Breaking News
Home / Breaking News / ಗ್ರಾಮಕ್ಕೆ ಅನಿಲ್ ಕುಂಬ್ಳೆ ಭೇಟಿ ನೀಡಿದ್ರೂ ಸಮಸ್ಯೆ ಬಗೆಹರಿದಿಲ್ಲ…!!

ಗ್ರಾಮಕ್ಕೆ ಅನಿಲ್ ಕುಂಬ್ಳೆ ಭೇಟಿ ನೀಡಿದ್ರೂ ಸಮಸ್ಯೆ ಬಗೆಹರಿದಿಲ್ಲ…!!

ಬೆಳಗಾವಿ-ಪಶ್ಚಿಮಘಟ್ಟ ಪ್ರದೇಶದಲ್ಲಿ ಧಾರಾಕಾರ ಮಳೆ ಸುರಿತುತ್ತಿದೆ.ಬೆಳಗಾವಿ ಜಿಲ್ಲೆಯ ಖಾನಾಪೂರ ತಾಲ್ಲೂಕಿನ,ಕಾಡಂಚಿನ ಜನರ ಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.

ಜೀವ ಭಯದಲ್ಲೇ ತೂಗು ಸೇತುವೆ ದಾಟಲು ಕಾಡಂಚಿನ ಜನರ ಹರಸಾಹಸ ಮಾಡುತ್ತಿರುವ ದೃಶ್ಯಗಳನ್ನು ನೋಡಿದ್ರೆ ಮೈ ಝುಮ್ ಅನ್ನುತ್ತೆ.ಬೆಳಗಾವಿ ಜಿಲ್ಲೆಯ ಖಾನಾಪೂರ ತಾಲೂಕಿನ ನೇರಸೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮಸ್ಥರು ನದಿಯ ಮೇಲೆ ನಿರ್ಮಿಸುವ ಕಟ್ಟಿಗೆಯ ಸೇತುವೆ ಮೇಲೆ ಜೀವ ಕೈಯಲ್ಲಿ ಹಿಡಿದುಕೊಂಡು ಓಡಾಡುವ ಪರಿಸ್ಥಿತಿ ಇದೆ.ನಿತ್ಯ ಜೀವ ಕೈಯಲ್ಲಿಯೇ ಹಿಡಿದು ಸೇತುವೆ ಮೇಲೆ ಓಡಾಟ ಮಾಡುತ್ತಿದ್ದಾರೆ.

ನೇರಸೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಗವಾಳಿ,ಪಾಸ್ತೋಲಿ,ಗೌಳಿವಾಡ,ಕೊಂಗಾಳ್ ಗ್ರಾಮದ ಜನರಿಗೆ ಈ ಸೇತುವೆಯೇ ಸಂಪರ್ಕದ ಕೊಂಡಿಯಾಗಿದೆ. ನಾಲ್ಕೂ ಗ್ರಾಮಕ್ಕೆ ಸಂಪರ್ಕವಿಲ್ಲದೇ ಕಟ್ಟಿಗೆಯಿಂದ ನಿರ್ಮಿತವಾದ ಸೇತುವೆ ಮೇಲೆ ಇಲ್ಲಿಯ ಜನ ಓಡಾಟ ನಡೆಸಿದ್ದಾರೆ.ಬಂಡೂರಿ ನಾಲಾಗೆ ಕಟ್ಟಿಗೆಯಿಂದ ನಿರ್ಮಿತ ಸೇತುವೆ ಮೇಲೆ ಅಪಾಯಕಾರಿ ನಡಿಗೆ ಇಲ್ಲಿಯ ಜನರಿಗೆ ಅನಿವಾರ್ಯವಾಗಿದೆ.

ದಿನಬಳಕೆಯ ವಸ್ತುಗಳು ಕೊಳ್ಳಲು ಜೀವ ಕೈಯಲ್ಲಿ ಹಿಡಿದು ಹರಸಾಹಸ ಮಾಡ್ತಿರೋ ಜನ ದಿನನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ.ಸ್ವಲ್ಪ ಹೆಚ್ಚೂಕಮ್ಮಿ ಆದ್ರೂ ಯಮನ ಪಾದ ಗ್ಯಾರೆಂಟಿ ಎನ್ನುವ ಭಯ ಕಾಡುತ್ತಿದೆ.ಕಳೆದ ಹಲವಾರು ವರ್ಷಗಳಿಂದ ಸೂಕ್ತ ಸಂಪರ್ಕ ಇಲ್ಲದೇ ಜೀವನ ಸಾಗಿಸ್ತಿರೋ ಕಾಡಂಚಿನ ಜನರಿಗೆ ಈ ಜೋಕಾಲಿ ಸೇತುವೆಯೇ ಆಧಾರವಾಗಿದೆ.

