ರೀತಿಯಲ್ಲಿ ರಾಜಕೀಯ ಎದುರಾಳಿಗಳನ್ನು ಎದುರಿಸುತ್ತಾರೋ ಅನ್ನೋದು ರಮೇಶ್ ಜಾರಕಿಹೊಳಿ ಅವರಿಗೆ ದೊಡ್ಡ ಸವಾಲಾಗಿದೆ.

ಸವಾಲು ಸ್ವೀಕರಿಸಿ,ರಾಜಕೀಯ ಎದುರಾಳಿಗಳನ್ನು ಎದುರಿಸಿ,ಹಠ ಸಾಧಿಸುತ್ತಲೇ ಬಂದಿರುವ ರಮೇಶ್ ಜಾರಕಿಹೊಳಿ ನಿನ್ನೆ ಅಥಣಿ ಕ್ಷೇತ್ರದಿಂದ ತಮ್ಮ ಆಟ ಶುರು ಮಾಡಿದ್ದಾರೆ.ಇವತ್ತು ಲಕ್ಷ್ಮಣ ಸವದಿ ಅಥಣಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ತಮ್ಮ ಕ್ಷೇತ್ರಕ್ಕೆ ಮರಳುತ್ತಿದ್ದು,ಅವರು ಯಾವ ರೀತಿಯ ಆಟ ಆಡ್ತಾರೆ ಎನ್ನುವ ವಿಚಾರ ಈಗ ಎಲ್ಲರಲ್ಲಿ ಕುತೂಹಲ ಮೂಡಿಸಿದ್ದು, ಮಾಜಿ ಸಚಿವ ಶಶಿಕಾಂತ ನಾಯಕ ಅವರು ಸಹ ಸವದಿ ಅವರ ಜೊತೆಯಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಿದ್ದು,ಹುಕ್ಕೇರಿ ಕ್ಷೇತ್ರದಲ್ಲಿ ಶಶಿಕಾಂತ ನಾಯಕ ಅವರು ಕಾಂಗ್ರೆಸ್ ಅಭ್ಯರ್ಥಿ ಎ.ಬಿ ಪಾಟೀಲ ಅವರ ಗೆಲುವಿಗೆ ಶ್ರಮಿಸುವ ಸಂಕಲ್ಪ ಮಾಡಿದ್ದಾರೆ.

ಬೆಳಗಾವಿ ಜಿಲ್ಲಾ ರಾಜಕಾರಣದಲ್ಲಿ ಅದಲ್ ,ಬದಲ್ ಆಗಿದ್ದು, ಜಿಲ್ಲೆಯ ಪಾಲಿಟೀಕ್ಸ್ ಈಗ ರಂಗೇರಿದೆ.ಬಿಜೆಪಿಯಲ್ಲಿ ಬಂಡಾಯದ ಭೂಕಂಪವಾದ್ರೆ ಇತ್ತ ಕಾಂಗ್ರೆಸ್ಸಿನಲ್ಲಿ ಟಿಕೆಟ್ ಹಂಚಿಕೆಯ ತಿಕ್ಕಾಟ ಇನ್ನೂ ಶಮನ ಆಗಿಲ್ಲ.

Check Also

ಮನೆ,ಮನೆಗೆ ಹೋಗಿ ಮತದಾರರ ಚೀಟಿ ವಿತರಿಸಲು ಡಿಸಿ ನಿತೇಶ್ ಪಾಟೀಲ್ ಸೂಚನೆ

ಬೆಳಗಾವಿ, ):ಮತದಾರರಿಗೆ ತಮ್ಮ ಮತಗಟ್ಟೆಗಳ ಬಗ್ಗೆ ಮುಂಚಿತವಾಗಿ ಮತದಾರರ ಚೀಟಿ(ವೋಟರ್ ಸ್ಲಿಪ್)ಗಳನ್ನು ನೀಡಿದರೆ ಮತದಾನ ಮಾಡಲು ಅನುಕೂಲವಾಗಲಿದೆ. ಆದ್ದರಿಂದ ಪ್ರತಿಯೊಂದು …

Leave a Reply

Your email address will not be published. Required fields are marked *