ಬೆಳಗಾವಿ- ಬೆಳಗಾವಿ-ಖಾನಾಪೂರ ರಸ್ತೆಯಲ್ಲಿರುವ ರೆಲ್ವೆ ಮೆಲ್ಸೆತುವೆ ಶಿಥಿಲ ಗೊಂಡಿದ್ದು ಅತ್ಯಂತ ಹಳೆಯದಾಗಿರುವ ಈ ಸೇತುವೆಯನ್ನು ಡ್ಯೆಮಾಲಿಶ್ ಮಾಡಿ ಅದೇ ಸ್ಥಳದಲ್ಲಿ ದ್ವಿ ಪಥದ ಸೇತುವೆ ನಿರ್ಮಿಸಲು ರೆಲ್ವೆ ಇಲಾಖೆ ನಿರ್ಧರಿಸಿದ್ದು ಶಿಘ್ರದಲ್ಲಿಯೇ ರೆಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳು ಸೇತುವೆಯನ್ನು ಪರಶೀಲಿಸಲು ಬೆಳಗಾವಿಗೆ ಆಗಮಿಸುತ್ತಿದ್ದಾರೆ
ಬೆಳಗಾವಿಯ ಗೋಗಟೆ ಸರ್ಕಲ್ ಬಳಿಯ ಈ ಸೇತುವೆ ಶೀಥಿಲಗೊಂಡಿರುವ ಬಗ್ಗೆ ಮದ್ಯಮಗಳಲ್ಲಿ ಸುದ್ಧಿ ಪ್ರಕಟವಾದ ಹಿನ್ನಲೆಯಲ್ಲಿ ಎಚ್ಚೆತ್ತುಗೊಂಡಿರುವ ರೆಲ್ವೆ ಇಲಾಖೆ ಹಳೆಯ ಸೇತುವೆಯನ್ನು ನೆಲಸಮ ಮಾಡಿ ಅದೇ ಸ್ಥಳದಲ್ಲಿ ಮೊತ್ತೊಂದು ಸೇತುವೆಯನ್ನು ನಿರ್ಮಿಸಲಾಗುತ್ತಿದೆ ಬೆಳಗಾವಿ ಮೂರನೇಯ ರೆಲ್ವೆ ಗೇಟ್ ಬಳಿಯ ಮೆಲ್ಸೆತುವೆ ಮತ್ತು ಖಾನಾಪೂರ ರಸ್ತೆಯಲ್ಲಿನ ಹಳೆಯ ಮಲ್ಸೆತುವೆ ಮರು ನಿರ್ಮಿಸುವ ಕಾಮಗಾರಿಗಳು ಏಕಕಾಲಕ್ಕೆ ನಡೆಯಲಿವೆ
ಟಿಳಕವಾಡಿ ಮೂರನೇಯ ರೆಲ್ವೆ ಗೇಟ್ ಬಳಿ ರೆಲ್ವೆ ಮೇಲ್ಸೇತುವೆ ನಿರ್ಮಿಸುವ ಕಾಮಗಾರಿಗೆ ಟೆಂಡರ್ ಕರೆಯಲಾಗಿದೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಗೋಗಟೆ ಸರ್ಕಲ್ ಬಳಿಯ ಹಳೆಯ ಸೇತುವೆಯನ್ನು ನೆಲಸಮ ಮಾಡಲು ರೆಲ್ವೆ ಇಲಾಖೆ ನಿರ್ಧರಿಸಲಿದೆ ಸೇತುವೆ ಶಿಥಿಲಗೊಂಡಿರುವ ಬಗ್ಗೆ ಪರಶೀಲನೆ ಮಾಡಲು ರೆಲ್ವೆ ಇಲಾಖೆಯ ಅಧಿಕಾರಿಗಳು ಬುಧವಾರ ಅಥವಾ ಗುರುವಾರ ಬೆಳಗಾವಿಗೆ ಆಗಮಿಸುತ್ತಿದ್ದಾರೆ
ರಾಜ್ಯ ಸರ್ಕಾರ ಮತ್ತು ಕೇಂದ್ರ ಸಕಾರದ ಅನುದಾನ ಸಹಾಯದಲ್ಲಿ ಈ ಎರಡೂ ಕಾಮಗಾರಿಗಳು ನಡೆಯಲಿವೆ ರೆಲ್ವೆ ಇಲಾಖೆಯ ಅಧಿಕಾರಿಗಳು ಮಹಾನಗರ ಪಾಲಿಕೆಯ ಆಯುಕ್ತರನ್ನು ಸಂಪರ್ಕಿಸಿ ಇನ್ನೆರಡು ದಿನದಲ್ಲಿ ಶಿಥಿಲಗೊಂಡಿರುವ ಸೇತುವೆ ಪರಶೀಲನೆಗೆ ಆಗಮಿಸುತ್ತಿದ್ದೇವೆ ಎನ್ನುವ ಮಾಹಿತಿ ರವಾನಿಸಿದ್ದಾರೆ
ಈ ಕುರಿತು ಆಯುಕ್ತರನ್ನು ವಿಚಾರಿಸಿದಾಗ ರೆಲ್ವೆ ಇಲಾಖೆಯ ಅಧಿಕಾರಿಗಳು ಮಂಗಳವಾರವೇ ಬೆಳಗಾವಿಗೆ ಬರುವದಾಗಿ ಮಾಹಿತಿ ನೀಡಿದ್ದರು ಆದರೆ ಏಕಾಏಕಿ ಕಾರ್ಯಕ್ರಮ ರದ್ದಾಗಿದೆ ಅಧಿಕಾರಿಗಳು ಬುಧವಾರ ಅಥವಾ ಗುರುವಾರ ಬೆಳಗಾವಿಗೆ ಬರುವದಾಗಿ ತಿಳಿಸಿದ್ದಾರೆ ಎಂದು ಪಾಲಿಕೆ ಆಯುಕ್ತ ಶಶಿಧರ ಕುರೇರ ಬೆಳಗಾವಿ ಸುದ್ಧಿ ಡಾಟ್ ಕಾಂ ಗೆ ಮಾಹಿತಿ ನೀಡಿದರು