Breaking News

ಸೋಗು ಹಾಕಿ,ಸುಲಿಗೆ ಮಾಡಿದ ಇಬ್ಬರು ಸೋಗಲಾಡಿಗಳು ಅರೆಸ್ಟ್…!!

ಇಬ್ಬರು ಅಂತಾರಾಜ್ಯ ಸುಲಿಗೆಕೋರರ ಬಂಧನ :
೨೨ ಲಕ್ಷ ರೂ ಮೌಲ್ಯದ ಚಿನ್ನಾಭರಣ ವಶ

ಹುಕ್ಕೇರಿ: ವಿವಿಧ ಪ್ರಕರಣಗಳಲ್ಲಿ ಎರಡು ರಾಜ್ಯಗಳ ಪೊಲೀಸರಿಗೆ ಬೇಕಾಗಿದ್ದ ಇಬ್ಬರು ಅಂತಾರಾಜ್ಯ ಸುಲಿಗೆಕೋರರನ್ನು ಬಂಧಿಸಿ ಅವರಿಂದ ಅಂದಾಜು ೨೨ ಲಕ್ಷ ರೂ ಮೌಲ್ಯದ ಬಂಗಾರದ ಆಭರಣಗಳನ್ನು ವಶಪಡಿಸಿಕೊಂಡು ೮ ಪ್ರಕರಣಗಳನ್ನು ಪತ್ತೆ ಹಚ್ಚುವಲ್ಲಿ ಹುಕ್ಕೇರಿ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ಎಸ್ಪಿ ಡಾ.ಸಂಜೀವ ಪಾಟೀಲ ಹೇಳಿದರು.

ಪಟ್ಟಣದ ಪೊಲೀಸ್ ಠಾಣೆಯಲ್ಲಿ ಬುಧವಾರ ನಡೆದ ಸುದ್ಧಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಗ್ರಾಹಕರ ಸೋಗಿನಲ್ಲಿ ಹೋಗಿ ಬಂಗಾರದ ಅಂಗಡಿಯಲ್ಲಿ ವಂಚನೆ, ಗಮನ ಬೇರೆಡೆ ಸೆಳೆದು ಚಿನ್ನಾಭರಣ ಲೂಟಿ ಮಾಡುತ್ತಿದ್ದ ಇಬ್ಬರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿ ಕಾರ್ಯಾಚರಣೆ ನಡೆಸಿದ್ದಾರೆ ಎಂದರು.

ಈ ಪ್ರಕರಣಗಳಲ್ಲಿ ಮಹಾರಾಷ್ಟçದ ಜತ್ ತಾಲೂಕಿನ ಪ್ರಮುಖ ಆರೋಪಿಯಾಗಿದ್ದರೆ, ಉಗಾರ ಖುರ್ದನ ವ್ಯಕ್ತಿಯೋರ್ವ ಆತನ ಸಹಚರನಾಗಿದ್ದಾನೆ. ಹುಕ್ಕೇರಿ, ಗೋಕಾಕ, ರಾಯಬಾಗ, ಬೆಳಗಾವಿ ನಗರದಲ್ಲಿ ವಂಚನೆ ನಡೆಸಿದ್ದರು. ಅಷ್ಟೇ ಅಲ್ಲದೇ ಮಹಾರಾಷ್ಟçದ ವೆಂಗುರ್ಲಾ, ಕೊಲ್ಲಾಪುರ, ಸೊಲ್ಲಾಪುರ, ಇಚಲಕರಂಜಿಯ ವಿವಿಧ ಜ್ಯುವೆಲರಿ ಅಂಗಡಿಗಳಲ್ಲಿ ಗ್ರಾಹಕರಂತೆ ನಟಿಸಿ ಬಂಗಾರದ ಆಭರಣಗಳನ್ನು ಖರೀದಿಸಿ ಫೋನ್‌ಫೇ, ಗೂಗಲ್‌ಫೇ ಮೂಲಕ ವಂಚನೆ ಮಾಡಿದ್ದರು ಎಂದು ಅವರು ಹೇಳಿದರು.

