ಮಗುವಿನ ಅಂತ್ಯಸಂಸ್ಕಾರ ಮಾಡಿದ ಬೆಳಗಾವಿ ಪೋಲೀಸರು….

ಬೆಳಗಾವಿ- ಮದುವೆಗೆ ಮುನ್ನ ದೈಹಿಕ ಸಂಪರ್ಕದಿಂದ ಮಗು ಜನಿಸಿತ್ತು ಈ ಮಗುವನ್ನು ಬೆಳಗಾವಿಯಲ್ಲಿ ಮಾರಾಟ ಮಾಡುವ ಸಂಧರ್ಭದಲ್ಲಿ ಪ್ರಕರಣ ಬೆಳಕಿಗೆ ಬಂದಿತ್ತು ಬೆಳಗಾವಿ ಪೋಲೀಸರು ಮಗುವನ್ನು ವಶಕ್ಕೆ ಪಡೆದು ಈ ಮಗುವಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲು ಮಾಡಿ ಆರೈಕೆ ಮತ್ತು ಚಿಕಿತ್ಸೆ ಕೊಡಿಸಿದ್ದರು ಆದ್ರೆ ಈ ಮಗು ಮೃತ ಪಟ್ಟಿದ್ದು ಪೋಲೀಸರ ಸಮ್ನುಖದಲ್ಲಿಯೇ ಅಂತ್ಯ ಸಂಸ್ಕಾರ ಮಾಡಲಾಗಿದೆ.

ಬೆಳಗಾವಿಯಲ್ಲಿ ಇತ್ತೀಚೆಗೆ ಮಕ್ಕಳ ಮಾರಾಟ ಪ್ರಕರಣ ಬೆಳಕಿಗೆ ಬಂದಿತ್ತು.ಮಕ್ಕಳ ಮಾರಾಟದಲ್ಲಿ ರಕ್ಷಣೆಯಾಗಿದ್ದ ಮಗು,ತಡರಾತ್ರಿ ಬೆಳಗಾವಿಯ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟಿದೆ.30ದಿನದ ಹೆಣ್ಣು ಮಗುವನ್ನು ಕೇವಲ 60 ಸಾವಿರಕ್ಕೆ ಮಾರಟ ಮಾಡುವ ಪ್ರಯತ್ನ ನಡೆದಿತ್ತು.ಕಿತ್ತೂರಿನ ನಕಲಿ ವೈದ್ಯ ಅಬ್ದುಲ್ ಗಫಾರ್ ಲಾಡಖಾನ್ ನಿಂದ 60 ಸಾವಿರಕ್ಕೆ ಹೆಣ್ಣು ಮಗು ಮಾರಾಟ ಮಾಡಿಸುವ ಪ್ರಯತ್ನ ನಡೆದಿತ್ತು.ನರ್ಸ್ ಮಹಾದೇವಿ ಎಂಬ ಮಹಿಳೆಗೆ ಮಗುವನ್ನು ಮಾರಾಟ ಮಾಡಿದ್ದರು.ಈ ವಿಚಾರ ಪೋಲೀಸರಿಗೆ ಗೊತ್ತಾಗಿ,ಮಗು ಪಡೆದು ಬೆಳಗಾವಿಗೆ ಬಂದು ಮಾರಾಟ ಮಾಡುವಾಗ ಮಹಾದೇವಿ ಎಂಬ ನರ್ಸ್ ಪೋಲೀಸರ ಕೈಗೆ ಸಿಕ್ಕಿಬಿದ್ದಿದ್ದರು.ಈ ವೇಳೆ ಮಗುವನ್ನು ರಕ್ಷಿಸಿ ಜಿಲ್ಲಾಸ್ಪತ್ರೆಗೆ ಆರೈಕೆಗೆಂದು ಇರಿಸಲಾಗಿತ್ತು.

ಬೆಳವಣಿಗೆ ಕುಂಠಿತ ಹಾಗೂ ತೂಕ ಹೆಚ್ಚಳವಾಗದೆ ಅನಾರೋಗ್ಯದಿಂದ ಮಗು ಸಾವನ್ನೊಪ್ಪಿದೆ.ಸಂಪ್ರದಾಯದಂತೆ ಪೊಲೀಸರು ಹಾಗೂ ಮಗುವಿನ ತಂದೆ ತಾಯಿ ಸಮ್ಮುಖದಲ್ಲಿ ಅಂತ್ಯ ಸಂಸ್ಕಾರ ಮಾಡಲಾಗಿದೆ.ಸದಾಶಿವ ನಗರದ ರುಧ್ರಭೂಮಿಯಲ್ಲಿ ಪೋಲೀಸರು ಸಂಸ್ಕಾರ ಮಾಡಿದ್ದಾರೆ. ಸ್ವತಃ ತಾವೇ ಮಾಳಮಾರುತಿ ಪೋಲೀಸರು ಮಗುವಿನ ಅಂತ್ಯ ಸಂಸ್ಕಾರ ನಡೆಸಿದ್ದಾರೆ.

7ತಿಂಗಳ ಹಸುಳೆಯನ್ನು 20 ಸಾವಿರ ಪಡೆದು ಆಪರೇಷನ್ ಮಾಡಿದ್ದ ನಕಲಿ ವೈದ್ಯ ಅಬ್ದುಲ್ ಗಫಾರ್ ಲಾಡಖಾನ್ ಎಂಬಾತ ಬ್ರೂಣ ಹತ್ಯೆ ಮಾಡಿದ ಆರೋಪವನ್ನು ಎದುರಿಸುತ್ತಿದ್ದಾನೆ.ಮಗು ಜನಿಸಿದ್ದು ಕಿತ್ತೂರಿನಲ್ಲಿ ಈ ಮಗು ಮಾರಾಟ ಮಾಡುವಾಗ ಬೆಳಗಾವಿಯಲ್ಲಿ ರಕ್ಷಣೆ ಮಾಡಲಾಗಿತ್ತು.

Check Also

ಅನಾಹುತ ಮಳೆಗೆ ಗೋಡೆ ಕುಸಿದು ಮಹಿಳೆ ಸಾವು

ಗೋಕಾಕ: ಗೋಕಾಕದ ಸಂಗಮ ನಗರದ ಫರೀದಾ ಎಂಬ ಮಹಿಳೆ ಗೋಡೆ ಕುಸಿದ ಪರಿಣಾಮ ಮೃತಪಟ್ಟಿದ್ದಾರೆ. ಇವರು ತಮ್ಮ ಮಗ ರಿಯಾಜ್ …

Leave a Reply

Your email address will not be published. Required fields are marked *