ನಕಲಿ ಲೇಬಲ್ ಅಂಟಿಸಿ,ಕೆಮಿಕಲ್ಸ್ ಮಿಕ್ಸ್ ಮಾಡಿದವರು,ಜೈಲಿಗೆ ಫಿಕ್ಸ್…!!

ಬೆಳಗಾವಿ- ಬೆಳಗಾವಿಯ ಸಿಸಿಬಿ ಪೋಲೀಸರು ಇವತ್ತು ಭರ್ಜರಿ ಬೇಟೆಯಾಡಿದ್ದಾರೆ.ನಗರದ ಅಪಾರ್ಟ್‌ಮೆಂಟ್ ಮೇಲೆ ದಾಳಿ ಮಾಡಿರುವ ಸಿಸಿಬಿ ಪೋಲೀಸರು ಅಪಾರ ಪ್ರಮಾಣದ ನಕಲಿ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ.

ಬೆಳಗಾವಿಯ ಸದಾಶಿವ ನಗರದ ವೀರುಪಾಕ್ಷಿ ರೆಸಿಡೆನ್ಸಿ ಅಪಾರ್ಟ್‌ಮೆಂಟ್ ನಲ್ಲಿ ನಕಲಿ ಮದ್ಯ ತಯಾರಿಸುತ್ತಿದ ಘಟಕದ ಮೇಲೆ ದಾಳಿ ಮಾಡಿರುವ ಸಿಸಿಬಿ ಪೋಲೀಸರು.ಇಬ್ಬರು ಆರೋಪಿಗಳನ್ನು ಬಂಧಿಸಿ,ಸಯಮಾರು ನಾಲ್ಕು ಲಕ್ಷ ರೂ ಮೌಲ್ಯದ ನಕಲಿ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ.ಕಾನೂನು ಬಾಹಿರವಾಗಿ,ಆಕ್ರಮವಾಗಿ ಮದ್ಯತಯಾರಿಸುತ್ತಿದ್ದ ಬೆಳಗಾವಿ ಉಜ್ವಲ ನಗರದ,22ವರ್ಷದ ಹಸನ್ ಜಾವೇದ್ ಬೇಪಾರಿ,ಹಾಗೂ ಹಿಂಡಲಗಾ ವಿಜಯನಗರದ 42 ವರ್ಷದ ರಾಕೇಶ್ ಕೇಶವ ನಾಯಕ ಎಂಬಾತರನ್ನು ಪೋಲೀಸರು ಬಂಧಿಸಿದ್ದಾರೆ.

ಬೆಳಗಾವಿಯ ಬಾರ್ ಆ್ಯಂಡ್ ರೆಸ್ಟೋರೆಂಟ್ ಗಳಲ್ಲಿ ಮದ್ಯದ ಖಾಲಿ ಬಾಟಲ್ ಗಳನ್ನು ಸಂಗ್ರಹಿಸಿ,ಅದಕ್ಕೆ ಲೇಬಲ್ ಅಂಟಿಸಿ,ಕೆಮಿಕಲ್ ಮಿಕ್ಸ್ ಮಡಿ,ವಿವಿಧ ಬ್ರಾಂಡ್ ಗಳ ಮದ್ಯ ತಯಾರಿಸಿ ಮಾರಾಟ ಮಾಡುತ್ತಿದ್ದ ಜಾಲವನ್ನು ಸಿಸಿಬಿ ಇನ್ಸಪೆಕ್ಟರ್ ಅಲ್ತಾಪ್ ಮುಲ್ಲಾ ಅವರ ನೇತ್ರತ್ವದಲ್ಲಿ ದಾಳಿ ಮಾಡಿರುವ ಬೆಳಗಾವಿಯ ಸಿಸಿಬಿ ಪೋಲೀಸರ ತಂಡ ಪತ್ತೆ ಮಾಡಿದ್ದಾರೆ.

ಈ ಕುರಿತು ನಗರ ಪೋಲೀಸ್ ಆಯುಕ್ತರು ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ.

Check Also

ಕುಂಭಮೇಳದಿಂದ ವಾಪಸ್ ಬರುವಾಗ ಬೆಳಗಾವಿಯ ನಾಲ್ವರ ಸಾವು

ಬೆಳಗಾವಿ- ಮಹಾ ಕುಂಭಮೇಳಕ್ಕೆ ಹೋಗಿ ವಾಪಾಸ್ ಆಗುವಾಗ ಟಿ.ಟಿ ವಾಹನ ಅಪಘಾತಕ್ಕೀಡಾಗಿ ಬೆಳಗಾವಿಯ ನಾಲ್ವರು ಮೃತಪಟ್ಟಿರುವ ಘಟನೆ ನಡೆದಿದೆ.ಬೆಳಗಾವಿಯ ಶಹಾಪುರ …

Leave a Reply

Your email address will not be published. Required fields are marked *