ಬೆಳಗಾವಿಯ ರೈಲು ನಿಲ್ದಾಣದಲ್ಲಿ ಎರಡು ತಿಂಗಳ ಮಗು ಬಿಟ್ಟು ಹೋದ ಪೋಷಕರು..
ಬೆಳಗಾವಿ- ಬೆಳಗಾವಿಯ ರೈಲು ನಿಲ್ಧಾಣದಲ್ಲಿ ಇತ್ತೀಚೆಗೆ ಮಮತೆಯ ಮಡಿಲು ಎಂಬ ತೊಟ್ಟಿಲನ್ನು ರೈಲು ಮಂತ್ರಿ ಸುರೇಶ ಅಂಗಡಿ ಅವರು ಉದ್ಘಾಟನೆ ಮಾಡಿದ್ದರು ಈ ತೊಟ್ಟಿಲಿಗೆ ಈಗ ಮೊದಲನೇಯ ಮಗು ಕಾಣಿಕೆಯಾಗಿ ಬಂದಿದೆ
ಹೆಣ್ಣು ಎಂಬ ಕಾರಣಕ್ಕೆ 2 ತಿಂಗಳ ಹಸುಗೂಸನ್ನು ಬಾಕ್ಸ್‌ನಲ್ಲಿ ಹಾಕಿ ಬಿಟ್ಟು ಹೋದ ಪೋಷಕರು
ಬೆಳಗಾವಿ ರೈಲು ನಿಲ್ದಾಣ ಮುಂಭಾಗದ ಅಂಗಡಿ ಹತ್ತಿರ ಬಾಕ್ಸ್ ನಲ್ಲಿ ಸಿಕ್ಕಿದೆ.
ಬೆಳಗ್ಗೆ ಅಂಗಡಿ ತಗೆಯುವ ವೇಳೆ ಬಾಕ್ಸ್‌ನಲ್ಲಿ ಪತ್ತೆಯಾದ ಕಂದಮ್ಮ.
ಮಗು ಅಳುವುದನ್ನ ಕೇಳಿ ನಂತರ ಬಾಕ್ಸ್ ತೆರೆದಾಗ ಮಗು ಇರುವುದು ಪತ್ತೆಯಾಗಿದೆ
ರೈಲಿನಲ್ಲಿ ಪ್ರಯಾಣಿಸುವವರೇ ಬಾಕ್ಸ್ ನಲ್ಲಿ ಹಾಕಿ ಬಿಟ್ಟು ಹೋಗಿರುವ ಶಂಕೆ ವ್ಯೆಕ್ತವಾಗಿದೆ
ಕ್ಯಾಂಪ್ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ ಅಂಗಡಿ ಮಾಲೀಕ ಬಳಿಕ ಬಾಕ್ಸನಲ್ಲಿದ್ದ ಮಗುವನ್ನು ಮಮತೆಯ ತೊಟ್ಟಿಲಿಗೆ ಹಾಕಿದ್ದಾನೆ
ಬಳಿಕ ವೈದ್ಯಕೀಯ ತಪಾಸಣೆಗಾಗಿ ಬೆಳಗಾವಿ ಜಿಲ್ಲಾಸ್ಪತ್ರೆಗೆ ಮಗು ದಾಖಲಾಗಿದೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