ಬೆಳಗಾವಿ:
ಪೊಲೀಸ್ ಹೆಡ್‍ಕಾನ್ಸ್‍ಟೇಬಲ್ ವಸಂತ ರಾಮಚಂದ್ರ ಅಗಸಿಮಣಿ ಅವರಿಗೆ ಸಿಕ್ಕಿರುವ 500 ರು ಮುಖಬೆಲೆಯ 80 ಸಾವಿರು ನಗದು ಹಣವನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ಮ್ಯಾನೇಜರ್ ಅವರಿಗೆ ಒಪ್ಪಿಸಿ ತಮ್ಮ ಪ್ರಾಮಾಣಿಕತೆಯನ್ನು ಮೆರೆದಿದ್ದಾರೆ.
ನಗರದ ಕಿಲೋಸ್ಕರ ರಸ್ತೆಯಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕಿಗೆ ವಸಂತ ಅಗಸಿಮಣಿ ಅವರು ಹಣ ತೆಗೆದುಕೊಳ್ಳಲು ಹೋಗಿದ್ದರು. ಬ್ಯಾಂಕ್‍ನಲ್ಲಿ ಹೋದಾಗ ಸಾಲಿನಲ್ಲಿ ಬಹಳ ಜನ ನಿಂತಿದ್ದ ಪಕ್ಕದಲ್ಲಿಯೇ ಬ್ಯಾಗ್ ಇತ್ತು. ಯಾರದೋ ಇದ್ದಿರÀಬೇಕು ಎಂದು ತಿಳಿದು ತಮ್ಮ ಹಣ ತೆಗೆದುಕೊಳ್ಳಲು ಸಾಲಿನಲ್ಲಿ ನಿಂತಿದ್ದಾರೆ. ಹಣ ತೆಗೆದುಕೊಂಡ ಬಂದರೂ ಆ ಬ್ಯಾಗ್ ಅಲ್ಲಿಯೇ ಇತ್ತು. ಬ್ಯಾಗ್ ತೆಗೆದುಕೊಂಡು ಎಲ್ಲರನ್ನು ವಿಚಾರಿಸಿದ್ದಾರೆ. ಆದರೆ ಈ ಬ್ಯಾಗ್ ನಂದಲ್ಲ ಎಂದು ಎಲ್ಲರು ಸಷ್ಟಪಡಿಸಿದ್ದರಿಂದ ಬ್ಯಾಗ್ ತೆಗೆದು ನೋಡಿದ್ದಾರೆ. ಅದರಲಿ ಸುಮಾರು 80000 ರು ನಗದು 500 ಮುಖ ಬೆಲೆಯ ಇರುವುದನ್ನು ಕಂಡು ಬ್ಯಾಂಕ್ ಮ್ಯಾನೇಜರ್ ಹತ್ತಿರ ಹೋಗಿ ಕೊಟ್ಟಿದ್ದಾರೆ. ಮ್ಯಾನೇಜರ್ ಅವರನ್ನು ಈ ಹಣವನ್ನು ಎಣಿಕೆ ಮಾಡಿ ಅದರಲ್ಲಿ ಸುಮಾರು 80000 ರು ಇವೆ. ಅಗಸಿಮಣಿ ಅವರ ಪ್ರಾಮಾಣಿಕತೆಗೆ ಬ್ಯಾಂಕ್ ಮ್ಯಾನೇಜರ್ ಸೇರಿದಂತೆ ಎಲ್ಲ ಸಿಬ್ಬಂದಿಗಳು ಅಭಿನಂದಿಸಿದ್ದಾರೆ. ಈ ಹಣವನ್ನು ಬ್ಯಾಂಕ್ ಮ್ಯಾನೇಜರ್ ಇಟ್ಟುಕೊಂಡಿದ್ದು, ಹಣದ ಮಾಲೀಕರು ಬಂದ ಮೇಲೆ ಕೊಡಲಾಗುವುದು ಎಂದು ತಿಳಿಸಿದ್ದಾರೆ.
Check Also
ಗುರುವಾರ ಬೆಳಗಾವಿಗೆ ಕೇಂದ್ರ ರೇಲ್ವೆ ಸಚಿವ ಸೋಮಣ್ಣ
ಬೆಳಗಾವಿ -ಗುರುವಾರ ದಿನಾಂಕ 14 ರಂದು ಕೇಂದ್ರದ ರಾಜ್ಯ ರೇಲ್ವೆ ಸಚಿವ ವಿ.ಸೋಮಣ್ಣ ಅವರು ಬೆಳಗಾವಿಗೆ ಬರಲಿದ್ದಾರೆ. ಬೆಳಗ್ಗೆ 9 …