ಬೆಳಗಾವಿ- ಬೆಳಗಾವಿ ನಗರ ಹಾಗೂ ಜಿಲ್ಲೆಯಲ್ಲಿ ಅಂಗಡಿ,ಸೇರಿದಂತೆ ಇತರ ಯಾವುದೇ ವಹಿವಾಟುಗಳನ್ನು ಒತ್ತಾಯಪೂರ್ವಕವಾಗಿ ಬಂದ್ ಮಾಡದಂತೆ,ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ,ಮತ್ತು ನಗರ ಪೋಲೀಸ್ ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.
ಒತ್ತಾಯ ಪೂರ್ವಕವಾಗಿ ಅಂಗಡಿ ಬಂದ್ ಮಾಡಬಾರುದು,ವಾಹನ ಸಂಚಾರಕ್ಕೆ ಅಡ್ಡಿ ಪಡಿಸಬಾರದು,ಅಗತ್ಯ ಸೇವೆಗಳಿಗೆ ಅಡ್ಡಿ ಪಡಿಸಬಾರದು,ಯಾರಾದ್ರೂ ಕಾನೂನು ಉಲ್ಲಂಘಿಸಿದರೆ ಅವರ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳಲಾಗುವದು ಎಂದು ಪ್ರಕಟನೆಯ ಮೂಲಕ ಎಚ್ಚರಿಕೆ ನೀಡಲಾಗಿದೆ
ರಸ್ತೆ ತಡೆ,ರೈಲು ತಡೆಗೆ ಅವಕಾಶ ಇಲ್ಲ,ಅಂಗಡಿ,ವಹಿವಾಟು ಬಂದ್ ಮಾಡುವಂತೆ ಯಾರಿಗೂ ಒತ್ತಾಯ ಮಾಡುವಂತಿಲ್ಲ, ಎಂದು ನಗರ ಪೋಲೀಸ್ ಆಯುಕ್ತರು ಮತ್ತು ಜಿಲ್ಲಾ ಪೋಲೀಸ್ ವರಿಷ್ಠಾದಿಕಾರಿಗಳು ಪ್ರಕಟಣೆಯ ಮೂಲಕ ಎಚ್ಚರಿಸಿದ್ದಾರೆ
ನಾಳೆ ಕರ್ನಾಟಕ ಬಂದ್ ಕರೆಗೆ ಸಾರಿಗೆ ಸಂಸ್ಥೆ, ಮತ್ತು ಸಾರಿಗೆ ಇಲಾಖೆಯ ಕಾರ್ಮಿಕರು ಬಂದ್ ಗೆ ಬೆಂಬಲ ನೀಡುತ್ತಿಲ್ಲ,ನಾಳೆ ಬಸ್ ಸಂಚಾರದಲ್ಲಿ ಯಾವುದೇ ರೀತಿಯ ವೆತ್ಯಯ ಇರುವದಿಲ್ಲ,ಎಂದಿನಂತೆ ನಾಳೆಯೂ ಬಸ್ ಸಂಚಾರ ಇರುತ್ತದೆ ಎಂದು ಸಾರಿಗೆ ಸಚಿವ ,ಲಕ್ಷ್ಮಣ ಸವದಿ ಅವರು ತಿಳಿಸಿದ್ದಾರೆ.
ಹೀಗಾಗಿ ಬೆಳಗಾವಿ ಜಿಲ್ಲೆಯಲ್ಲಿ ಸ್ವಯಂ ಪ್ರೇರಣೆಯ ಬಂದ್ ಗೆ ಮಾತ್ರ ಅವಕಾಶ ಇರುತ್ತದೆ,ಅಂಗಡಿ ವಹಿವಾಟು ನಡೆಸಬೇಕೆನ್ನುವವರ ರಕ್ಷಣೆಗೆ ಪೋಲೀಸರು ಧಾವಿಸಲಿದ್ದಾರೆ.