ಈ ಸುಲಿಗೆ ಮತ್ತು ವಂಚನೆ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ವಂಚಕರ ಪತ್ತೆಗೆ ವಿಶೇಷ ತಂಡ ರಚಿಸಲಾಗಿತ್ತು. ಜಿಲ್ಲೆಯಲ್ಲಿ ನಡೆದ ವಂಚನೆ ಪ್ರಕರಣ ಬೇಧಿಸುತ್ತಿದ್ದ ವೇಳೆ ಈ ಇಬ್ಬರು ಆರೋಪಿಗಳು ಮಹಾರಾಷ್ಟçದಲ್ಲೂ ಮೋಸ ಮಾಡಿರುವುದು ಬೆಳಕಿಗೆ ಬಂದಿದೆ. ಬಂಧಿತರಿAದ ೨೨.೭೩.೪೦೦ ರೂ ಮೌಲ್ಯದ ೪೨೧ ಗ್ರಾಂ ತೂಕದ ಚಿನ್ನಾಭರಣ, ಕೃತ್ಯಕ್ಕೆ ಬಳಸಿದ ೩೫ ಸಾವಿರ ಮೌಲ್ಯದ ಬೈಕ್ ವಶಪಡಿಸಿಕೊಳ್ಳಲಾಗಿದೆ. ಬಂಧಿತರನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ ಎಂದು ಅವರು ಹೇಳಿದರು.

ಕಾರ್ಯಾಚರಣೆಯಲ್ಲಿ ಡಿಎಸ್ಪಿ ಮನೋಜಕುಮಾರ ನಾಯ್ಕ, ಸಿಪಿಐ ಎಂ.ಎA.ತಹಶೀಲ್ದಾರ, ಪಿಎಸ್‌ಐ ಎಲ್.ಎಲ್.ಪತ್ತೆನ್ನವರ, ಎಎಸ್‌ಐ ಎ.ಎಸ್.ಸನದಿ, ಸಿಬ್ಬಂದಿಗಳಾದ ಸಿ.ಡಿ.ಪಾಟೀಲ, ಮಂಜುನಾಥ ಕಬ್ಬೂರ, ಜಿ.ಎಸ್.ಕಾಂಬಳೆ, ಎಸ್.ಆರ್.ರಾಮದುರ್ಗ, ಎ.ಎಲ್.ನಾಯಿಕ, ಯು.ವೈ.ಅರಭಾಂವಿ, ಆರ್.ಎಸ್.ಢಂಗ, ಬಿ.ವಿ.ನಾವಿ, ಎಂ.ಕೆ.ಅತ್ತಾರ, ಜಿಲ್ಲಾ ಕಚೇರಿಯ ತಾಂತ್ರಿಕ ವಿಭಾಗದ ಸಚಿನ್ ಪಾಟೀಲ, ವಿನೋದ ಠಕ್ಕನ್ನವರ ಪಾಲ್ಗೊಂಡಿದ್ದು ತಂಡಕ್ಕೆ ಪ್ರಶಂಸನಾರ್ಹ ಪತ್ರ ಹಾಗೂ ನಗದು ನೀಡಲಾಗುವುದು ಎಂದು ಅವರು ಹೇಳಿದರು.
ಹೆಚ್ಚುವರಿ ಪೊಲೀಸ್ ಅಧೀಕ್ಷಕ ಮಹಾನಿಂಗ ನಂದಗಾAವಿ, ಡಿಎಸ್ಪಿ ಮನೋಜಕುಮಾರ ನಾಯ್ಕ, ಸಿಪಿಐಗಳಾದ ಎಂ.ಎA.ತಹಶೀಲ್ದಾರ, ರಮೇಶ ಛಾಯಾಗೋಳ ಮತ್ತಿತರರು ಉಪಸ್ಥಿತರಿದ್ದರು.

 

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *