Breaking News

ಅಂದು ರಾಷ್ಟ್ರಪಿತ ವಾಸ್ತವ್ಯ ಇಂದು ವಿಶ್ವನಾಯಕ ವಾಸ್ತವ್ಯ….!!

 

 

ಬೆಳಗಾವಿ- ಸ್ವಾತಂತ್ರ್ಯ ಸಂಗ್ರಾಮದ ಕ್ರಾಂತಿಯ ನೆಲ ಐತಿಹಾಸಿಕ ಬೆಳಗಾವಿಯಲ್ಲಿ 1924 ರಲ್ಲಿ ವಾಸ್ತವ್ಯ ಮಾಡಿದ್ದು ಇತಿಹಾಸ,ಈಗ ವಿಶ್ವಗುರು ಎಂದೇ ಪ್ರಸಿದ್ಧಿ ಪಡೆದಿರುವ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಶನಿವಾರ ರಾತ್ರಿ ಬೆಳಗಾವಿ ನಗರದಲ್ಲಿ ವಾಸ್ತವ್ಯ ಮಾಡುತ್ತಿರುವದು ಹೊಸ ಇತಿಹಾಸ.

ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಶನಿವಾರ ಪಕ್ಕದ ಮಹಾರಾಷ್ಡ್ರದ ಕೊಲ್ಹಾಪೂರದಲ್ಲಿ ರೋಡ್ ಶೋ ಮುಗಿಸಿ ಇಂದು ರಾತ್ರಿ ಬೆಳಗಾವಿಗೆ ಆಗಮಿಸಲಿದ್ದಾರೆ ಬೆಳಗಾವಿ ನಗರದ ಹೊರ ವಲಯದಲ್ಲಿ ಇರುವ ಐಟಿಸಿ ಕಂಪನಿಯ ವೆಲ್ ಕಮ್ ಪಂಚತಾರಾ ಹೊಟೇಲ್ ನಲ್ಲಿ ವಾಸ್ತವ್ಯ ಮಾಡಲಿದ್ದಾರೆ.ಪ್ರಧಾನಿ ನರೇಂದ್ರ ಮೋದಿ ವಾಸ್ತವ್ಯದ ಹಿನ್ನಲೆಯಲ್ಲಿ ವೆಲ್ ಕಮ್ ಹೊಟೇಲ್ ನಲ್ಲಿ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ

ಕಾಕತಿಯಲ್ಲಿ ಜೊಲ್ಲೆ ಗ್ರೂಪ್‌ನಿಂದ ನಿರ್ಮಾಣಗೊಂಡಿರುವ ಐಟಿಸಿ ವೆಲ್ಕಂ ಹೋಟೆಲ್‌ನಲ್ಲಿ ಮೋದಿ ವಾಸ್ತವ್ಯ ಹೂಡಲಿದ್ದು, ಸುಮಾರು 5 ಏಕರೆ ವಿಸ್ತೀರ್ಣದಲ್ಲಿ ನಿರ್ಮಾಣಗೊಂಡಿರುವ ಐಟಿಸಿ ವೆಲ್ಕಂ ಹೋಟೆಲ್‌ 116 ರೂಮ್ ಗಳನ್ನ ಹೊಂದಿದ್ದು ಪ್ರಧಾನಿ ಮೋದಿ ಆತಿಥ್ಯಕ್ಕೆ ಐಟಿಸಿ ವೆಲ್ಕಂ ಹೋಟೆಲ್ ಸಜ್ಜಾಗಿದೆ. ಎಸ್ ಪಿಜಿ ಅಧಿಕಾರಿಗಳು ಹೋಟೆಲ್‌ ನ್ನು ಈಗಾಗಲೇ ತಮ್ಮ ಸುಪರ್ದಿಗೆ ತೆಗೆದುಕೊಂಡಿದ್ದಾರೆ.ಇಂದು ರಾತ್ರಿ ಹೊಟೇಲ್ ವೆಲ್ ಕಮ್ ನಲ್ಲಿ ವಾಸ್ತವ್ಯ ಮಾಡುವ ಪ್ರಧಾನಿ ನರೇಂದ್ರ ಮೋದಿ ನಾಳೆ ಭಾನುವಾರ ಬೆಳಗ್ಗೆ 10-00 ಗಂಟೆಗೆ ಬೆಳಗಾವಿಯ ಯಡಿಯೂರಪ್ಪ ಮಾರ್ಗದಲ್ಲಿ ಇರುವ ಮಾಲಿನಿ ಸಿಟಿಯಲ್ಲಿ ನಡೆಯುವ ಬಿಜೆಪಿ ಪ್ರಚಾರ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಎದುರು ಹಾರಾಟ ಇಲ್ಲ..

ಇಂದು ಬೆಳಗಾವಿಗೆ ಪ್ರಧಾನಿ ಮೋದಿ ಆಗಮಿಸುತ್ತಿದ್ದು,ಭದ್ರತೆಯ ದೃಷ್ಟಿಯಿಂದ ಡ್ರೋನ್ ಹಾರಾಟಕ್ಕೆ ನಿಷೇಧ ಹೇರಿದ ಜಿಲ್ಲಾಡಳಿತ ಆದೇಶ ಹೊರಡಿಸಿದೆ.ಡ್ರೋನ್ ಹಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ನಿತೇಶ ಪಾಟೀಲ್ ಆದೇಶ ಮಾಡಿದ್ದಾರೆ.

27-4-24 ರ ಮುಂಜಾನೆ 6 ಗಂಟೆಯಿಂದ 28-4-24 ರ ಸಂಜೆ 6 ಗಂಟೆಯವರಗೆ ದ್ರೋಣ ಹಾರಾಟ ನಿಷೇಧಿಸಲಾಗಿದೆ.ಬೆಳಗಾವಿಯಲ್ಲಿ ನೋ ಪ್ಲೈ ಜೋನ್ ಎಂದು ಘೋಷಿಸಲಾಗಿದೆ.ಬೆಳಗಾವಿ ತಾಲೂಕಿನ ವ್ಯಾಪ್ತಿಯಾದ್ಯಂತ ರೆಡ್ ಜೋನ್ ಎಂದು ಘೋಷಿಸಲಾಗಿದೆ.

ಮೋದಿ ಸ್ವಾಗತಕ್ಕೆ ಹೊಸ ಸಂಪ್ರದಾಯ

ಇಂದು ಪ್ರಧಾನಿ ನರೇಂದ್ರ ಮೋದಿ ಬೆಳಗಾವಿಗೆ ಆಗಮನ ಹಿನ್ನೆಲೆಯಲ್ಲಿಪ್ರಧಾನಿ ಸ್ವಾಗತಕ್ಕೆ ಹದಿನೈದು ಸಮಾಜದ ಪ್ರಮುಖರಿಗೆ ಅವಕಾಶ ಮಾಡಿಕೊಡಲಾಗಿದೆ ಎಂದು
ಬೆಳಗಾವಿಯಲ್ಲಿ ಶಾಸಕ ಅಭಯ್ ಪಾಟೀಲ್ ಹೇಳಿದ್ದಾರೆ.
ಹದಿನೈದು ವಿವಿಧ ಸಮಾಜದ ಮುಖಂಡರು, ಪ್ರಮುಖರು ಪ್ರಧಾನಿ ಸ್ವಾಗತ ಮಾಡಿಕೊಳ್ಳಲಿದ್ದಾರೆ.
ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸ್ವಾಗತ ಮಾಡಿಕೊಳ್ಳಲಿದ್ದಾರೆ‌. ಎಂದು ಶಾಸಕ ಅಭಯ ಪಾಟೀಲ ಮಾಹಿತಿ ನೀಡಿದ್ದಾರೆ.

ಪ್ರಧಾನಿ ಕಾರ್ಯಕ್ರಮಕ್ಕೆ ಎರಡು ಲಕ್ಷಕ್ಕೂ ಅಧಿಕ ಜನರನ್ನ ಸೇರಿಸಲು ಸಿದ್ದತೆ.ಬೆಳಗಾವಿ ಗ್ರಾಮೀಣ, ದಕ್ಷಿಣ, ಉತ್ತರ ಕ್ಷೇತ್ರದಿಂದಲೇ ಒಂದು ಲಕ್ಷ ಜನರನ್ನ ಸೇರಿಸುತ್ತೇವೆ.
ಇಂದು ರಾತ್ರಿ ಪ್ರಧಾನಿ ವಾಸ್ತವ್ಯ ಹೂಡುತ್ತಾರೆ ಆದ್ರೇ ಯಾವುದೇ ಸಭೆ, ಭೇಟಿ ನಿಗದಿಯಾಗಿಲ್ಲ.
ಬೆಳಗಾವಿಯಲ್ಲಿ ಮಾಧವಿ ಲತಾ ಕರೆತರಲು ಯತ್ನಿಸುತ್ತಿದ್ದೇವೆ.ಮಹಿಳಾ ಬಿಜೆಪಿ ಕಾರ್ಯಕರ್ತರ ಬೇಡಿಕೆ ಇದೆ.ತೆಲಂಗಾಣ ನಾಯಕರ ಜೊತೆಗೆ ಚರ್ಚೆ ಮಾಡಿ ಕರೆತರುವ ಪ್ರಯತ್ನ.ಮಾಡಲಾಗುವದು ಎಂದು ಅಭಯ ಪಾಟೀಲ ಭರವಸೆ ನೀಡಿದ್ದಾರೆ.

Check Also

ವೀಕ್ಲಿ ಮ್ಯಾರೇಜ್,ಇದು ಲಕ್ಷ ಲಕ್ಷ ರೂಗಳ ಪ್ಯಾಕೇಜ್ ಹುಡುಗರ ಲೈಫ್ ಡ್ಯಾಮೇಜ್ …..!!!

ಬೆಳಗಾವಿ – ಹೆಣ್ಣು ಮಕ್ಕಳ ಮಾರಾಟ ಆಯ್ತು,ಹನಿ ಟ್ರ್ಯಾಪ್ ಗೋಳಾಟ ಆಯ್ತು ಈಗ ಹೊಸದೊಂದ ಆಟ ಶುರುವಾಗಿದೆ ಇದು ಮದ್ಯ …

Leave a Reply

Your email address will not be published. Required fields are marked *