Breaking News
Home / Breaking News / ಬೆಳಗಾವಿ ಡಿಸಿ ಆರ್ಡರ್ ಹತ್ತು ರೂ ಕ್ವಾಯಿನ್ ನಡೀತೈತಿ..

ಬೆಳಗಾವಿ ಡಿಸಿ ಆರ್ಡರ್ ಹತ್ತು ರೂ ಕ್ವಾಯಿನ್ ನಡೀತೈತಿ..

10 ರೂಪಾಯಿ ನಾಣ್ಯ ಚಾಲ್ತಿಯಲ್ಲಿದೆ: ಜಿಲ್ಲಾಧಿಕಾರಿ ನಿತೇಶ್ ಪಾಟೀಲ

ಬೆಳಗಾವಿ, – ಹತ್ತು ರೂಪಾಯಿ ನಾಣ್ಯಗಳು ಚಲಾವಣೆಯಲ್ಲಿವೆ ಎಂದು ಭಾರತೀಯ ರಿಜರ್ವ್ ಬ್ಯಾಂಕು ಈಗಾಗಲೇ ಸ್ಪಷ್ಟಪಡಿಸಿರುವುದರಿಂದ ಸಾರ್ವಜನಿಕರು‌ ಹಾಗೂ ವ್ಯಾಪಾರಸ್ಥರು ಮುಕ್ತವಾಗಿ ಇವುಗಳನ್ನು ಚಲಾವಣೆ ಮಾಡಬಹುದು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದ್ದಾರೆ.

ಬೆಳಗಾವಿ ಜಿಲ್ಲೆಯ ಕೆಲವೆಡೆ ಹತ್ತು ರೂಪಾಯಿ ನಾಣ್ಯವನ್ನು ಸ್ವೀಕರಿಸಲು ಕೆಲವು ವರ್ತಕರು-ವ್ಯಾಪಾರಸ್ಥರು ನಿರಾಕರಿಸುತ್ತಿದ್ದಾರೆ ಎಂಬ ದೂರುಗಳಿವೆ. ಆದರೆ ಈ ನಾಣ್ಯಗಳು ಚಲಾವಣೆಯಲ್ಲಿರುತ್ತವೆ ಎಂದು ನವೆಂಬರ್ 20, 2016 ರಂದು ಭಾರತೀಯ ರಿಜರ್ವ್ ಬ್ಯಾಂಕು ಸ್ಪಷ್ಟಪಡಿಸಿದ್ದು, ಈ ಕುರಿತು ಪ್ರಕಟಣೆಯನ್ನು ಕೂಡ ನೀಡಿರುತ್ತದೆ.

ಹತ್ತು ರೂಪಾಯಿ ಚಲಾವಣೆಯಲ್ಲಿದ್ದಾಗ್ಯೂ ಕೆಲವು ಕಡೆಗಳಲ್ಲಿ ಇವುಗಳನ್ನು ಸ್ವೀಕರಿಸಲು ವ್ಯಾಪಾರಸ್ಥರು ಹಿಂದೇಟು‌ ಹಾಕುತ್ತಿರುವುದರಿಂದ ದೈನಂದಿನ ವಹಿವಾಟುಗಳನ್ನು ನಡೆಸಲು ಅನಾನುಕೂಲವಾಗುತ್ತಿದೆ ಎಂದು ಬೆಳಗಾವಿ ಚೇಂಬರ್ ಆಫ್ ಕಾಮರ್ಸ್ ಮತ್ತು ‌ಕೈಗಾರಿಕೆಗಳ ಸಂಘವು ನೀಡಿರುವ ಮನವಿಪತ್ರದಲ್ಲಿ ತಿಳಿಸಿರುತ್ತದೆ.
ನಾಣ್ಯಗಳನ್ನು ವಿತರಿಸಲು ಬ್ಯಾಂಕುಗಳು ಸಿದ್ಧವಾಗಿರುವುದರಿಂದ ಹತ್ತು ನಾಣ್ಯಗಳ ಚಲಾವಣೆಗೆ ಆದ್ಯತೆ ನೀಡಬೇಕು ಎಂದು ಸಂಘ‌ ತಿಳಿಸಿರುತ್ತದೆ.

ಆದ್ದರಿಂದ ಹತ್ತು ರೂಪಾಯಿ ನಾಣ್ಯಗಳನ್ನು ಈ ಮುಂಚಿನಂತೆ ಸಾರ್ವಜನಿಕರು ಹಾಗೂ ವ್ಯಾಪಾರಸ್ಥರು ಚಲಾವಣೆ ಮಾಡಬಹುದು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

DC immediately called the City buss department and asked the bus services to accept the coins. He also assured us that he along with the Banks and concerned departments will issue a press note declaring that the Rs. 10/- coins are legal tender and request everyone to start using them
****

Check Also

ಗೋ ಬ್ಯಾಕ್ ಸಂಧಾನಕ್ಕಾಗಿ ,ದಿಢೀರ್ ಬೆಳಗಾವಿಗೆ ಯಡಿಯೂರಪ್ಪ…!!

ಬೆಳಗಾವಿ- ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ಬೆಳಗಾವಿ ಕ್ಷೇತ್ರದಿಂದ ಸ್ಪರ್ದಿಸುವ ವಿಚಾರದಲ್ಲಿ ಬಿಜೆಪಿಯಿಂದಲೇ ಗೋ ಬ್ಯಾಕ್ ಆಂದೋಲನ ಶುರುವಾದ …

Leave a Reply

Your email address will not be published. Required fields are marked *