ಎಂ ಈ ಎಸ್ ನಾಯಕರನ್ನು ಗಡಿಯಲ್ಲಿ ನಿಲ್ಲಿಸಿ ಗುಂಡು ಹೊಡೇಯಿರಿ- ,ಬೀಮಾ ಶಂಕರ ಪಾಟೀಲ
ಬೆಳಗಾವಿ – ಕಳೆದ ಆರವತ್ತು ನಾಲ್ಕು ವರ್ಷದಿಂದ ಬೆಳಗಾವಿ ಗಡಿಯಲ್ಲಿ ಸರ್ಕಾರಿ ಆಸ್ತಿಯನ್ನು ಹಾಳು ಮಾಡಿ ಕನ್ನಡಿಗರಿಗೆ ಮುಳ್ಳಿನಂತೆ ಚುಚ್ಚುತ್ತಿರುವ ಮಹಾರಾಷ್ಟ್ರ ಏಕೀಕರಣ ಸಮೀತಿಯ ನಾಯಕರನ್ನು ಗಡಿಯಲ್ಲಿ ನಿಲ್ಲಿಸಿ ಗುಂಡು ಹೊಡೆಯಿರಿ ಅದಕ್ಕೆ ನನ್ನ ಬೆಂಬಲ ಇದೆ ಎಂದು ಕರ್ನಾಟಕ ನವನಿರ್ಮಾಣ ಸೇನೆಯ ರಾಜ್ಯಾಧ್ಯಕ್ಷ ಭೀಮಾಶಂಕರ ಪಾಟೀಲ ಫರ್ಮಾನು ಹೊರಡಿಸಿದ್ದಾರೆ.
ಬೆಳಗಾವಿಯ ಪಂಚತಾರಾ ಹೊಟೇಲ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಭೀಮಾಶಂಕರ ಪಾಟೀಲ ಬೆಳಗಾವಿಯ ಕೇಂದ್ರ ಸಚಿವ ಸುರೇಶ್ ಅಂಗಡಿ ಸರ್ಕಾರಿ ಆಸ್ತಿ ಪಾಸ್ತಿ ಹಾಳು ಮಾಡುವವರನ್ನು ಗುಂಡಿಕ್ಕಿ ಎಂದು ಹೇಳಿದ್ದಾರೆ, ಕಳೆದ ಅರವತ್ತು ನಾಲ್ಕು ವರ್ಷದಿಂದ ಗಡಿಯಲ್ಲಿ ಸರ್ಕಾರಿ ಆಸ್ತಿ ಪಾಸ್ತಿ ಹಾಳು ಮಾಡಿ ರಕ್ಕಸಕೊಪ್ಪ ಜಲಾಶಯದಲ್ಲಿ ವಿಷ ಬೆರೆಸಿ ಗಡಿನಾಡು ಕನ್ನಡಿಗರನ್ನು ಸಾಮೂಹಿಕವಾಗಿ ಹತ್ಯೆ ಮಾಡಲು ಸಂಚು ರೂಪಿಸಿದ್ದ ಎಂಈಎಸ್ ನಾಯಕರಿಗೆ ಗುಂಡು ಹಾರಿಸಿ ಎಂದು ಹೇಳಿಕೆ ನೀಡುವ ತಾಕತ್ತು ಸುರೇಶ ಅಂಗಡಿ ಅವರಿಗೆ ಇದೆಯಾ.? ಎಂದು ಸವಾಲು ಹಾಕಿರುವ ಭೀಮಾಶಂಕರ ಪಾಟೀಲ ಎಂ ಎಈ ಎಸ್ ನಾಯಕರನ್ನು ಗಡಿಯಲ್ಲಿ ನಿಲ್ಲಿಸಿ ಗುಂಡು ಹಾರಿಸಬೇಕೆಂದು ಪಂಚತಾರಾ ಹೊಟೇಲ್ ನಲ್ಲಿ ಹೇಳಿಕೆ ನೀಡಿದ್ದಾರೆ
ಎಂ ಈ ಎಸ್ ಸಂಘಟನೆ ಗಡಿಯಲ್ಲಿ ವಿಷಬೀಜ ಬಿತ್ತುತ್ತಿದೆ ,ಗಡಿ ಕನ್ನಡಿಗರಿಗೆ ಮುಳ್ಳಿನಂತೆ ಚುಚ್ಚುತ್ತಿದೆ. ಈ ಮುಳ್ಳನ್ನು ಶಾಶ್ವತವಾಗಿ ಕಿತ್ತೇಸೆಯುವ ಧೈರ್ಯ ಬೆಳಗಾವಿ ಜನಪ್ರತಿನಿಧಿಗಳಿಗೆ ಇದೆಯಾ? ಎಂದು ಪ್ರಶ್ನೆ ಮಾಡಿರುವ ಭೀಮಾಶಂಕರ ಗಡಿಯನ್ನು ಹೇಗೆ ಕಾಯಬೇಕು ಗಡಿಯ ಬಗ್ಗೆ ಯಾವ ರೀತಿ ಕಾಳಜಿ ವಹಿಸಬೇಕು ಅನ್ನೋದನ್ನು ಮಹಾರಾಷ್ಟ್ರ ಸರ್ಕಾರಗಳಿಂದ ನೋಡಿ ಕಲಿಯಬೇಕು , ಕರ್ನಾಟಕ ಸರ್ಕಾರ ಸುಮ್ಮನಿದ್ದರೆ ಬೆಳಗಾವಿ ಗಡಿ ವಿಚಾರದಲ್ಲಿ ನಾಯಿ ನರಿಗಳು ಮಾತಾಡುತ್ತವೆ ಎಂದು ಭೀಮಾಶಂಕರ ಕರ್ನಾಟಕ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.