Breaking News

ಡಲ್ ಹೊಡೆದ ಮಾಜಿ ಶಾಸಕ ಸಂಜಯ ಪಾಟೀಲ್….!!

ಬೆಳಗಾವಿ- ಬೆಳಗಾವಿ ಜಿಲ್ಲೆಯ ರಾಜಕಾರಣವನ್ನು ಅಳತೆ ಮಾಡಿ ತೂಗಿ,ಗುಣಾಕಾರ,ಭಾಗಾಕಾರ ಮಾಡಲು ಸಾಧ್ಯವೇ ಇಲ್ಲ ಅಂತಾ ಕೆಲವು ಅನುಭವಿಗಳು ಹೇಳ್ತಾರೆ,ಇವತ್ತು ಸಂಜಯ ಪಾಟೀಲರ ಹತಾಶೆಯ ನುಡಿಗಳನ್ನು ಗಮನಿಸಿದರೆ ಇದು ನಿಜ ಅನಿಸುತ್ತೆ.

ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸಾಹುಕಾರ್ ರಮೇಶ್ ಜಾರಕಿಹೊಳಿ ಅವರು ಇಂದು ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ನೂತನವಾಗಿ ಆಯ್ಕೆಯಾದ ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯತಿ ಅದ್ಯಕ್ಷ ಉಪಾದ್ಯಕ್ಷರನ್ನು ಮತ್ತು ಸದಸ್ಯರನ್ನು ಸನ್ಮಾನಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.

ಈ ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಶಾಸಕ ಸಂಜಯ ಪಾಟೀಲ, ನಾನು ಇತ್ತೀಚಿಗೆ ಶಾಸಕನಾಗುವ ಕನಸು ಕಾಣುವದನ್ನು ಬಿಟ್ಟಿದ್ದೇನೆ.ನನ್ನ ಈ ಮಾತುಗಳಿಂದ ಶಿವಾಜಿ ಸುಂಠಕರ,ಮತ್ತು ಧನಂಜಯ ಜಾಧವ್ ಅವರಿಗೆ ಬಹುಶಃ ಖುಷಿಯಾಗಿರಬಹುದು ಎಂದು ಹೇಳುವ ಮೂಲಕ ಮಾಜಿ ಶಾಸಕ ಸಂಜಯ ಪಾಟೀಲ್ ಅಚ್ಚರಿ ಮೂಡಿಸಿದರು.

ಇದಕ್ಕೂ ಮೊದಲು ಮಾತನಾಡಿದ ಸಚಿವ ರಮೇಶ್ ಜಾರಕಿಹೊಳಿ ,ನಾನು ಕಾಂಗ್ರೆಸ್ ನಲ್ಲಿ ಇದ್ದಾಗ ನನ್ನಿಂದ ಸಂಜಯ ಪಾಟೀಲರಿಗೆ ಅನ್ಯಾಯವಾಗಿದೆ ಈ ಕುರಿತು ನಾನು ಕ್ಷಮೆಯಾಚಿಸುತ್ತೇನೆ,ಮುಂದಿನ ದಿನಗಳಲ್ಲಿ ಅದನ್ನು ಸರಿಪಡಿಸುತ್ತೇನೆ ಎಂದು ಹೇಳುವ ಮೂಲಕ ಬೆಳಗಾವಿ ಗ್ರಾಮೀಣ ಕ್ಷೇತ್ರದ ಮುಂದಿನ ಬಿಜೆಪಿ ಉತ್ತರಾಧಿಕಾರಿ ಸಂಜಯ್ ಪಾಟೀಲ್ ಎಂದು ಹೇಳಿದ್ದರು.

ಆದ್ರೆ ಸಂಜಯ ಪಾಟೀಲ್ ಯಾಕೋ ಏನೋ ಇವತ್ತೆ ಹತಾಶೆಯಿಂದ ಮಾತನಾಡಿದ್ರು,ಶಾಸಕನಾಗುವ ಕನಸು ಕಾಣುವದನ್ನೇ ಬಿಟ್ಟಿದ್ದೇನೆ ಎಂದು ಬಹಿರಂಗವಾಗಿ ಹೇಳುವ ಮೂಲಕ ಸವಾಲು ಹಾಕಿದ್ರೋ,ಅಥವಾ ಬೆಳಗಾವಿ ಎಂಪಿ ಆಗುವ ಕನಸು ಕಾಣುತ್ತಿದ್ದಾರೆಯೋ ಅನ್ನೋದನ್ನು ಹೇಳಲಿಲ್ಲ.

ಬೆಳಗಾವಿ ಗ್ರಾಮೀಣ ಕ್ಷೇತ್ರದ ಬಿಜೆಪಿ ನಾಯಕರನ್ನು ಒಂದುಗೂಡಿಸಿದ ಸಾಹುಕಾರ್…..

ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಬಿಜೆಪಿ ಸಂಘಟನೆ ಮೂರು ಗುಂಪಾಗಿತ್ತು,ಮಾಜಿ ಶಾಸಕ ಸಂಜಯ್ ಪಾಟೀಲರ ಒಂದು ಗುಂಪು,ಧನಂಜಯ್ ಜಾಧವ ಗುಂಪು,ಶಿವಾಜಿ ಸುಂಠಕರ ಗುಂಪು ಹೀಗೆ ಬಿಜೆಪಿಯಲ್ಲಿ ಮೂರು ಗುಂಪುಗಳಾಗಿದ್ದು ನಿಜ,ಇವತ್ತು ಮೊದಲ ಬಾರಿಗೆ ಈ ಮೂರು ಗುಂಪಿನ ನಾಯಕರು ಒಂದೇ ವೇದಿಕೆಗೆ ತಂದಿದ್ದು ಸಚಿವ ರಮೇಶ್ ಜಾರಕಿಹೊಳಿ‌

ಗ್ರಾಮ ಪಂಚಾಯತಿ ಸದಸ್ಯರನ್ನು ಸನ್ಮಾನಿಸುವ ಕಾರ್ಯಕ್ರಮದಲ್ಲಿ ಈ ಮೂರು ಜನ ನಾಯಕರು ಒಂದೇ ವೇದಿಕೆಯನ್ನು ಹಂಚಿಕೊಳ್ಳುವ ಮೂಲಕ ಒಗ್ಗಟ್ಟು ಪ್ರದರ್ಶನ ಮಾಡಿದ್ದು ಇವತ್ತಿನ ಕಾರ್ಯಕ್ರಮದ ವಿಶೇಷತೆ…

ತಾಕತ್ತಿನ ಜೊತೆ ಸತ್ಯಾಸತ್ಯತೆಗೆ ಸಾಕ್ಷಿಯಾದ ಸಾಹುಕಾರ್…

ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಕಾಂಗ್ರೆಸ್ ಬಿರುಗಾಳಿ ,ರಮೇಶ್ ಜಾರಕಿಹೊಳಿಗೆ ಮುಖಭಂಗ ಎನ್ನುವ ಸುದ್ಧಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ದಿನವೇ ರಮೇಶ್ ಜಾರಕಿಹೊಳಿ ಯಾವ ಊರಲ್ಲಿ ಯಾರ ಬೆಂಬಲಿಗರು ಆಯ್ಕೆಯಾಗಿದ್ದಾರೆ ಅನ್ನೋದನ್ನು ಖುದ್ದಾಗಿ ಅವರನ್ನು ಸೇರಿಸುತ್ತೇನೆ ಎಂದು ಮಾದ್ಯಮಗಳ ಎದುರು ರಮೇಶ್ ಜಾರಕಿಹೊಳಿ ಹೇಳಿದ್ದರು

ನುಡಿದಂತೆ ನಡೆದ ಸಚಿವ ರಮೇಶ್ ಜಾರಕಿಹೊಳಿ ಇಂದು ಬೆಳಗಾವಿ ನಗರದ ಸಿಪಿಎಡ್ ಮೈದಾನದಲ್ಲಿ ಬೃಹತ್ತ್ ಪೆಂಡಾಲ್ ಹಾಕಿ ಗ್ರಾಮೀಣ ಕ್ಷೇತ್ರದ ಗ್ರಾಮಗಳ ಹೆಸರು ಬರೆದು,ಪ್ರತಿಯೊಂದು ಗ್ರಾಮ ಪಂಚಾಯತಿಯ ಅದ್ಯಕ್ಷ ಉಪಾದ್ಯಕ್ಷರನ್ನು ಮತ್ತು ಸದಸ್ಯರನ್ನು ಪ್ರತ್ಯೇಕವಾಗಿ ಕೂರಿಸಿ ಅವರನ್ನು ಸನ್ಮಾನಿಸಿ ಯಾವ ಗ್ರಾಮದಲ್ಲಿ ಬಿಜೆಪಿ ಝೇಂಡಾ ಹಾರಿದೆ ಅನ್ನೋದನ್ನು ಇವತ್ತು ಪ್ರತ್ಯಕ್ಷಾಗಿ ಸಾಭೀತುಪಡಿಸಿದರು.

