ಬೆಳಗಾವಿ-ಬೆಳಗಾವಿ ಮಹಾನಗರ ಸ್ಮಾರ್ಟ ಸಿಟಿ ಪಟ್ಟಿಯಲ್ಲಿ ಸೇರಿಕೊಂಡು ಹಲವು ತಿಂಗಳಗಳು ಗತಿಸಿವೆ ಎರಡು ದಿನದ ಹಿಂದೆ ಈ ಯೋಜನೆಯ 383 ಕೋಟಿ ರೂಪಾಯಿ ಅನುದಾನ ಈಗಾಗಲೆ ಬೆಳಗಾವಿ ಪಾಲಿಕೆಯ ಖಾತೆಗೆ ಜಮಾ ಆಗಿದೆ ಆದರೆ ಸ್ಮಾರ್ಟ ಸಿಟಿ ಯೋಜನೆಯ ಅಭಿವೃದ್ಧಿ ಕಾಮಗಾರಿಗಳು ಆರಂಭವಾಗುವದು ಯಾವಾಗ ಎನ್ನುವ ಪ್ರಶ್ನೆ ಬೆಳಗಾವಿ ನಿವಾಸಿಗರನ್ನು ಕಾಡುತ್ತಿದೆ
ಸ್ಮಾರ್ಟ ಸಿಟಿ ಯೋಜನೆಯ ಅನುಷ್ಠಾನಕ್ಕೆ ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಕನ್ಸಲ್ಟಂಟ್ ಕಂಪನಿಯೊಂದನ್ನು ನಿಯೋಜಿಸಲು ಟೆಂಡರ್ ಕರೆಯಲಾಗಿದೆ ರಾಷ್ಟ್ರದ ಆರು ಖ್ಯಾತನಾಮ ಕಂಪನಿಗಳು ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದಾರೆ
ಆರು ಕಂಪನಿಗಳು ಸಲ್ಲಿಸಿರುವ ಟೆಂಡರ್ ಕಡತಗಳನ್ನು ಪರಶೀಲನೆ ಮಾಡಲಾಗುತ್ತಿದೆ ಒಂದೊಂದು ಕಂಪನಿ ಸುಮಾರು ಆರು ಸಾವಿರ ಪುಟಗಳ ಟೆಂಡರ್ ಪ್ರತಿಗಳನ್ನು ಸಲ್ಲಿಸಿದೆ ಹೀಗಾಗಿ ಬೆಳಗಾವಿ ಮಹಾನಗರ ಪಾಲಿಕೆಯ ಅಧಿಕಾರಿಗಳು ಕಡತಗಳನ್ನು ಪರಶೀಲನೆ ಮಾಡುತ್ತಿದ್ದಾರೆ
ಇನ್ನೊಂದು ವಾರದಲ್ಲಿ ಕನ್ಸಲ್ಟನ್ಸಿ ಕಂಪನಿ ನೇಮಕವಾದ ಬಳಿಕ ಬೆಳಗಾವಿ ನಗರದಲ್ಲಿ ಸ್ಮಾರ್ಟಸಿಟಿ ಯೋಜನೆಯ ಚಟುವಟಿಕೆಗಳು ಆರಂಭವಾಗಲಿವೆ
