Breaking News
Home / Breaking News / ಆಕ್ಷೇಪಣೆಗಳ,ಸುಧೀರ್ಘ ವಿಚಾರಣೆ, ರತ್ನಾ ಮಾಮನಿ ನಾಮಪತ್ರ ಅಂಗೀಕಾರ!

ಆಕ್ಷೇಪಣೆಗಳ,ಸುಧೀರ್ಘ ವಿಚಾರಣೆ, ರತ್ನಾ ಮಾಮನಿ ನಾಮಪತ್ರ ಅಂಗೀಕಾರ!

ಬೆಳಗಾವಿ- ಸವದತ್ತಿ ಯಲ್ಲಮ್ಮನ ಮತಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ರತ್ನಾ ಮಾಮನಿಯವರ ನಾಮಪತ್ರ ತಿಸ್ಕರಿಸಬೇಕು ಎಂದು ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷದ ಅಭ್ಯರ್ಥಿಗಳು ಆಕ್ಷೇಪಣೆ ಸಲ್ಲಿಸಿದ್ದರಿಂದ ನಿನ್ನೆಯಿಂದ ಎಲ್ಲರ ಗಮನ ಸೆಳೆದಿದ್ದ ಈ ವಿಚಾರ,ಇವತ್ತು ವಿಚಾರಣೆಯಾಗಿ ರತ್ನಾ ಮಾಮನಿ ನಾಮಪತ್ರ ಇವತ್ತು ಅಂಗೀಕಾರಾಗಿದ್ದುಸವದತ್ತಿ ಬಿಜೆಪಿ ಅಭ್ಯರ್ಥಿಗೆ ಬಿಗ್ ರಿಲೀಫ್ ಸಿಕ್ಕಿದೆ.

ಅವರು ಸಲ್ಲಿಸಿದ್ದ ನಾಮಪತ್ರವನ್ನು ಅಸಿಂಧು ಎಂದು ಘೋಷಿಸಬೇಕು ಅಂತ ವಿಪಕ್ಷಗಳಿಗೆ ಹಿನ್ನೆಡೆಯಾಗಿದೆ. ಫಾರ್ಮ್ ನಂಬರ್ ೨೬ ರ ಅಡಿಯಲ್ಲಿ ಅಫಿಡೆವಿಟ್ ಸಲ್ಲಿಸಿಲ್ಲ ಅಂತ ಆರೋಪಿಸಿ ಆಕ್ಷೇಪಣಾ ದೂರು ಸಲ್ಲಿಸಿದ್ದ ಕೈ ಅಭ್ಯರ್ಥಿ ವಿಶ್ವಾಸ ವೈದ್ಯ ಆಪ್ ಅಭ್ಯರ್ಥಿ ಬಾಪುಗೌಡ ಪಾಟೀಲ್ಗೆ ಹಿನ್ನೆಡೆಯಾಗಿದೆ.ಬೆಳಗಾವಿಯ ಸವದತ್ತಿಯಲ್ಲಿ ಇವತ್ತು ಏನೇನಾಯ್ತು ಅಂತ ನೀವೆ ನೋಡ್ಕೊಂಡ ಬನ್ನಿ

ಯಾರದ್ದೋ ಒತ್ತಡಕ್ಕೆ ಮಣಿದು ಅಂಗೀಕಾರ ಮಾಡಿದ್ದಾರೆ ಅಂದ್ರು ವಿಶ್ವಾಸ ವೈದ್ಯ!

ಶಾಸಕ ಆನಂದ ಮಾಮನಿ ಸಾವಿನಿಂದ ತೆರವಾದ ಸವದತ್ತಿ ವಿಧಾನಸಭಾ ಕ್ಷೇತ್ರಕ್ಕೆ ಅವರ ಪತ್ನಿ ರತ್ನಾ ಮಾಮನಿಗೆ ಟಿಕೆಟ್ ನೀಡಿತ್ತು. ಮೂರು ಬಾರಿ ನಾಮಪತ್ರ ಸಲ್ಲಿಸಿದ್ದ ರತ್ನಾ ಮಾಮನಿ ಜನಪ್ರತಿನಿಧಿಗಳ ಕಾಯ್ದೆ ಉಲ್ಲಂಘಿಸಿದ್ದಾರೆ. ಫಾರ್ಮ್ ನಂಬರ್ ೨೬ ಅಡಿಯಲ್ಲಿ ಅವರು ದಾಖಲೆ ನೀಡಿಲ್ಲ ಅಫಿಡೆವಿಟ್ ಸಲ್ಲಿಸಿಲ್ಲ ಹೀಗಾಗಿ ಅವರ ನಾಮಪತ್ರ ಅಸಿಂಧುಗೊಳಿಸಬೇಕು ಅಂತ ಆಪ್ ಅಭ್ಯರ್ಥಿ ಬಾಪುಗೌಡ ಪಾಟೀಲ್ ಹಾಗೂ ಕಾಂಗ್ರೆಸ್ ಅಭ್ಯರ್ಥಿ ವಿಶ್ವಾಸ ವೈದ್ಯ ಚುನಾವಣಾಧಿಕಾರಿಗಳಿಗೆ ಆಕ್ಷೇಪಣಾ ಅರ್ಜಿ ಸಲ್ಲಿಸಿದ್ದರು ಅರ್ಜಿಯನ್ನು ಕೈಗೆತ್ತಿಕೊಂಡು ಮೂವರನ್ನೂ ಸಹ ವಿಚಾರಣೆಗೆ ಚುನಾವಣಾಧಿಕಾರಿ ಕರೆದಿದ್ದರು. ಲಿಖಿತ ಹೇಳಿಕೆ ನೀಡುವಂತೆ ಸೂಚಿಸಿದ್ದರು‌ ಸತತ ಎರಡು ಗಂಟೆ ವಿಚಾರಣೆ ನಡೆಸಿದ ಚುನಾವಣಾಧಿಕಾರಿ ಮಧ್ಯಾಹ್ನ ೧ ಗಂಟೆಗೆ ತಮ್ಮ ತೀರ್ಪು ಪ್ರಕಟಿಸಿದರು. ರತ್ನಾ ಮಾಮನಿಯವರ ನಾಮಪತ್ರ ಅಂಗೀಕರಿಸಿದರು.

