ಬೆಳಗಾವಿ-ಬೆಳಗಾವಿಯಲ್ಲಿ ಹಂದಿಗಳ ಹಾವಳಿ ದಿನದಿಂದ ದಿನಕ್ಕೆ ವಿಪರೀತಗೊಳ್ಳುತ್ತಿದೆ ಬೆಳಗಾವಿಯ ಕೆಲವು ಸ್ಲಂ ಗಳು ಹಂದಿಗಳ ತಾಣವಾಗಿ ಪರಿವರ್ತನೆಯಾಗಿವೆ ಬೆಳಗಾವಿಯ ವಂಟಮೂರಿಯ ಆಶ್ರಯ ಕಾಲೋನಿಯಲ್ಲಿ ಹಂದಿ ಮಂದಿ ಕೂಡಿಯೇ ಬದಕುತ್ತಿದ್ದಾರೆ
ಬೆಳಗಾವಿ ನಗರ ಈಗ ಸ್ಮಾರ್ಟ ಸಿಟಿ ಯೋಜನೆಯ ಮೊದಲ ಪಟ್ಟಿಯಲ್ಲಿ ಸೇರಿಕೊಂಡಿದೆ ಇಲ್ಲಿಯ ಆಶ್ರಯ ಕಾಲನಿಗಳು ಹಂದಿಗಳ ತಾಣವಾಗಿ ಮಾರ್ಪಟ್ಟಿವೆ ಬೆಳಗಾವಿಯ ವಂಟಮೂರಿ ಆಶ್ರಯ ಕಾಲನಿ ಹಾಗು ರುಕ್ಮೀನಿ ನಗರ ಸೇರಿದಂತೆ ನಗರದ ಹಲವಾರು ಸ್ಲಂ ಗಳಲ್ಲಿ ಹಂದಿಗಳು ತುಂಬಿಕೊಂಡಿದ್ದು ಇಲ್ಲಿ ಹಂದಿ ಮಂದಿ ಜೊತೆ ಜೊತೆಯಾಗಿ ಬದಕುತ್ತಿದ್ದಾರೆ
ಬೆಳಗಾವಿ ನಗರದಲ್ಲಿ ಹಂದಿ ಸಾಕಾಣಿಕೆಗೆ ವಿಫುಲ ಅವಕಾಶವಿದೆ ಅಂದರೆ ಇಲ್ಲಿಯ ಗಲೀಜು ವಾತಾವರಣ ನೊಡಿ ಹಂದಿ ಸಾಕಾಣಿಕೆದಾರರು ಬೆಳಗಾವಿ ನಗರದಲ್ಲಿಯೇ ಠಿಖಾನಿ ಹೂಡಿದ್ದಾರೆ ಬೆಳಗಾವಿಯ ರುಕ್ಮೀಣಿ ನಗರದಲ್ಲಿರುವ ಹಂದಿ ಸಾಕಾಣಿಕೆದಾರರು ಬೆಳಗಾವಿ ನಗರದ ವಿವಿಧ ಪ್ರದೇಶಗಲಲ್ಲಿ ಹಂದಿ ಮರಿಗಳನ್ನು ಬಿಡುತ್ತಿರುದರಿಂದ ಬೆಳಗಾವಿ ನಗರ ಹಂದಿಗಳ ನಗರವಾಗಿ ಪರಿವರ್ತನೆಯಾಗುತ್ತಿದೆ
ಬೆಳಗಾವಿ ಮಹಾನಗರ ಪಾಲಿಕೆಯ ಅಧಿಕಾರಿಗಳು ಹಂದಿ ಸಾಕಾನಿಕೆದಾರರ ವಿರುದ್ಧ ಕ್ರಮ ಕೈಗೊಳ್ಳು ಮುಂದಾಗಿ ಹತ್ತು ಹಲವು ಬಾರಿ ಕ್ರಮ ಕೈಗೊಂಡರೂ ಯಾವುದೇ ಪ್ರಯೋಜನವಾಗಿಲ್ಲ
ಪಾಲಿಕೆ ಆಯುಕ್ತರು ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಬೆಳಗಾವಿಯನ್ನು ಹಂದಿ ಮುಕ್ತ ನಗರವನ್ನಾಗಿ ಮಾಡಲು ಪ್ರಯತ್ನಿಸಬೇಕಾಗಿದೆ.
