Home / Breaking News / ಬೆಳಗಾವಿಯಲ್ಲಿ ಹೊಸ ಬಾಂಬ್ ಸಿಡಿಸಿದ ಸಾಹುಕಾರ್…!!

ಬೆಳಗಾವಿಯಲ್ಲಿ ಹೊಸ ಬಾಂಬ್ ಸಿಡಿಸಿದ ಸಾಹುಕಾರ್…!!

ಬೆಳಗಾವಿ-ಬೆಳಗಾವಿಯಲ್ಲಿ ಸಚಿವ ರಮೇಶ ‌ಜಾರಕಿಹೊಳಿ ಹೊಸ ಬಾಂಬ್ ಸಿಡಿಸಿದ್ದಾರೆ ಕಾಂಗ್ರಸ್ಸಿನ ಐದು ಜನ ಟಾಪ್ ಲೀಡರ್ ಗಳು ನನ್ನನ್ನು ಸಂಪರ್ಕ ಮಾಡಿದ್ದು ನಾನು ಮನಸ್ಸು ಮಾಡಿದ್ರೆ 24 ಗಂಟೆಯಲ್ಲಿ ಅವರನ್ನು ಬಿಜೆಪಿಗೆ ತರಬಲ್ಲೇ ಎಂದು ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.

ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ಗ್ರಾಪಂ ಸದಸ್ಯರಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ಮಾಜಿ ಶಾಸಕ ಸಂಜಯ ಪಾಟೀಲ್ ಕ್ಷಮೆ ಕೊರುತ್ತೇನೆ.
ಈ ಹಿಂದೆ ಕಾಂಗ್ರೆಸ್ ಮಂತ್ರಿಯಾಗಿ ಕೆಲಸ ಮಾಡಿದ್ದೇವೆ.
ಮುಂದಿನ ದಿನದಲ್ಲಿ ಗ್ರಾಮೀಣ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಿಸಲು ಪ್ರಯತ್ನ ಮಾಡುತ್ತೇನೆ,
ಗ್ರಾಮೀಣದಲ್ಲಿ ಯಾವುದೇ ಪರಿಸ್ಥಿತಿಯಲ್ಲಿ ಬಿಜೆಪಿ ಗೆಲ್ಲಿಸಬೇಕು. ಈ ಬಗ್ಗೆ ದೇವರಲ್ಲಿ ನಾನು ಪ್ರತಿಜ್ಞೆ ಮಾಡಿದ್ದೇನೆ. ಶಾಸಕರು ಗೆದ್ದ ಒಂದೇ ಗಂಟೆಯಲ್ಲಿ ಏನ್ ಮಾಡಿದ್ದಾರೆ ಎಂಬುದು ರಾಜ್ಯಕ್ಕೆ ಗೊತ್ತು ಎಂದರು.

23 ಗ್ರಾಪಂ ಅಧ್ಯಕ್ಷರು ಸಮಾರಂಭಕ್ಕೆ ಬಂದಿದ್ದಾರೆ.
ಇನ್ನೂ ಕೆಲವರು ಬರ್ತಿನಿ ಅಂತ ಫೋನ್ ಮಾಡಿದ್ರು.
ಆದರೇ ಪಕ್ಕಾ ಮಾಡಿಕೊಂಡು ಬರುವಂತೆ ಹೇಳಿದ್ದೇನೆ.
ಗ್ರಾಪಂ ಮತ ಏಣಿಕೆ ಮುಗಿಯುವ ಮೊದಲೇ ರಮೇಶ ಜಾರಕಿಹೊಳಿ‌ಗೆ ಮುಖಭಂಗ ಎಂದರು.
ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಉಲ್ಲೇಖ ಮಾಡಿದ್ದರುಅದಕ್ಕಾಗೀಯೇ ಶಕ್ತಿ ಪ್ರದರ್ಶನ ಮಾಡಲು ಸಭೆ ಕರೆಯಲಾಗಿದೆ ಗ್ರಾಮೀಣದಲ್ಲಿ ಕಾಂಗ್ರೆಸ್ ನಲ್ಲಿ ಇರೋ ಕಾರ್ಯಕರ್ತರು ನಮ್ಮವರು ನನ್ನ ಜೊತೆಗಿದ್ದವರು ಅವರ ಜೊತೆ ವೈಮನಸ್ಸು ಬೇಡ ಮುಂದಿನ ದಿನಗಳಲ್ಲಿ ಅವರೂ ಬಿಜೆಪಿಗೆ ಸೇರ್ತಾರೆ ಎಂದು ರಮೇಶ್ ಜಾರಕಿಹೊಳಿ ಹೇಳಿದರು.

