ಬೆಳಗಾವಿ- ನಿಪ್ಪಾಣಿ ಬಳಿಯ ಭಿವಶಿ ಗ್ರಾಮದ ಹದ್ದಿಯಲ್ಲಿ ಚಿನ್ನದ ವ್ಯಾಪಾರಿಯೊಬ್ಬರನ್ನು ತಡೆದು ಚಿನ್ನಾಭರಣಗಳನ್ನು ದೋಚಿಕೊಂಡು ಪರಾರಿಯಾಗಿದ್ದ ನಾಲ್ಕು ಜನ ಡಕಾಯಿತರನ್ನು ನಿಪ್ಪಾಣಿ ಪೋಲೀಸರು ಬಂಧಿಸಿದ್ದಾರೆ.
ಚಿನ್ನದ ವ್ಯಾಪಾರಿ, ದೊಂಡಿರಾಮ ವಿಷ್ಣು ಕುಸಾಳೆ ಅವರು ತಮ್ಮ ಅಂಗಡಿ ಬಂದ್ ಮಾಡಿಕೊಂಡು, ನಿಪ್ಪಾಣಿ ಹತ್ತಿರದ ಮಾಂಗೂರ ರಸ್ತೆಯಲ್ಲಿ ಹೋಗುತ್ತಿರುವಾಗ ಇವರನ್ನು ತಡೆದು ಚಿನ್ನಾಭರಣ ಬೆಳ್ಳಿ ಮತ್ತು ನಗದು ಹಣ ದೋಚಿ ಪರಾರಿಯಾಗಿದ್ದ ನಾಲ್ಕು ಜನ ದರೋಡೆಕೋರರನ್ನು ನಿಪ್ಪಾಣಿ ಸಿಪಿಐ ಸಂಗಮೇಶ್ ಶಿವಯೋಗಿ ನೇತ್ರತ್ವದ ಪೋಲೀಸ್ ತಂಡ ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದೆ.
ನಾಲ್ಕು ಜನ ದರೋಡೆಕೋರರನ್ನು ಅರೆಸ್ಟ್ ಮಾಡಿರುವ ನಿಪ್ಪಾಣಿ ಪೋಲೀಸರು,75 ಗ್ರಾಮ ಚಿನ್ನಾಭರಣ ಎರಡುವರೆ ಕೆಜಿ ಬೆಳ್ಳಿ ಒಟ್ಟು ಐದು ಲಕ್ಷಕ್ಕೂ ಹೆಚ್ಚು ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಪ್ರದೀಪ ಅನೀಲ ಕಾಂಬಳೆ 25 ಬೆಡಿಕಿಹಾಳ,
ಬಾಹುಸಾಹೇಬ ಕೋಳಿ 25 ಬೆಡಕಿಹಾಳ,ಅಶೋಕ ಕೊಂಡಿಗೇರಿ 29 ಮಾಂಗೂರ, ಸಂಜು ಕೋಳಿ 23 ಸದಲಗಾ ಈ ನಾಲ್ಕು ಜನ ದರೋಡೆಕೋರರನ್ಬು ಬಂಧಿಸಿ ಕಳುವಾದ ಸ್ವತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