Breaking News
Home / Breaking News / ನಿಷೇಧಿತ ಪ್ಲ್ಯಾಸ್ಟಿಕ್ ಬಳಕೆ,ಪಾಲಿಕೆ ಅಧಿಕಾರಿಗಳಿಂದ ದಾಳಿ…!!

ನಿಷೇಧಿತ ಪ್ಲ್ಯಾಸ್ಟಿಕ್ ಬಳಕೆ,ಪಾಲಿಕೆ ಅಧಿಕಾರಿಗಳಿಂದ ದಾಳಿ…!!

550 ಕೆ.ಜಿ.ನಿಷೇಧಿತ ಪ್ಲ್ಯಾಸ್ಟಿಕ್ ವಶ; ವ್ಯಾಪಾರಸ್ಥರಿಗೆ ದಂಡ- ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ

ಬೆಳಗಾವಿ, ಆ.1(ಕರ್ನಾಟಕ ವಾರ್ತೆ): ನಗರದ ವ್ಯಾಪಾರ-ವಹಿವಾಟು‌ ಮಳಿಗೆಗಳ ಮೇಲೆ ದಾಳಿ‌ ನಡೆಸಿದ ಮಹಾನಗರ ಪಾಲಿಕೆಯ ಅಧಿಕಾರಿಗಳು ಸುಮಾರು 550 ಕೆ.ಜಿ. ನಿಷೇಧಿತ ಪ್ಲ್ಯಾಸ್ಟಿಕ್ ವಶಪಡಿಸಿಕೊಂಡು ದಂಡವನ್ನು ವಿಧಿಸಿದ್ದಾರೆ.

ಮಹಾನಗರ ಪಾಲಿಕೆಯ ಆಯುಕ್ತರಾದ ಅಶೋಕ ದುಡಗುಂಟಿ ಅವರ ನಿರ್ದೇಶನದಂತೆ ನಗರದಾದ್ಯಂತ ಪರಿಶೀಲನೆ ಕೈಗೊಂಡ ಅಧಿಕಾರಿಗಳು 550 ಕೆ.ಜಿ. ಪ್ಲ್ಯಾಸ್ಟಿಕ್ ವಶಪಡಿಸಿಕೊಂಡು 44,000 ರೂಪಾಯಿ ದಂಡವನ್ನು ವಿಧಿಸಿದ್ದಾರೆ.

ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ನಿಯಮ -2016 ಹಾಗೂ ತಿದ್ದುಪಡಿಯ ನಿಯಮ – 2022 ರಂತೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಆಯುಕ್ತರಾದ ಅಶೋಕ ದುಡಗುಂಟಿ ತಿಳಿಸಿದ್ದಾರೆ.

ಮಹಾನಗರ ಪಾಲಿಕೆಯ 14 ಆರೋಗ್ಯ ನಿರೀಕ್ಷಕರು ಹಾಗೂ 2 ಪರಿಸರ ಅಭಿಯಂತರರು ಜೊತೆಗೆ ಎಇಇ (ಪರಿಸರ) ನೇತೃತ್ವದಲ್ಲಿ ಅನೇಕ ತಂಡಗಳು ಪರಿಶೀಲನೆ ನಡೆಸಿದರು.
***

Check Also

ದ ಮೇಕರ್ ಆಫ್ ನ್ಯೂ ಇಂಡಿಯಾ ಪುಸ್ತಕ ರೆಡಿ ಮಾಡಿದವರು ಯಾರು ಗೊತ್ತಾ..??

ಪ್ರಾಮಿಸ್ಡ್ ನೇಷನ್’ ಪ್ರಧಾನಿಗೆ ಅರ್ಪಣೆ * ಹುಬ್ಬಳ್ಳಿಯ ‘ಸೆನ್ಸ್ ಎಸೆನ್ಸ್’ ಸಂಸ್ಥೆಯಿಂದ ಅಂಧರಿಗಾಗಿ ಸಿದ್ಧಪಡಿಸಿದ ಪುಸ್ತಕ ಬೆಂಗಳೂರು ದೇಶದ ಏಳು …

Leave a Reply

Your email address will not be published. Required fields are marked *