Home / ಬೆಳಗಾವಿ ನಗರ / ಪೋಲಿಸ್ ಆಯುಕ್ತರ ಹೊಸ ಆಲೋಚನೆ ಸೂಕ್ಷ್ಮ ಪ್ರದೇಶಗಳಲ್ಲಿ ಹಳೆ ಹುಲಿಗಳ ಘರ್ಜನೆ

ಪೋಲಿಸ್ ಆಯುಕ್ತರ ಹೊಸ ಆಲೋಚನೆ ಸೂಕ್ಷ್ಮ ಪ್ರದೇಶಗಳಲ್ಲಿ ಹಳೆ ಹುಲಿಗಳ ಘರ್ಜನೆ

ಬೆಳಗಾವಿ-ನಗರ ಪೋಲಿಸ್ ಆಯುಕ್ತ ಕೃಷ್ಣಭಟ್ ಅವರು ತಮ್ಮ ಅನುಭವವನ್ನು ಬೆಳಗಾವಿಯ ಗಣೇಶ ಉತ್ಸವದಲ್ಲಿ ಧಾರೆಯೆರೆದಿದ್ದು ಅವರ ಹೊಸ ಪಾಲಿಸಿ ನೂರಕ್ಕೆ ನೂರರಷ್ಟು ಯಶಸ್ವಿಯಾಗಿದೆ
ಈ ಬಾರಿ ಪೋಲಿಸ್ ಆಯುಕ್ತರು ನಗರದ ಸೂಕ್ಷ್ಮ ಪ್ರದೇಶಗಳಲ್ಲಿ ಹಳೆಯ ಹುಲಿಗಳನ್ನು ಅಂದರೆ ಆಯಾ ಪ್ರದೇಶದಲ್ಲಿ ಈ ಹಿಂದೆ ಕೆಲಸ ಮಾಡಿದ ಪೋಲಿಸ್ ಅಧಿಕಾರಿಗಳನ್ನು ಆಯಾ ಪ್ರದೇಶದಲ್ಲೀಯೇ ಬಂದೋಬಸ್ತಿಗೆ ನಿಯೋಜಿಸಿ ಶಾಂತಿ ಕಾಪಾಡುವಲ್ಲಿ ಯಶಸ್ವಿಯಾಗಿದ್ದಾರೆ
ಮಾರ್ಕೆಟ್ ಪೋಲಿಸ್ ಠಾಣೆಯಲ್ಲಿ ಕೆಲಸ ಮಾಡಿದ ಭರಮಣಿ ಹಾಗು ಗಡ್ಡೇಕರ ಅವರನ್ನು ಗಾಂಧಿ ನಗರ ಹಾಗು ಫೋರ್ಟ ರಸ್ತೆಯ ಬಂದೋಬಸ್ತಿಯ ಜವಾಬ್ದಾರಿ ನೀಡಲಾಗಿತ್ತು ಖಡಕ್ ಗಲ್ಲಿಯಲ್ಲಿ ಎಸಿಪಿ ಮಾರಿಹಾಳ,ಜಾವೇದ ಮುಶಾಪುರೆ,ಪಡಗಣ್ಣವರ ಅವರನ್ನು ನಿಯೋಜನೆ ಮಾಡಲಾಗಿತ್ತು
ಅದರಂತೆ ಅನಿಗೋಳ ಪ್ರದೇಶದ ಜವಾಬ್ದಾರಿಯನ್ನು ಮಹಾಂತೇಶ್ವರ ಜಿದ್ದಿ ಅವರಿಗೆ ಆಝಂ ನಗರದ ಜವಾಬ್ದಾರಿಯನ್ನು ಶಂಕರಗೌಡಾ ಪಾಟೀಲರಿಗೆ ನೀಡಲಾಗಿತ್ತು ಹೀಗಾಗಿ ಗಣೇಶ ವಿಸರ್ಜನೆಯ ಮೆರವಣಿಗೆ 24 ಘಂಟೆಗಳ ಕಾಲ ನಿರಂತರವಾಗಿ ನಡೆದರೂ ಯಾವುದೇ ರೀತಿಯ ಅಡತಡೆಗಳಿಲ್ಲದೇ ಸರಳವಾಗಿ ಸಾಗಿತು ಹಳೆಯ ಹುಲಿಗಳಿಗೆ ನೀಡಲಾಗಿದ್ದ ಜವಾಬ್ದಾರಿಯನ್ನು ನೀಟಾಗಿಯೇ ನಿಭಾಯಿಸಿದರು ನಗರ ಪೊಲೀಸ್ ಆಯುಕ್ತರ ಹೊಸ ಪಾಲಿಸಿ ಸೆಕ್ಸೆಸ್ ಆಯಿತು,

Check Also

ಜಿಲ್ಲೆಯಲ್ಲಿ ಸುರಿದ ಮೊದಲ ಮಳೆಗೆ ಮೊದಲ ಬಲಿ…

ಬೆಳಗಾವಿ- ಸವದತ್ತಿಯಲ್ಲಿ ಧಾರಾಕಾರ ಮಳೆ ಸುರಿದಿದ್ದು ಸಿಡಿಲು ಬಡಿದು ಬೈಕ್ ಸವಾರನೊಬ್ಬ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಮಹಿಳೆಯೊಬ್ಬಳು ಗಂಭೀರವಾಗಿ ಗಾಯಗೊಂಡ …

Leave a Reply

Your email address will not be published. Required fields are marked *