ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲೇ ಅತೀ ಹೆಚ್ಚು ಮಳೆ ಖಾನಾಪೂರ ತಾಲ್ಲೂಕಿನಲ್ಲಿ ಸುರೀತಾ ಇದೆ.ವಿಪರೀತ ಮಳೆಯಿಂದಾಗಿ ಖಾನಾಪೂರ ಪಟ್ಟಣದ ಬಹುತೇಕ ಎಲ್ಲ ರಸ್ತೆಗಳು ಹಾಳಾಗಿವೆ.ಇಲ್ಲಿಯ ರಸ್ತೆಗಳಲ್ಲಿ ಈಗ ಗುಂಡಿಗಳ ಸಾಮ್ರಾಜ್ಯವೇ ನಿರ್ಮಾಣವಾಗಿದೆ.
ಖಾನಾಪೂರ ಪಟ್ಟಣದ ರುಮೇವಾಡಿ ಕ್ರಾಸ್ ಹತ್ತಿರದ ರಸ್ತೆಯಲ್ಲಿ ಗುಂಡಿಗಳು ನಿರ್ಮಾಣವಾಗಿದ್ದು, ದಿನನಿತ್ಯ ರಸ್ತೆ ಅಪಘಾತಗಳು ಸಂಭವಿಸಿ ವಿಶೇಷವಾಗಿ ಬೈಕ್ ಸವಾರರು ತೊಂದರೆ ಅನುಭವಿಸುತ್ತಿರುವದನ್ನು ಗಮನಿಸಿದ ಖಾನಾಪೂರ ಪೋಲೀಸರು,ಕೂಡಲೇ ರಸ್ತೆ ಗುಂಡಿಗಳನ್ನು ಮುಚ್ವುವಂತೆ ಖಾನಾಪೂರ ಪಟ್ಟಣ ಪಂಚಾಯ್ತಿಯ ಚೀಪ್ ಆಫೀಸರ್ ಗೆ ಪತ್ರ ಬರೆದು ವಿಶೇಷ ಗಮನ ಸೆಳೆದಿದ್ದಾರೆ.
ಬೆಳಗಾವಿಯ ತಿಲಕವಾಡಿಯ ಎರಡನೇಯ ರೇಲ್ವೆ ಗೇಟ್ ಹತ್ತಿರ ಬೆಳಗಾವಿಯ ಟ್ರಾಫಿಕ್ ಪೋಲೀಸ್ರು ತಾವೇ ಸ್ವಯಂ ಪ್ರೇರಿತರಾಗಿ ರಸ್ತೆ ಗುಂಡಿಗಳನ್ನು ಮುಚ್ಚುವ ಮೂಲಕ ಮಾಡಿದ ಪೋಲೀಸರ ಶ್ರಮದಾನ, ರಾಜ್ಯದ ಗಮನ ಸೆಳೆದಿತ್ತುಈಗ ಖಾನಾಪೂರ ಪೋಲೀಸರು ರಸ್ತೆ ಗುಂಡಿಗಳನ್ನು ಮುಚ್ವುವಂತೆ ಪಟ್ಟಣ ಪಂಚಾಯತಿಗೆ ಪತ್ರ ಬರೆದು ಎಲ್ಲರ ಗಮನ ಸೆಳೆದಿದ್ದಾರೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