ಬೆಳಗಾವಿಯ ಸಬ್ ರಜಿಸ್ಟಾರ್ ಕಚೇರಿ, ಬಂದ್…ಬಂದ್..ಬಂದ್ ….!!!!

ಇಬ್ಬರು ಅಧಿಕಾರಿಗಳ ಜಗಳದಲ್ಲಿ ಹಳ್ಳ ಹಿಡಿದ ,ಬೆಳಗಾವಿಯ ಸಬ್ ರಿಜಿಸ್ಟ್ರಾರ್ ಕಚೇರಿ…..!!!

ಬೆಳಗಾವಿ- ಬೆಳಗಾವಿ ಸಬ್ ರಿಜಿಸ್ಟರ್ ಕಚೇರಿಯಲ್ಲಿ ಟೆಜ್ನಿಕಲ್ ಪ್ರಬ್ಲಂ ಅಂತೇ ಅದಕ್ಕಾಗಿ ಮಂಗಳವಾರ ಯಾವುದೇ ಸೇಲ್ ಡೀಡ್ ಆಗಲಿಲ್ಲ ,ಬುದ್ಧವಾರ ಕ್ರಿಸ್ ಮಸ್ ರಜೆ ಇಂದು ಗುರುವಾರವೂ ಟೆಕ್ನಿಕಲ್ ಪ್ರಾಬ್ಲಂ ನಾಳೆಯೂ ಸಮಸ್ಯೆ ಬಗೆಹರಿಯುವದಿಲ್ಲ ಸೇಲ್ ಡೀಡ್ ಮಾಡಬೇಕಾದ್ರೆ ಸೋಮವಾರ ಬನ್ನೀ ಅಂತೀದ್ದಾರೆ ಕಚೇರಿಯ ಸಿಬ್ಬಂಧಿ

ಇದು ರಾಜ್ಯದ ಎರಡನೇಯ ರಾಜಧಾನಿ,ರಾಜ್ಯದಲ್ಲಿಯೇ ಅತೀ ಹೆಚ್ಚು ಆದಾಯ ನೀಡುವ ಬೆಳಗಾವಿಯ ಸಬ್ ರೆಜಿಸ್ಟರ್ ಕಚೇರಿಯ ಕಹಾನಿ….

ಅಕ್ಟೋಬರ್ ತಿಂಗಳಲ್ಲಿ ಟೆಕ್ನಿಕಲ್ ಪ್ರಾಬ್ಲಂ ಅಂತಾ ಎಂಟು ದಿನ ಬಂದ್ ಆಗಿತ್ತು ನವ್ಹೆಂಬರ್ ತಿಂಗಳಲ್ಲಿ ಸೇಲ್ ಡೀಡ್ ನಾಪತ್ತೆಯಾಗಿ ಹತ್ತು ದಿನ ಬೆಳಗಾವಿಯಲ್ಲಿ ಸೇಲ್ ಡೀಡ್ ಹತ್ತು ದಿನ ಬಂದ್ ಆಗಿತ್ತು ಈಗ ಮಂಗಳವಾರದಿಂದ ಸೇಲ್ ಡೀಡ್ ಬಂದ್ ಆಗಿದೆ ಜಮೀನು ಖರೀಧಿ ,ಮನೆ ಖರೀಧಿಗೆ ಬಂದವರು ದಿನನಿತ್ಯ ಕಚೇರಿಗೆ ಬಂದು ವಾಪಸ್ ಆಗುತ್ತಿದ್ದಾರೆ.

ಬೆಳಗಾವಿಯ ಸಬ್ ರಜಿಸ್ಟಾರ್ ಕಚೇರಿಯಲ್ಲಿ ಗಿರೀಶಚಂದ್ರ ಮತ್ತು ವಿಷ್ಣುತೀರ್ಥ ಎಂಬ ಇಬ್ಬರು ಸಬ್ ರಜಿಸ್ಟಾರ್ ಅಧಿಕಾರಿಗಳಿದ್ದಾರೆ .ಇಬ್ಬರ ನಡುವೆ ಜಗಳ ಮುಂದುವರೆದಿದೆ ಇಬ್ಬರು ಅಧಿಕಾರಿಗಳ ನಡುವೆ ನಡೆಯುತ್ತಿರುವ ಕಿತ್ತಾಟವೇ ಬೆಳಗಾವಿಯ ಸಬ್ ರಜಿಸ್ಟಾರ್ ಕಚೇರಿಯ ದೊಡ್ಡ ಪ್ರಾಬ್ಲಂ ಅದಕ್ಕಾಗಿಯೇ ಈ ಕಚೇರಿಯಲ್ಲಿ ಪದೇ ಪದೇ ಪ್ರಾಬ್ಲಂ ಆಗಿ ಕಚೇರಿಯ ಕೆಲಸಗಳೇ ನಿಂತರೂ ಹಿರಿಯ ಅಧಿಕಾರಿಗಳು ಈಬಗ್ಗೆ ಗಮನ ಹರಿಸುವ ಮನಸ್ಸು ಮಾಡದೇ ಇರುವದು ದುರಂತ

ತಿಂಗಳಲ್ಲಿ ಹತ್ತು ದಿನ ಸೇಲ್ ಡೀಡ್ ಬಂದ್ ಆದ್ರೆ ಹೇಗೆ.? ನೂರಾರು ಜನ ದಿನನಿತ್ಯ ಕಚೇರಿಗೆ ಬಂದು ವಾಪಸ್ ಹೋಗುತ್ತಿದ್ದು ಭೆಳಗಾವಿಯ ಸಬ್ ರಜಿಸ್ಟಾರ್ ಕಚೇರಿಯಲ್ಲಿ ಹಿಡಿದಿರುವ ಗ್ರಹಣ ಬಿಡಿಸಲು ಜಿಲ್ಲಾಧಿಕಾರಿ ಬೊಮ್ಮನಹಳ್ಳಿ ಮಧ್ಯಸ್ಥಿಕೆ ವಹಿಸುವದು ಅತೀ ಜರೂರು ಮತ್ತು ಅನಿವಾರ್ಯವಾಗಿದೆ.

ನಾಳೆ ನಡೆಯಲಿರುವ ಕೆಡಿಪಿ ಸಭೆಯಲ್ಲಿ ಬೆಳಗಾವಿಯ ಶಾಸಕರು ಈಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಅವರ ಗಮನಕ್ಕೆ ತರುವ ಮೂಲಕ ಬೆಳಗಾವಿ ಸಬ್ ರಿಜಿಸ್ಟಾರ್ ಕಚೇರಿಯನ್ನು ಕ್ಲೀನ್ ಮಾಡಬೇಕಾಗಿದೆ‌

Check Also

ನಿಶ್ಚಿತವಾಗಿದ್ದ ಮದುವೆ ರದ್ದು ಯುವಕನ ಆತ್ಮಹತ್ಯೆ

ಬೆಳಗಾವಿ-ನಿಶ್ಚಿತಯಗೊಂಡ ಮದುವೆ ರದ್ದಾಗಿ, ಸಂಬಂಧಗಳೆಲ್ಲವೂ ಮುರಿದು ಹೋದಕಾರಣ ಯುವಕ ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿ ತಾಲೂಕಿನ ಕೆಕೆಕೊಪ್ಪ ಗ್ರಾಮದಲ್ಲಿ ನಡೆದಿದೆ. …

Leave a Reply

Your email address will not be published. Required fields are marked *