ಮಳೆ ಸುರೀತಾ ಇದೆ…
ನದಿ ಹರೀತಾ ಇದೆ..
ಜಲಾಶಯ ತುಂಬುತ್ತಿದೆ.
ನೀರಿನ ಸಮಸ್ಯೆ ಬಗೆಹರೀತಾ ಇದೆ….
ಬೆಳಗಾವಿ -ಸಹ್ಯಾದ್ರಿ ಬೆಟ್ಟದ ಶ್ರೇಣಿ,ಹಾಗೂ ಪಶ್ಚಿಮ ಘಟ್ಟದ ಮಡಿಲಲ್ಲಿ ಇರುವ ಬೆಳಗಾವಿ ಜಿಲ್ಲೆಯಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಮಳೆ ನಿರಂತರವಾಗಿ ಸುರಿಯುತ್ತಿದೆ.ಬೆಳಗಾವಿ ಜಿಲ್ಲೆಯ ಖಾನಾಪೂರ ತಾಲ್ಲೂಕಿನಲ್ಲಿ ಅತೀ ಹೆಚ್ಚು ಮಳೆ ಸುರಿದಿದ್ದು ರಾಮದುರ್ಗ ತಾಲ್ಲೂಕಿನಲ್ಲಿ ಅತೀ ಕಡಿಮೆ ಮಳೆಯಾಗಿದೆ.
ಕಳೆದ 24 ಗಂಟೆಗಳಲ್ಲಿ ಖಾನಾಪೂರ ತಾಲ್ಲೂಕಿನಲ್ಲಿ 41.2 mm ಜಿಲ್ಲೆಯಲ್ಲೇ ಅತೀ ಹೆಚ್ವು, ಮಳೆಯಾದ್ರೆ,ರಾಮದುರ್ಗ ತಾಲ್ಲೂಕಿನಲ್ಲಿ ಕೇವಲ 1.1 mm ಅತೀ ಕಡಿಮೆಳೆಯಾಗಿದೆ.ಪಶ್ಚಿಮ ಘಟ್ಟದಲ್ಲಿ ನಿತರವಾಗಿ ಮಳೆ ಸುರಿಯುತ್ತಿರುವ ಪರಿಣಾಮ ಮಲಪ್ರಭಾ ನದಿಯ ಒಳ ಹರಿವು ಹತ್ತು ಸಾವಿರ ಕ್ಯಸೆಕ್ಸ್ ಕ್ಕಿಂತ ಹೆಚ್ಚಾಗಿ ಮಲಪ್ರಭಾ ನದಿಯ ನವೀಲುತೀರ್ಥ ಜಲಾಶಯದಲ್ಲಿ ಎರಡು ಅಡಿ ನೀರು ಏರಿಕೆಯಾಗಿದೆ.
ಜಿಲ್ಲೆಯ ಘಟಪ್ರಭಾ ನದಿಯಲ್ಲಿ ಒಳಹರಿವು 20 ಸಾವಿರ ಕ್ಯುಸೆಕ್ಸ್ ಹೆಚ್ಚಾಗಿ ಹಿಡಕಲ್ ಜಲಾಶಯದಲ್ಲೂ ಎರಡು ಅಡಿ ನೀರು ಏರಿಕೆಯಾಗಿದ್ದು,ಜಿಲ್ಲೆಯಲ್ಲಿ ಮಳೆ ಸುರೀತಾ ಇದೆ.ನದಿ ಹರೀತಾ ಇದೆ.ನೀರಿನ ಸಮಸ್ಯೆ ಬಗೆಹರೀತಾ ಇದೆ. ಬೆಳಗಾವಿ ಜಿಲ್ಲೆಯಲ್ಲಿ ಕೇವಲ 24 ಗಂಟೆಗಳಲ್ಲಿ ಒಟ್ಟು 141.9 mm ಮಳೆಯಾಗಿರುವದು ಸಂತಸದ ಸಂಗತಿಯಾಗಿದೆ.
ಸೇತುವೆಗಳ ಮುಳುಗಡೆ..
ಬೆಳಗಾವಿ ಜಿಲ್ಲೆಯಲ್ಲಿ ನಿರಂತರ ಮಳೆಗೆ ಜಿಲ್ಲೆಯ ನದಿಗಳು ಹಳ್ಳಗಳು ಉಕ್ಕಿ ಹರಿಯುತ್ತಿರುವ ಪರಿಣಾಮ ಬೆಳಗಾವಿ ಜಿಲ್ಲೆಯ ಹಲವಾರು ಸೇತುವೆಗಳು ಮುಳುಗಡೆಯಾಗಿ ಹಲವಾರು ಹಳ್ಳಿಗಳ ಸಂಪರ್ಕ ಕಡಿತವಾಗಿದೆ.ಘಟಪ್ರಭಾ ನದಿಯ ಗೋಕಾಕ್- ಶಿಂಗಳಾಪೂರ,ಖಾನಾಪೂರ ತಾಲ್ಲೂಕಿನ ಅಲತಾರಿ ನಾಲೆಯ ಸೇತುವೆ,ಕೃಷ್ಣಾ ನದಿಯ ಮಂಗಾವತಿ ಸೇತುವೆ,ವೇದಗಂಗಾ ನದಿಯ ಜತ್ರಾಟ-ಭೀವಶಿ ಸೇತುವೆಗಳು ಮುಳುಗಡೆಯಾಗಿದ್ದು, ಮುಳುಗಡೆಯಾದ ಸೇತುಗಳನ್ನು ಬಳಸದಂತೆ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.