60 ಸಾವಿರ ಲಿಡ್ ನಲ್ಲಿ ಮುಂದಿನ ಸಲ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಿಸಬೇಕು.ಹತ್ತು ಇಪ್ಪತ್ತು ಸಾವಿರ ಮತಗಳಿಂದ ಗೆದ್ದರೆ ಅದು ಗೆಲುವು ಅಲ್ಲ,ಈಗಿನಿಂದಲೇ ಗ್ರಾಮ ಪಂಚಾಯತಿ ಸದಸ್ಯರು ಜನರ ಸೇವೆ ಮಾಡಿ ಗ್ರಾಮೀಣ ಕ್ಷೇತ್ರದ ಜನರ ವಿಶ್ವಾಸ ಗಳಿಸಿ ಎಂದರು.

ದೇಶದಲ್ಲಿ ಮಹಿಳೆಯರಿಗೆ ದೇವರು ಎನ್ನುವ ಭಾವನೆ ಇದೆ. ರಾಜಕೀಯವಾಗಿ ಮಾತ್ರ ವಿರೋಧ, ವೈಯಕ್ತಿಕ ಟೀಕೆ ಬೇಡ.ಇತಿ ಮಿತಿಯಲ್ಲಿ ಮಾತನಾಡುವಂತೆ ಹೆಬ್ಬಾಳ್ಕರ್ ಗೆ ಎಚ್ಚರಿಕೆ ನೀಡಿದರು.

ಕಾಂಗ್ರೆಸ್ಸಿನಿಂದ ಬಿಜೆಪಿಗೆ ಬಂದ 17 ಶಾಸಕರು ಎಲ್ಲರೂ ಸಂತೋಷದಿಂದ ಇದ್ದಾರೆ.ಸಿದ್ದರಾಮಯ್ಯ ಜೊತೆಗೆ ಇಂದಿಗೂ ನಮ್ಮ ಸಂಬಂಧ ಚನ್ನಾಗಿದೆ.ಯಾರು ವಾಪಸ್ ಕಾಂಗ್ರೆಸ್ ಗೆ ಹೋಗುವ ಪ್ರಯತ್ನ ಇಲ್ಲ24 ಗಂಟೆಯಲ್ಲಿ ಕಾಂಗ್ರೆಸ್ 5 ಶಾಸಕರು ರಾಜೀನಾಮೆ ನೀಡಲು ಸಿದ್ದರಿದ್ದಾರೆ. ಯಾರು ನಂಬಲು ಸಾಧ್ಯವೇ ಇಲ್ಲಂದಹ ಐದು ಹೆಸರು ನಮ್ಮ ಬಳಿ ಇವೆ ಅವರ ಹೆಸರು ಕೇಳಿದ್ರೆ ನೀವೂ ನಡಗ್ತೀರಾ,ಇನ್ನಷ್ಟು ನಾಯಕರನ್ನು ಕಾಂಗ್ರೆಸ್ಸಿನಿಂದ ಬಿಜೆಪಿಗೆ ತರಲು ನಾವು ಪ್ರಯತ್ನ ಮಾಡುತ್ತಿದ್ದೇವೆ. ನಾವು ಮತ್ತೆ ಮರಳಿ ಎಂದಿಗೂ ಕಾಂಗ್ರೆಸ್ಸಿಗೆ ಹೋಗುವದಿಲ್ಲ,ಕಳೆದ ಇಪ್ಪತ್ತು ವರ್ಷದಲ್ಲಿ ಕಾಂಗ್ರೆಸ್ ಕೊಡಲಾಗದ ಗೌರವ ಬಿಜೆಪಿ ಕೊಟ್ಟಿದೆ ಎಂದು ರಮೇಶ್ ಜಾರಕಿಹೊಳಿ ಹೇಳಿದರು.

Check Also

ಒಂದು ಟೇಬಲ್ ಎರಡು ಖರ್ಚಿಗೆ ಮಾತ್ರ ಅವಕಾಶ….!!

ಲೋಕಸಭಾ ಚುನಾವಣೆ: ಬಿಗಿ ಬಂದೋಬಸ್ತ್ ಸುಗಮ-ಶಾಂತಿಯುತ ಮತದಾನಕ್ಕೆ ಸಕಲ ಸಿದ್ದತೆ: ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಬೆಳಗಾವಿ, -: ಲೋಕಸಭಾ ಚುನಾವಣೆ …

Leave a Reply

Your email address will not be published. Required fields are marked *