ಬೆಳಗಾವಿ: ಅಕ್ರಮವಾಗಿ ಮರಳು ಸಾಗಾಣೆ ಮಾಡುತ್ತಿದ್ದ ೯ ಲಾರಿಗಳನ್ನು ಇಂದು ಬೆಳಿಗ್ಗೆ ನಗರ ಪ್ರವೇಶಿಸುತ್ತಿದ್ದಂತೆಯೇ ಟ್ರಾಫಿಕ್ ಹಾಗೂ ಸಿಸಿಐಬಿ ಪೊಲೀಸರು ದಾಳಿ ನಡೆಸಿ ೯ ಲಾರಿಗಳನ್ನು ವಶಪಡಿಸಿಕೊಂಡಿದ್ದಾರೆ.
ಕಮಿಷ್ನರ್ ಟಿ. ಜೆ. ಕೃಷ್ಣಭಟ್ ಹಾಗೂ ಡಿಸಿಪಿ ಅಮರನಾಥರೆಡ್ಡಿ ಮಾರ್ಗದರ್ಶನದಲ್ಲಿ ಟ್ರಾಫಿಕ್ ಇನ್ಸ್‌ಪೆಕ್ಟರ್ ಪೆಕ್ಟರ್ ಜಾವೇಧ್ ಮುಶಾಪುರಿ ಹಾಗೂ ಸಿಸಿಐಬಿ ಇನ್ಸಪೆಕ್ಟರ್ ಎ. ಸ್. ಗುದಗೊಪ್ಪ ದಾಳಿ ನಡೆಸಿ ವಶಕ್ಕೆ ಪಡೆದಿದ್ದಾರೆ.
ಪ್ರತಿ ಲಾರಿಯ ಅಂದಾಜು ಮರಳಿನ ಮೊತ್ತ ೨೫ ಸಾವಿರವಾಗಿದ್ದು ಹಿರೇಬಾಗೇವಾಡಿ ಮತ್ತು ಬೆಳಗಾವಿ ನಡುವೆ ಸಂಚರಿಸುತ್ತಿದ್ದಾಗ ವಶಕ್ಕೆ ಪಡೆಯಲಾಗಿದೆ. ಟ್ರಾಫಿಕ್ ಎಸಿಪಿ ಎಸ್. ಕೆ. ಮಾರಿಹಾಳ ಹಾಗೂ ಸಿಬ್ಬಂದಿ ದಾಳಿಯ ನೇತೃತ್ವ ವಹಿಸಿದ್ದರು. ಮಾಳಮಾರುತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜಿಲ್ಲಾಡಳಿತದ ಕಟ್ಟುನಿಟ್ಟಿನ ಆದೇಶದ ಮಧ್ಯೆಯೂ ಅಕ್ರಮ ಮರಳು ದಂಧೆ ಮುಂದುವರೆದಿದ್ದು, ಸಿವಿಲ್ , ಅಪರಾಧ ಪತ್ತೆ ದಳ ಮತ್ತು ಟ್ರಾಫಿಕ ಪೊಲೀಸರು ಜಂಟಿ ಕಾರ್ಯಾಚರಣೆ ಮುಂದುವರೆಸಲಿದ್ದಾರೆ ಎಂದು ಎಸಿಪಿ ಶಂಕರ ಮಾರಿಹಾಳ ಸ್ಪಷ್ಟಪಡಿಸಿದ್ದಾರೆ