ರತ್ನಾ ಮಾಮನಿಯವರ ನಾಮಪತ್ರ ಅಂಗೀಕಾರದ ಬಳಿಕ ಸವದತ್ತಿ ನಗರದ ಆನಂದ ಮಾಮನಿ ಕಲ್ಯಾಣ ಮಂಟಪದಲ್ಲಿ ಸಭೆ ಮಾಡಲಾಯ್ತು.ಸಭೆ ನಡೆಸಿ ರತ್ನಾ ಮಾಮನಿ ವಿರೋಧಿಗಳಿಗೆ ಠಕ್ಕರ್ ನೀಡುವ ಕೆಲಸ ಮಾಡಿದ್ರು‌.‌ಇನ್ನು ಅವರ ನಾಮಪತ್ರ ಅಂಗೀಕಾರ ಆಗುತ್ತಿದ್ದಂತೆ ತಮ್ಮ ಸ್ವಗೃಹದಲ್ಲಿಯೇ ಸುದ್ದಿಗೋಷ್ಠಿ ಕಡೆದ ವಿಶ್ವಾಸ ವೈದ್ಯ ಚುನಾವಣಾಧಿಕಾರಿಗಳ ಮೇಲೆ ಅವಿಶ್ವಾಸದ ನುಡಿಗಳನ್ನಾಡಿದರು. ಚುನಾವಣಾಧಿಕಾರಿಗಳ ಮೇಲೆ ರಾಜಕೀಯ ಒತ್ತಡ ಇದೆ. ಹೀಗಾಗಿ ಒತ್ತಡಕ್ಕೆ ಮಣಿದು ಚುನಾವಣಾಧಿಕಾರಿ ರಾಜೀವ್ ಕೂಲೇರ್ ಅವರು ನಾಮಪತ್ರ ಅಂಗೀಕಾರ ಮಾಡಿದ್ದಾರೆ ಎಂದು ಆರೋಪಿಸಿದರು..

ಒಟ್ಟಿನಲ್ಲಿ ರತ್ನಾ ಮಾಮನಿ ನಾಮಪತ್ರ ಅಂಗೀಕಾರವಾಗುತ್ತೋ ಅಥವಾ ತಿರಸ್ಕಾರವಾಗುತ್ತೋ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದ್ದು ನಾಮಪತ್ರ ಕಡೆಗೂ ಅಂಗೀಕಾರಗೊಂಡಿದೆ.‌ರಾಜಕೀಯ ಹಗ್ಗ ಜಗ್ಗಾಟದ ನಡುವೆ ಸಧ್ಯ ರತ್ನಾ ಮಾಮನಿ ಕೈ ಮೇಲಾಗಿದೆ. ಚುನಾವಣೆಗೆ ಇನ್ನು ಕೆಲವೇ ಕೆಲವು ದಿನಗಳು ಬಾಕಿ ಇದ್ದು ರಣಕಣದಲ್ಲಿ ಜನ ಯಾರ ಪರವಾಗಿ ನಿಲ್ತಾರೆ ಕಾದು ನೋಡಬೇಕು.

Check Also

ಚಿಕ್ಕೋಡಿ ಕ್ಷೇತ್ರದಲ್ಲಿ ಕಾಂಗ್ರೆಸ್ಸಿಗೆ ಉತ್ತಮ ಬೆಂಬಲ…!

ಚಿಕ್ಕೋಡಿ- ಚಿಕ್ಕೋಡಿ ಕ್ಷೇತ್ರದಲ್ಲಿ ಮಹತ್ವದ ಬೆಳವಣಿಗೆ ಆಗಿದೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅತ್ಯಲ್ಪ ಮತಗಳಿಂದ ಪರಾಭವಗೊಂಡಿದ್ದ NCP ಅಭ್ಯರ್ಥಿ ಉತ್ತಮ್ …

Leave a Reply

Your email address will not be published. Required fields are marked *