Breaking News

ರಾಜಕೀಯ ಕಡು ವೈರಿಗಳಾದ್ರೂ, ಮುಖಾ ಮುಖಿ ಆದಾಗ ಕೈಮುಗಿದ್ರು!!

ಬೆಳಗಾವಿ- ಬಾಲಚಂದ್ರ ಜಾರಕಿಹೊಳಿ ಅವರ ರಾಜಕಾರಣ ಬಿಟ್ಟು ಅವರ ಸದ್ಗುಣಗಳ ಬಗ್ಗೆ ಬರೆಯುತ್ತಾ ಹೋದಲ್ಲಿ ಒಂದು ದೊಡ್ಡ ಕಾದಂಬರಿ ಆಗುತ್ತೆ, ಅದರ ಹೆಸರು ಸದ್ಗುಣಿ ಎಂದೇ ಇಡಬೇಕಾಗುತ್ತದೆ.

ಸಾಮಾಜಿಕ ಕಾರ್ಯಕರ್ತ ಭೀಮಪ್ಪ ಗಡಾದ್ ಅರಭಾವಿ ಕ್ಷೇತ್ರದಲ್ಲಿ ಬಾಲಚಂದ್ರ ಜಾರಕಿಹೊಳಿ ಅವರಿಗೆ ಪ್ರಬಲ ಎದುರಾಳಿ,ರಾಜಕೀಯ ಕಡುವೈರಿ ಆದ್ರೆ ನಿನ್ನೆ ಬುಧವಾರ ಬಾಲಚಂದ್ರ ಜಾರಕಿಹೊಳಿ ಮತ್ತು ಭೀಮಪ್ಪಾ ಗಡಾದ್ ಇಬ್ಬರೂ ಏಕಕಾಲಕ್ಕೆ ಮೂಡಲಗಿ ತಹಶಿಲ್ದಾರ ಕಚೇರಿಗೆ ನಾಮಪತ್ರ ಸಲ್ಲಿಸಲು ಬಂದಾಗ,ಆಕಸ್ಮಿಕವಾಗಿ ಇಬ್ಬರೂ ನಾಯಕರು ಮುಖಾ ಮುಖಿಯಾದ್ರು‌

ಬಾಲಚಂದ್ರ ಜಾರಕಿಹೊಳಿ ಅವರು ಭೀಮಪ್ಪ ಗಡಾದ್ ಅವರಿಗೆ ನಮಸ್ಕಾರ್ರೀ ಗಡಾದ ಅವರೇ ಅರಾಮ್ ಇದ್ದೀರಿ,ಎಂದು ಕೈ ಮುಗಿದಾಗ ,ಭೀಮಪ್ಪಾ ಗಡಾದ್ ಅವರಿಗೆ ಕೈ ಮುಗಿದು ಅತ್ಯಂತ ಆತ್ಮೀಯವಾಗಿ ಮಾತನಾಡಿದ್ರು.ಭೀಮಪ್ಪಾ ಗಡಾದ್ ಅವರೂ ಸಹ ಬಾಲಚಂದ್ರ ಜಾರಕಿಹೊಳಿ ಅವರಿಗೆ ಅತ್ಯಂತ ಪ್ರೀತಿಯಿಂದ ಮಾತನಾಡಸಿದ್ರು

ಮಾನವೀಯ ಸಂಬಂಧಗಳ ಎದುರು ರಾಜಕಾರಣ ನಗಣ್ಯ,ಎನ್ನುವದನ್ನು ಬಾಲಚಂದ್ರ ಜಾರಕಿಹೊಳಿ‌ ಅವರು ಇವತ್ತು ತೋರಿಸಿದ್ರು.ಬಾಲಚಂದ್ರ ಜಾರಕಿಹೊಳಿ ಅವರಿಗೆ ಅವರ ಅಭಿಮಾನಿಗಳು ಗೋಕಾಕ್ ತಾಲ್ಲೂಕಿನ ದೇವರು,ದಾನಶೂರ,ಅಭಿವೃದ್ಧಿಯ ಹರಿಕಾರ,ಎಂದು ಕರೆಯುತ್ತಾರೆ.

Check Also

ಖಡಕ್ ಪೋಲೀಸ್ ಅಧಿಕಾರಿ ಭರಮಣಿಗೆ ಅವಮಾನ, ಸಿಎಂ ವಿರುದ್ಧ ಬಿಜೆಪಿ ವಾಗ್ದಾಳಿ

ಬೆಳಗಾವಿ-ಸಿಎಂ ಖುರ್ಚಿ ಕಳೆದುಕೊಳ್ಳುವ ಭೀತಿಯಲ್ಲಿರುವ ಸಿದ್ರಾಮಯ್ಯ ಸಹನೆ ಕಳೆದುಕೊಂಡಿದ್ದು ಪ್ರಾಮಾಣಿಕ, ನಿಷ್ಠಾವಂತ ಅಧಿಕಾರಿಗಳ ಜೊತೆ ಅಸಭ್ಯವಾಗಿ ವರ್ತಿಸತ್ತಿದ್ದಾರೆ,ಮುಖ್ಯಮಂತ್ರಿಗಳ ಅಸಭ್ಯ ವರ್ತನೆಯಿಂದ …

Leave a Reply

Your email address will not be published. Required fields are marked *