ಸುಳೇಭಾಂವಿ,ಮೋದಗಾ,ಹಿರೇಬಾಗೇವಾಡಿ ಈ ಮೂರು ಗ್ರಾಮಗಳ ಅದ್ಯಕ್ಷ ಉಪಾಧ್ಯಕ್ಷರು,ಆ ಕಡೆ ಈ ಕಡೆ ಎರಡೂ ಕಡೆ ಇದ್ದಾರೆ ಅವರೂ ಮುಂದಿನ ದಿನಗಳಲ್ಲಿ ನಮ್ಮ ಜೊತೆ ಬರಬಹುದು,ನಾನು ಕಾಂಗ್ರೆಸ್ ನಲ್ಲಿ ಇದ್ದಾಗ ಬಹಳಷ್ಟು ಬಿಜೆಪಿ ನಾಯಕರನ್ನು ಕಾಂಗ್ರೆಸ್ಸಿಗೆ ಸೇರಿಸಿದ್ದೆ,ಅವರೆಲ್ಲರೂ ನನ್ನ ಜೊತೆ ಇದ್ದಾರೆ ಮುಂದೆ ಬಹಿರಂಗವಾಗಿ ಬಿಜೆಪಿ ಬರ್ತಾರೆ,ಅವರ ಜೊತೆ ಬಿಜೆಪಿ ಕಾರ್ಯಕರ್ತರು ವೈಮನಸ್ಸು ಮಾಡಬೇಡಿ ಅವರೆಲ್ಲರೂ ನಮ್ಮವರೇ ಎಂದು ರಮೇಶ್ ಜಾರಕಿಹೊಳಿ ಹೇಳಿದರು…..

ಹೆಬ್ಬಾಳಕರ ಬಗ್ಗೆ ಸಾಹುಕಾರ್ ಸಾಫ್ಟ್ ಕಾರ್ನರ್….

ಇವತ್ತಿನ ಕಾರ್ಯಕ್ರಮದಲ್ಲಿ ಸಚಿವ ರಮೇಶ್ ಜಾರಕಿಹೊಳಿ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ವಿರುದ್ಧ ವಾಗ್ದಾಳಿ ಮಾಡಬಹುದು ಎನ್ನುವ ನಿರೀಕ್ಷೆ ಎಲ್ಲರದಾಗಿತ್ತು ಆದ್ರೆ ಯಾಕೋ ಏನೋ ಸಾಹುಕಾರ್ ಇವತ್ತು ಶಾಂತವಾಗಿದ್ದರು,ಹೆಣ್ಣು ಮಕ್ಕಳನ್ನು ದೇವರು ಎಂದು ಕಾಣುವ ಸಂಸ್ಕೃತಿ ನಮ್ಮದು ಪಕ್ಷದ ವಿಚಾರ ಬಂದಾಗ ಅಷ್ಟೇ ನಾವು ವಿರೋಧ ಮಾಡುತ್ತೇವೆ ವ್ಯೆಯಕ್ತಿಕವಾಗಿ ನಾವು ಯಾರನ್ನೂ ದ್ವೇಷ ಮಾಡುವದಿಲ್ಲ,ಬೆಳಗಾವಿ ಜಿಲ್ಲೆಯ ಯಾವ ಯಾವ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ಸಿನ ಶಾಸಕರು ಇದ್ದಾರೆಯೋ ಅಂತಹಾ ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಿಸೋದು ನನ್ನ ಕರ್ತವ್ಯ ಜಿಲ್ಲಾ ಉಸ್ತುವಾರಿ ಸಚಿವನಾದ ನಾನು ಬೆಳಗಾವಿ ಜಿಲ್ಲೆಯಾದ್ಯಂತ ಬಿಜೆಪಿ ಗೆಲ್ಲಿಸುವ ಸಂಕಲ್ಪ ಮಾಡಿದ್ದೇನೆ ಎಂದು ರಮೇಶ್ ಜಾರಕಿಹೊಳಿ ಹೇಳಿದರು…

ಕೆರೆ ಪುನರ್ ನಿರ್ಮಾಣ ಮಾಡುತ್ತೇನೆ…

ಹಿರೇಬಾಗೇವಾಡಿ ಸಮೀಪ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕಾಮಗಾರಿ ನಡೆದಿರುವ ಕಾರಣ ಕೆರೆಯಲ್ಲಿ ರಸ್ತೆ ಮಾಡಲಾಗಿದ್ದು ಕಾಮಗಾರಿ ಮುಗಿದ ತಕ್ಷಣ ಈ ಕೆರೆಯ ಪುನರ್ ನಿರ್ಮಾಣ ಮಾಡಿಕೊಡುತ್ತೇನೆ ಎಂದು ಸಚಿವ ರಮೇಶ್ ಜಾರಕಿಹೊಳಿ ಭರವಸೆ ನೀಡಿದ್ರು…

Check Also

ಜ್ಞಾನೇಶ್ವರ ಮುನಿ ಮಹಾರಾಜರು (86) ವಿಧಿವಶ

ಬೆಳಗಾವಿ -ಯಮ ಸಲ್ಲೇಖನ ವೃತ್ತದ ಮೂಲಕ ಜ್ಞಾನೇಶ್ವರ ಮುನಿ ಮಹಾರಾಜರು (86) ಇಹಲೋಕವನ್ನು ತ್ಯೇಜಿಸಿದ್ದಾರೆ. ಬೈಲಹೊಂಗಲ ತಾಲೂಕಿನ ದೇವಲಾಪುರ ಕ್ಷೇತ್ರದಲ್ಲಿ …

Leave a Reply

Your email address will not be published. Required fields are marked *