Breaking News
Home / Breaking News / ಇಲ್ಲಿ ಆತ್ಮಗಳು ವಾಸಿಸುತ್ತಿವೆ ಅಂತಾ ಸರ್ಕಾರವೇ ಬೋರ್ಡ್ ಹಾಕಿದೆ…!!!

ಇಲ್ಲಿ ಆತ್ಮಗಳು ವಾಸಿಸುತ್ತಿವೆ ಅಂತಾ ಸರ್ಕಾರವೇ ಬೋರ್ಡ್ ಹಾಕಿದೆ…!!!

ಬೆಳಗಾವ-ಉರಿನ ಹೆಸರು,ಜನಸಂಖ್ಯೆ ಬರೆದು ಬೋರ್ಡ್ ಹಾಕಿದ್ದನ್ನು ನಾವು ನೋಡಿದ್ದೇವೆ.ಆದ್ರೆ ಊರಿನ ಹೆಸರು,ಊರಿನಲ್ಲಿ ಇಷ್ಟು ಆತ್ಮಗಳು ಬದುಕುತ್ತಿವೆ ಅಂತಾ ಸರ್ಕಾರವೇ ಬೋರ್ಡ್ ಹಾಕಿ ಅಚ್ಚರಿ ಮೂಡಿಸಿದೆ.

ಬೆಳಗಾವಿ ಸಾಂಬ್ರಾ ರಸ್ತೆಯಲ್ಲಿ ಸಂಚರಿಸಿ ನೋಡಿ,ಈ ರಸ್ತೆಯಲ್ಲಿ ಬರುವ ಪ್ರತಿಯೊಂದು ಗ್ರಾಮದಲ್ಲೂ ಬೆಳಗಾವಿ – ಬಾಗಲಕೋಟೆ ಹೈವೇ ಪಕ್ಕ ಬೋರ್ಡ್ ಹಾಕಿದ್ದಾರೆ.ಈ ಬೋರ್ಡ್ ನಲ್ಲಿ ಗ್ರಾಮದ ಹೆಸರು,ಜನಸಂಖ್ಯೆ ಬರೆದಿದ್ದಾರೆ ಜೊತೆಗೆ souls ಎಂಬ ಪದ ಬಳಕೆ ಮಾಡಿದ್ದಾರೆ souls ಅಂದ್ರೆ ಆತ್ಮ ಈ ಗ್ರಾಮದಲ್ಲಿ ಆತ್ಮಗಳು ಇವೆ.ಎನ್ನುವ ಫಲಕಗಳು ನಮಗೆ ಕಾಣಿಸುತ್ತವೆ.

ಇದು ಮುತಗಾ ಗ್ರಾಮದಲ್ಲಿ ಹಾಕಿರುವ ಫಲಕ ಇದರಲ್ಲಿ 7561 ಆತ್ಮಗಳು ವಾಸಿಸುತ್ತಿವೆ ಅಂತಾ ಬರೆಯಲಾಗಿದೆ.ಸಾಮಾನ್ಯವಾಗಿ ಜನಸಂಖ್ಯೆ ಎಷ್ಟಿದೆ ಅಂತಾ ಬರೀತಾರೆ ಆದ್ರೆ ಎಲ್ಲ ಫಲಕ ಗಳಲ್ಲಿಯೂ ಈ ಗ್ರಾಮದಲ್ಲಿ ಆತ್ಮಗಳು ವಾಸಿಸುತ್ತಿವೆ ಅಂತಾ ಬರೆದಿದ್ದು.ಈ ಬೋರ್ಡ್ ಗಳು ಈಗ ಚರ್ಚೆಗೆ ಕಾರಣವಾಗಿವೆ.

ಮೂಡನಂಬಿಕೆ ವಿರುದ್ಧ ಕಾನೂನು ಜಾರಿಗೆ ತಂದಿರುವ ಸರ್ಕಾರವೇ ಈ ರೀತಿಯ ಫಲಕ ಹಾಕಿದ್ರೆ ಹೇಗೆ ? ಈ ಗ್ರಾಮದಲ್ಲಿ ಆತ್ಮಗಳು ಬದುಕುತ್ತಿವೆ.ವಾಸಿಸುತ್ತಿವೆ ಅಂದ್ರೆ ಏನರ್ಥ.? ಎನ್ನುವ ಪ್ರಶ್ನೆಗಳು ಎದುರಾಗಿವೆ.

Check Also

ಬುಧವಾರ, ಬೆಳಗಾವಿಯಲ್ಲಿ ಜಗದೀಶ್ ಶೆಟ್ಟರ್ ಗೆ ಗ್ರ್ಯಾಂಡ್ ವೆಲ್ ಕಮ್…!!!

ಬೆಳಗಾವಿ: ಬೆಳಗಾವಿ ಲೋಕಸಭಾ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಜಗದೀಶ್ ಶೆಟ್ಟರ್ ಅವರು ನಾಳೆ ಬುಧವಾರ ಬೆಳಗಾವಿಗೆ ಬರಲಿದ್ದು ಬೆಳಗಾವಿಯ ಬಿಜೆಪಿ …

Leave a Reply

Your email address will not be published. Required fields are marked *