*ವೀರಯೋಧ ಕ್ಯಾಪ್ಟನ್ ರಾಮಪ್ಪ ಕೊಳ್ಳಿ ಇನ್ನಿಲ್ಲ.*
1992 ರ ಆಪರೇಷನ್ ಬ್ಲೂ ಸ್ಟಾರ್ ಕಾರ್ಯಾಚರಣೆ, 1999 ಕಾರ್ಗಿಲ್ ಯುದ್ಧ ಸೇರಿದಂತೆ ದೇಶದ ಅನೇಕ ಸೈನಿಕ ಕಾರ್ಯಾಚರಣೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಭಾರತೀಯ ಸೇನೆಯಲ್ಲಿ ಅಮೋಘ 30 ವರ್ಷಗಳ ಸೇವೆ ಸಲ್ಲಿಸಿದ ಇವರು ನಿವೃತ್ತಿ ನಂತರದ ಜೀವನವನ್ನು ಸ್ವಗ್ರಾಮ ಸವದತ್ತಿ ತಾಲೂಕಿನ ಹಿರೇಕುಂಬಿ ಗ್ರಾಮದಲ್ಲಿ ಕಳೆಯುತ್ತಿದ್ದರು. ಇಂದು ಕೊನೆಯುಸಿರೆಳೆದರು.
ರಾಮಪ್ಪ ಬಿ.ಕೊಳ್ಳಿಯವರು ಹುಟ್ಟೂರು ಹಿರೇಕುಂಬಿಯಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಪೂರೈಸಿ, ಭಾರತೀಯ ಸೇನೆಗೆ 1992 ಮಾರ್ಚ್ 28 ರಂದು ಸೇರಿ 30 ವರ್ಷಗಳ ಕಾಲ ಸೇವೆಗೈದು ಕಳೆದ ವರ್ಷ ಮಾರ್ಚ್ 31 ರಂದು ನಿವೃತ್ತರಾಗಿದ್ದರು.
ವೀರಯೋಧರಾಗಿ ಪುಣೆ,ರಾಜಸ್ಥಾನ,ಡೆಹ್ರಾಡೂನ್ ,ಕಾರ್ಗಿಲ್ ಯುದ್ಧದ ಸಮಯದಲ್ಲಿ ಜಮ್ಮು ಮತ್ತು ಕಾಶ್ಮೀರದ ದ್ರಾಸ್ ವಲಯದಲ್ಲಿ ,
2000-2010 ರವರೆಗೆ ಆಪರೇಷನ್ ಪರಾಕ್ರಮ, ಉತ್ತರ ಕಾಶ್ಮೀರದ ಅಮರನಾಥ ಸುರಕ್ಷತಾ ಕಾರ್ಯಾಚರಣೆ, ಸೋನಾಮಾರ್ಗ ಸುರಕ್ಷತೆ ಮತ್ತಿತರ ಪ್ರಮುಖ ಸೇವೆಗಳ ಸಂದರ್ಭದಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆಗೈದಿದ್ದಾರೆ.
ಬೆಳಗಾವಿಯ ಇನ್‌ಫಂಟ್ರಿ ಕಮಾಂಡೋ ಶಾಲೆಯಲ್ಲಿಯೂ ಕ್ಯಾಪ್ಟನ್ ಆಗಿ ಸೇವೆಗೈದಿದ್ದಾರೆ.
ಸುದೀರ್ಘ 30 ವರ್ಷಗಳ ಕಾಲ ದೇಶಸೇವೆಗೈದು, ನಿವೃತ್ತಿ ನಂತರ ಗ್ರಾಮದಲ್ಲಿದ್ದವರನ್ನು ಕಳೆದುಕೊಂಡು ಹಿರೇಕುಂಬಿ ಗ್ರಾಮದ ಗ್ರಾಮಸ್ಥರು ಕಂಬನಿ ಮಿಡಿದಿದ್ದಾರೆ.
ಮೃತರು ಪತ್ನಿ, ಇಬ್ಬರು ಪುತ್ರಿಯರು, ಓರ್ವ ಪುತ್ರ, ಅಳಿಯ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯು ಇಂದು ಏಪ್ರಿಲ್ 21.04.2023 ಶುಕ್ರವಾರದಂದು ಸಂಜೆ 06 ಘಂಟೆಗೆ ಹೀರೆಕುಂಬಿ ಗ್ರಾಮದಲ್ಲಿ ಜರುಗಲಿದೆ.