ಮಳೆಗಾಲದಲ್ಲಂತು ಜೀವಭಯದಲ್ಲೇ ಸೇತುವೆ ದಾಟುತ್ತಿರೋ‌ ಗ್ರಾಮಸ್ಥರು ನರಕಯಾತನೆ ಅನುಭವಿಸುತ್ತಿದ್ದಾರೆ.ಕಟ್ಟಿಗೆಯಿಂದ ನಿರ್ಮಿತವಾದ ತೂಗು ಸೇತುವೆ ಮೇಲೆ ಬೈಕ್ ಗಳು ಸಹ ಓಡಾಟ ಮಾಡುತ್ತಿರುವದು ಅತ್ಯಂತ ಅಪಾಯಕಾರಿಯಾಗಿದೆ.

ಗ್ರಾಮಕ್ಕೆ ಅನಿಲ್ ಕುಂಬ್ಳೆ ಭೇಟಿ ನೀಡಿದ್ರೂ ಸಮಸ್ಯೆ ಬಗೆಹರಿದಿಲ್ಲ.ವನ್ಯಜೀವಿ ರಕ್ಷಿತ ಅರಣ್ಯ ಪ್ರದೇಶ ಹಿನ್ನೆಲೆ ರಸ್ತೆ ಬ್ರಿಡ್ಜ್ ನಿರ್ಮಾಣಕ್ಕೆ ಅನುಮತಿ ಸಿಗದ ಕಾರಣ,ಪರಿಸರ ಇಲಾಖೆಯಿಂದ ರಸ್ತೆ ನಿರ್ಮಾಣಕ್ಕೆ ಅನುಮತಿ ಸಿಗುತ್ತಿಲ್ಲ,ಹೀಗಾಗಿ ಕಳೆದ ಹಲವಾರು ವರ್ಷಗಳಿಂದ ಜೀವ ಭಯದಲ್ಲೇ ಸೇತುವೆ ಮೇಲೆ ಇಲ್ಲಿಯ ಜನ ಓಡಾಡುತ್ತಿರುವದು ದುರ್ದೈವದ ಸಂಗತಿಯಾಗಿದೆ.

ಗರ್ಭಿಣಿಯರು,ಮಹಿಳೆಯರು, ಮಕ್ಕಳು ಸೂಕ್ತ ಚಿಕಿತ್ಸೆಯಿಂದ ವಂಚಿತರಾಗುತ್ತಿದ್ದಾರೆ.ಶಾಶ್ವತ ಪರಿಹಾರ ಕಲ್ಪಿಸುವಂತೆ ಕಾಡಂಚಿನ ಜನರ ಒತ್ತಾಯ ಮಾಡಿದ್ದಾರೆ.ಖಾನಾಪೂರ ತಾಲೂಕಿನಲ್ಲಿ 10ಕ್ಕೂ ಹೆಚ್ಚು ಪ್ರದೇಶಗಳಲ್ಲಿ,ಗ್ರಾಮಗಳಲ್ಲಿ ಇಂತಹ ಸಮಸ್ಯೆ ಇದೆ.
ಸರ್ವೇ ಮಾಡಿ ನ್ಯಾಯ ಒದಗಿಸುವಂತೆ ಕಾಡಂಚಿನ ಜನ ಒತ್ತಾಯಿಸಿದ್ದಾರೆ.

Check Also

ಮನೆ,ಮನೆಗೆ ಹೋಗಿ ಮತದಾರರ ಚೀಟಿ ವಿತರಿಸಲು ಡಿಸಿ ನಿತೇಶ್ ಪಾಟೀಲ್ ಸೂಚನೆ

ಬೆಳಗಾವಿ, ):ಮತದಾರರಿಗೆ ತಮ್ಮ ಮತಗಟ್ಟೆಗಳ ಬಗ್ಗೆ ಮುಂಚಿತವಾಗಿ ಮತದಾರರ ಚೀಟಿ(ವೋಟರ್ ಸ್ಲಿಪ್)ಗಳನ್ನು ನೀಡಿದರೆ ಮತದಾನ ಮಾಡಲು ಅನುಕೂಲವಾಗಲಿದೆ. ಆದ್ದರಿಂದ ಪ್ರತಿಯೊಂದು …

Leave a Reply

Your email address will not be published. Required fields are marked *