ಬೆಳಗಾವಿ ಒಂಟಿಯಾಗಿ ಹೋಗುವವರನ್ನು ಹಿಂಬಾಲಿಸಿ ಅವರನ್ನು ಹೆದರಿಸಿ ಬೆದರಿಸಿ ಅವರ ಬಳಿ ಇರುವ ಹಣ,ಮೋಬೈಲ್ ಕಸಿದುಕೊಳ್ಳುವ ಖದೀಮನೊಬ್ಬ ಈಗ ಪೋಲೀಸರ ಅತಿಥಿಯಾಗಿದ್ದಾನೆ
ಬೆಳಗಾವಿಯಲ್ಲಿ ಒಂಟಿ ವ್ಯಕ್ತಿಗಳನ್ನ ಟಾರ್ಗೇಟ್ ಮಾಡುತ್ತಿದ್ದ ರೌಡಿ ಶೀಟರ್ ಒಬ್ಬ ಅವರ ಮೇಲೆ ಹಲ್ಲೆ ನಡೆಸಿ, ಅವರ ಬಳಿಯಿದ್ದ ಮೊಬೈಲ್ ಮತ್ತು ಹಣವನ್ನು ಕಿತ್ತುಕೊಂಡು ಪರಾರಿಯಾಗುತ್ತಿದ್ದ. ಹೀಗೆ ಅಮಾಯಕರನ್ನ ಹೆದರಿಸಿ ಹಣ ಸುಲಿಗೆ ಮಾಡುತ್ತಿದ್ದವನು ಬೆಳಗಾವಿಯ ಕ್ಯಾಂಪ್ ನಿವಾಸಿ 22 ವರ್ಷದ ರೌಡಿ ಶೀಟರ್ ವಾಸೀಮ್ ಪಟೇಲ್.
ಕಳೆದ ಹದಿನೈದು ದಿನಗಳಿಂದ ಈತನ ಉಪಟಳ ಹೆಚ್ಚಾಗಿತ್ತು. ನಗರದ ಸಂತೋಷ ಚಿತ್ರಮಂದಿರದ ಬಳಿ ಬರುವವರನ್ನ ಟಾರ್ಗೇಟ್ ಮಾಡುತ್ತಿದ್ದ ಈ ಖದಿಮ ನಿನ್ನೆ ರಾತ್ರಿಯೂ ಕೂಡ ಗಜಾನನ್ ತಳವಾರ್ ಎಂಬ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿ ಆತನ ಬಳಿಯಿದ್ದ ಐನೂರು ರೂಪಾಯಿ ಮತ್ತು ಮೊಬೈಲ್ ಕಸಿದುಕೊಂಡಿದ್ದಾನೆ.
ನಂತರ ಗಜಾನನ್ ಕೂಡ ರೌಡಿ ಶೀಟರ್ ಗೆ ಪ್ರತಿರೋಧ ವ್ಯಕ್ತಡಿಸುತ್ತಿದ್ದಾಗ ಗಸ್ತಿನಲ್ಲಿದ್ದ ಖಡೆಬಜಾರ್ ಪೊಲೀಸರು ರೌಡಿ ಶೀಟರ್ ವಾಸಿಮ್ ಪಟೇಲ್ ನನ್ನ ಬಂಧಿಸಿದ್ದಾರೆ. ಇನ್ನು ತನ್ನನ್ನ ಪೊಲೀಸರು ಬಂಧಿಸಿ ತಂದದ್ದೆ ತಡ ಪೊಲೀಸ್ ಠಾಣೆಯಲ್ಲೇ ಈ ರೌಡಿ ಶೀಟರ್ ಹೈಡ್ರಾಮಾ ಶುರು ಹಚ್ಚಿಕೊಂಡಿದ್ದಾನೆ. ಅಲ್ಲದೇ ದೂರು ನೀಡಿದ ವ್ಯಕ್ತಿ ಗಜಾನನ್ ತಳವಾರನಿಗೆ ಕೈ ಮ್ಮುಗಿಯುತ್ತ ಆತನ ಕಾಲಿಗೆ ಬಿಳುತ್ತ, ನನ್ನ ಮೇಲಿನ ಕೇಸ್ ವಾಪಸ್ ತಗೋ ನಿನ್ನ ಕಾಲಿಗೆ ಬಿಳ್ತಿನಿ ಪೊಲೀಸ್ರು ನನ್ನನ್ನ ಹಿಗ್ಗಾಮುಗ್ಗಾ ಹೋಡೆದಿದ್ದಾರೆ ಅಂತ ಹೈಡ್ರಾಮಾ ಮಾಡಿದ್ದಾನೆ.
ಅಲ್ಲದೇ ಪೊಲೀಸ್ ಠಾಣೆಯಿಂದ ಆರೋಪಿಯನ್ನ ಮೆಡಿಕಲ್ ಟೆಸ್ಟ್ ಗಾಗಿ ಜಿಲ್ಲಾಸ್ಪತ್ರೆಗೆ ತಂದಾಗಲೂ ಈ ರೌಡಿ ಶೀಟರ್ ಆಸ್ಪತ್ರೆಯಲ್ಲಿ ವೈದ್ಯರು ಹಾಗೂ ಪೊಲೀಸರನ್ನ ಅವಾಚ್ಯ ಶಬ್ದಗಳಿಂದ ನಿಂದಿಸಿ ದರ್ಪ ಮೆರೆದಿದ್ದಾನೆ.