ಬೆಳಗಾವಿ– ರಾಜ್ಯದಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಬೆಳಗಾವಿ ಮಹಾನಗರದ ಹಲವಾರು ಠಾಣೆಗಳ ಸಿಪಿಐ ಗಳು ವರ್ಗಾವಣೆಗೊಂಡಿದ್ದು ಹೊಸ ಸಿಪಿಐ ಗಳು ನಿಯೋಜನೆಗೊಂಡಿದ್ದಾರೆ.
ಬೆಳಗಾವಿ ಮಹಾನಗರದ ಮಾರ್ಕೆಟ್ ಪೋಲೀಸ್ ಠಾಣೆಗೆ, ಮಹಾಂತೇಶ್ ದಾಮಣ್ಣವರ,ಮಾಳ ಮಾರುತಿ ಠಾಣೆಗೆ ಕಾಲಿಮಿರ್ಚಿ,ಕ್ಯಾಂಪ್ ಠಾಣೆಗೆ ಅಲ್ತಾಫ್ ಮುಲ್ಲಾ,ಬೆಳಗಾವಿ ನಗರದ ಮಹಿಳಾ ಠಾಣೆಗೆ,ಸುಲೇಮಾನ್ ತಹಶೀಲ್ದಾರ್,ಬೆಳಗಾವಿಯ ಎಪಿಎಂಸಿ ಠಾಣೆಗೆ ವಿಶ್ವನಾಥ್ ಕಬ್ಬೂರೆ, ಅವರನ್ನು ನಿಯೋಜಿಸಿ ಸರ್ಕಾರ ಆದೇಶ ಹೊರಡಿಸಿದೆ.
ಬೆಳಗಾವಿ ಮಾರಿಹಾಳ ಠಾಣೆಯ ಸಿಪಿಐ ಮಾರಿಹಾಳದಿಂದ ಹುಕ್ಕೇರಿಗೆ ವರ್ಗಾವಣೆಯಾಗಿದ್ದು,ನಿಪ್ಪಾಣಿ ಠಾಣೆಯ ಸಂಗಮೇಶ್ ಶಿವಯೋಗಿ ಬೆಂಗಳೂರಿಗೆ ವರ್ಗಾವಣೆಯಾಗಿದ್ದು,ಚಿಕ್ಕೋಡಿಗೆ ವಿಶ್ವನಾಥ ಚೌಗಲೇ,ಸಿಟಿ ಸ್ಪೇಶಲ್ ಬ್ಯಾಂಚ್ ಗೆ ಚನ್ನಕೇಶವ ಟಿಂಗ್ರಿಕರ್ ,ನಂದಗಡ ಠಾಣೆಗೆ ಎಸ್ ಸಿ ಪಾಟೀಲ ಅವರನ್ನು ನಿಯೋಜನೆ ಮಾಡಿ ಸರ್ಕಾರ ಆದೇಶ ಹೊರಬಿದ್ದಿದೆ,ಶೀಘ್ರದಲ್ಲೇ ಎರಡನೇಯ ಪಟ್ಟಿ ಬಿಡುಗಡೆಯಾಗಲಿದ್ದು ಇನ್ನಷ್ಡು ಅದಲು ಬದಲು ಆಗುವ ಸಾಧ್ಯತೆಗಳಿವೆ
ಗೋಕಾಕ್ ಸಿಪಿಐ ವರ್ಗಾವಣೆ
ಗೋಕಾಕ್ ಸಿಪಿಐ ಗೋಪಾಲ್ ಅವರನ್ನು ಬೆಂಗಳೂರಿನ ಪ್ರಧಾನ ಕಚೇರಿಗೆ ವರ್ಗಾವಣೆ ಮಾಡಲಾಗಿದೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