ಬೆಳಗಾವಿ- ಹೃದಯಾಘಾತದಿಂದ ಅಕಾಲಿಕ ನಿಧನ ಹೊಂದಿದ ಸಹಕಾರಿ ಸಚಿ ಎಚ್ ಸಿ ಮಹಾದೇವ ಪ್ರಸಾದ ಅವರ ನಿಧನಕ್ಕೆ ಕಂಬಿನಿ ಮಿಡಿದ ಬೆಳಗಾವಿ ನಗರ ಹಾಗೂ ಗ್ರಾಮೀಣ ಕಾಂಗ್ರೆಸ್ ಸಮೀತಿಗಳು ನಿಯೋಜಿತ ಪತ್ರಿಕಾಗೋಷ್ಠಿಯನ್ನು ರದ್ದುಪಡಿಸಿ ಶೃದ್ಧಾಂಜಲಿ ಸಭೆಯನ್ನು ಏರ್ಪಡಿಸಿ ಸಚಿವರ ನಿಧನಕ್ಕೆ ಸಂತಾಪ ಸೂಚಿಸಿತು
ಬೆಳಗಾವಿ ನಗರ ಕಾಂಗ್ರೆಸ್ ಸಮೀತಿಯ ಕಚೇರಿಯಲ್ಲಿ ಸಚಿವ ಮಹಾದೇವ ಪ್ರಸಾದ ಅವರ ಭಾವ ಚಿತ್ರಕ್ಕೆ ಪುಷ್ಪ ಗೌರವ ಸಲ್ಲಿಸಿ ಶೃದ್ಧಾಂಜಲಿ ಅರ್ಪಿಸಿದರು ಕೆಪಿಸಿಸಿ ಮಹಿಳಾ ಘಟಕದ ಅದ್ಯಕ್ಷೆ ಲಕ್ಷ್ಮೀಹೆಬ್ಬಾಳಕರ,ವಿನಯ ನಾವಲಗಟ್ಟಿ,ರಾಜು ಸೇಠ ಹಾಗು ಅನೀಲ ಪೋತದಾರ ,ನಗರ ಸೇವಕಿ ಜಯ ಶ್ರೀ ಮಾಳಗಿ ಸೇರಿದಂತೆ ಹಲವಾರು ಕಾಂಗ್ರೆಸ್ ನಾಯಕರು ಅಗಲಿದ ಸಹಕಾರಿ ಸಚಿವರಿಗೆ ಶೃದ್ದಾಂಗಲಿ ಅರ್ಪಿಸಿದರು
ಈ ಸಂಧರ್ಭದಲ್ಲಿ ಮಾತನಾಡಿದ ಹೆಬ್ಬಾಳಕರ ಸಚಿವ ಮಹಾದೇವ ಪ್ರಸಾದ ಅವರು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾಗಿದ್ದರು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಜೊತೆ ಜೊತೆಯಾಗಿ ಕಾಂಗ್ರೆಸ್ ಪಕ್ಷದ ಸನಘಟನೆ ಮಾಡುವದರ ಜೊತೆಗೆ ಸಹಕಾರಿ ಸಚಿವರಾಗಿ ಉತ್ತಮ ಸೇವೆ ನೀಡಿದ್ದರು ಅವರ ಅಗಲಿಕೆಯಿಂದ ಪಕ್ಷಕ್ಕೆ ಮತ್ತು ಸರ್ಕಾರಕ್ಕೆ ತುಂಬಲಾರದ ನಷ್ಟಾಗಿದೆ ಎಂದು ಅವರ ಸೇವೆಯನ್ನು ಸ್ಮರಿಸಿದರು
ರಾಜು ಸೇಠ ಮಾತನಾಡಿ ಸಚಿವ ಮಹಾದೇವ ಪ್ರಸಾದ ಅವರು ಸಹಕಾರಿ ಮತ್ತು ಸಕ್ಕರೆ ಸಚಿವರಾಗಿ ಹಲವಾರು ಮಾರ್ಪಾಡುಗಳನ್ನು ಮಾಡುವದರ ಮೂಲಕ ಅಪಾರ ಜನ ಮೆಚ್ಚುಗೆ ಗಳಿಸಿ ರೈತರ ಪ್ರಿತಿಗೆ ಪಾತ್ರರಾಗಿದ್ದರು ಅವರ ನಿಧನದ ಸುದ್ಧಿ ಕೇಳಿ ಆಘಾತವಾಗಿದೆ ಭಗವಂತ ಅವರ ಕುಟುಂಬದವರಿಗೆ ದುಖವನ್ನು ಸಹಿಸುವ ಶಕ್ತಿ ನೀಡಲಿ ಮೃತರ ಆತ್ಮಕ್ಕೆ ಚಿರ ಶಾಂತಿ ಲಭಿಸಲಿ ಎಂದು ಪ್ರಾರ್ಥಿಸಿದರು
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಿನಯ ನಾವಲಗಟ್ಟಿ ಮಾತನಾಡಿ ಸಚಿವ ಮಹಾದೇವ ಪ್ರಸಾದ ಅವರ ನಿಧನದಿಂದ ದಿಕ್ಕು ತೋಚದಂತಾಗಿದೆ ಅವರ ನಿಧನದ ಸುದ್ಧಿ ತಿಳಿದು ತೀವ್ರ ಭೇಸರವಾಯಿತು ಸಕ್ಕರೆ ಸಚಿವರಾಗಿ ಸಹಕಾರಿ ಸಚಿವರಾಗಿ ಮುಖ್ಯಮಂತ್ರಿಗಳ ಆಪ್ತರಾಗಿ ಸರ್ಕಾರಕ್ಕೆ ಮತ್ತು ಪಕ್ಷಕ್ಕೆ ಅವರು ಮಾಡಿದ ಸೇವೆಯನ್ನು ಪಕ್ಷ ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದರು
ವಿಜಯಾ ಹಿರೇಮಠ,ಸಲೀಂ ಖತೀಬ ಮಾಜಿ ನಗರ ಸೇವಕ ಮಹ್ಮದ ಪೀರಜಾದೆ ಸದಾ ಕೋಲಕಾರ.ಪರಶರಾಮ ವಗ್ಗನ್ಣವರ ಸೇರಿದಂತೆ ಹಲವಾರು ಜನ ಕಾಂಗ್ರೆಸ್ ಪಕ್ಷದ ನಾಯಕರು ಉಪಸ್ಥಿತರಿದ್ದರು
Check Also
ಸದ್ಯಕ್ಕೆ ನಾನು ರೇಸ್ ನಲ್ಲಿ ಇಲ್ಲ, ನಂದೇನಿದ್ರೂ 2028 ರ ತಯಾರಿ…
ಸದ್ಯ ಸಿಎಂ ಸ್ಥಾನದ ರೇಸ್‌ನಲ್ಲಿ ನಾನಿಲ್ಲ, 2028ಕ್ಕೆ ತಯಾರಿ: ಸಚಿವ ಸತೀಶ್ ಜಾರಕಿಹೊಳಿ ಬೆಳಗಾವಿ: ನಾನು ಸಿಎಂ ಆಗುವ ಸಂಬಂಧ …