Breaking News

ಮದುವೆಗೆ ಬಂದಿದ್ದ…..ಆಭರಣ ಕದ್ದು ಪರಾರಿಯಾಗಿದ್ದ, ಕಾಲಿಮಿರ್ಚಿ ಕೈಗೆ ಸಿಕ್ಕಿಬಿದ್ದ…..!!

ಬೆಳಗಾವಿ-ಮಾಳಮಾರುತಿ ಪೊಲೀಸರು ಕಳ್ಳನನ್ನು ಬಂಧಿಸಿ;3.5 ಲಕ್ಷದ ಆಭರಣ ವಶಕ್ಕೆ ಪಡೆದಿದ್ದಾರೆ.

ಮದುವೆಗೆ ಬಂದಿದ್ದ…..ಆಭರಣ ಕದ್ದು ಪರಾರಿಯಾಗಿದ್ದ, cpiಕಾಲಿಮಿರ್ಚಿ ಕೈಗೆ ಸಿಕ್ಕಿಬಿದ್ದ…..!

ಕೇವಲ 24 ಗಂಟೆಗಳಲ್ಲಿ ಕಳ್ಳತನ ಪ್ರಕರಣ ಭೇದಿಸುವಲ್ಲಿ ಪೋಲೀಸರು ಯಶಸ್ವಿಯಾಗಿದ್ದಾರೆ.ದಿನಾಂಕ 4-1.2024 ರಂದು ಮಾಳಮಾರುತಿ ಠಾಣಾ ವ್ಯಾಪ್ತಿಯ ವಿದ್ಯಾಧಿರಾಜ ಕಲ್ಯಾಣ ಮಂಟಪದಲ್ಲಿ ಮದುವೆಗೆ ಆಗಮಿಸಿದ .ಪಂಚಾಕ್ಷರಿ ಎಂ ಕೆ ಸಾ. ದಾವಣಗೆರೆ ಇವರ ಹೆಂಡತಿಯ ವೆನಿಟಿ ಬ್ಯಾಗಿನಲ್ಲಿ ಇಟ್ಟಿದ್ದ ಸುಮಾರು 3,51,000 ಮೌಲ್ಯದ ಬಂಗಾರದ ಆಭರಣ ಹಾಗೂ 3500/- ಹಣ ಹೀಗೆ ಒಟ್ಟು 3,54, 500 ಗಳಷ್ಟು ವಸ್ತುಗಳನ್ನು ವೆನಿಟಿ ಬ್ಯಾಗ ಸಮೇತ ಕಳುವು ಮಾಡಲಾಗಿತ್ತು.

ವ್ಯಾನಿಟಿ ಬ್ಯಾಗ್ ಕಳವು ಮಾಡಿಕೊಂಡು ಹೋಗಿದ್ದ ಆರೋಪಿತನನ್ನು ಮಾಳಮಾರುತಿ ಪೊಲೀಸ್ ಠಾಣೆಯವರು ಇಂದು ಪತ್ತೆ ಮಾಡಿ, ಕಳ್ಳತನ ಮಾಡಿದ ಆರೋಪಿ ಇಮ್ತಿಯಾಜ್ ಮಹಮ್ಮದ್ ಗೌಸ್ ಹುಬ್ಳಿವಾಲೆ – 63 ವರ್ಷ ಸಾ. ವೀರಭದ್ರನಗರ ಬೆಳಗಾವಿ ಈತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಈತನಿಂದ ಕಳ್ಳತನ ಮಾಡಿದ ಬಂಗಾರದ ಆಭರಣ ಹಾಗೂ ಹಣವನ್ನು ಮರಳಿ ಜಪ್ತ ಪಡಿಸಿಕೊಳ್ಳಲಾಗಿದೆ. ಆರೋಪಿತನ ವಿರುದ್ಧ ಕಾನೂನು ಕ್ರಮ ಕೈಗೊಂಡು, ತನಿಖೆ ಮುಂದುವರೆಸಲಾಗಿದೆ.

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *